Asianet Suvarna News Asianet Suvarna News

90 ರ ದಶಕದ ಮಕ್ಕಳ ಹುಟ್ಟುಹಬ್ಬ ಆಚರಣೆ ಹೇಗಿರುತ್ತಿತ್ತು : ನೆನಪುಗಳ ಬಿಚ್ಚಿಟ್ಟ IAS ಅಧಿಕಾರಿ

  • ಹೇಗಿತ್ತು 90ರ ದಶಕದ ಬರ್ತ್‌ಡೇ ಪಾರ್ಟಿ
  • ಫೋಟೋ ಹಂಚಿಕೊಂಡ ಐಎಎಸ್‌ ಅಧಿಕಾರಿ
  • ನೆನಪುಗಳ ಬಿಚ್ಚಿಟ್ಟ ನೆಟ್ಟಿಗರು
how was 90s kids birthday IAS Officer shared memory akb
Author
Bangalore, First Published Apr 25, 2022, 5:54 PM IST | Last Updated Apr 25, 2022, 5:54 PM IST

90 ರ ದಶಕದಲ್ಲಿ ಮನೆಯಲ್ಲಿ ಮಕ್ಕಳ ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಿದ್ದರು ಎಂಬ ಬಗ್ಗೆ ಐಎಎಸ್‌ ಅಧಿಕಾರಿಯೊಬ್ಬರು ನೆನಪುಗಳನ್ನು ಹಂಚಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೇ ಹಲವರನ್ನು ತಮ್ಮ ಗತಕಾಲದ ನೆನಪುಗಳಿಗೆ ತಳ್ಳಿದೆ. ಮನೆಯಲ್ಲಿ ಸರಳವಾದ ಹುಟ್ಟುಹಬ್ಬದ  ಹೊರತಾಗಿ, ಅಂದಿನ ಹುಟ್ಟುಹಬ್ಬದ ಪಾರ್ಟಿಗಳು ಸಮೋಸಾ, ಗುಲಾಬ್ ಜಾಮೂನ್, ಬಿಸ್ಕತ್ತುಗಳು ಮತ್ತು ಚಿಪ್ಸ್‌ ಅನ್ನು ಒಳಗೊಂಡಿರುವ ತಿಂಡಿಗಳ ಸಂಯೋಜನೆಗೆ ಹೆಸರುವಾಸಿಯಾಗಿದ್ದವು.

IAS ಅಧಿಕಾರಿ ಅವನೀಶ್ ಶರಣ್ ಈ ತಿಂಡಿಗಳ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ನೀವು 90 ರ ದಶಕದ ಮಕ್ಕಳಾಗಿದ್ದಲ್ಲಿ ಅದು ನಿಮ್ಮನ್ನು ಹಳೆಯ ನೆನಪುಗಳಿಗೆ ಕರೆದೊಯ್ಯದೇ ಇರದು. 80-90 ರ ದಶಕದ ಮಕ್ಕಳ ಹುಟ್ಟುಹಬ್ಬದ ಪಾರ್ಟಿಯ ಸ್ನ್ಯಾಕ್ಸ್ ಎಂದು ಬರೆದು ಐಎಎಸ್‌ ಅಧಿಕಾರಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.  ಅವನೀಶ್ ಶರಣ್ ಅವರು ಛತ್ತೀಸ್‌ಗಢ ಕೇಡರ್‌ನ 2009 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. 

ಈ ಫೋಟೋ ಟ್ವಿಟರ್‌ನಲ್ಲಿ ವೈರಲ್‌ ಆಗಿದ್ದು, 16,000 ಕ್ಕೂ ಹೆಚ್ಚು ಜನ ಆ ಫೋಟೋವನ್ನು ಇಷ್ಟ ಪಟ್ಟಿದ್ದಾರೆ. ಬಳಕೆದಾರರು ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಅಲ್ಲದೇ ಆ ಸಮಯದಲ್ಲಿ ಏನೇನು ಗಿಫ್ಟ್‌ಗಳು ಸಿಗುತ್ತಿದ್ದವು ಎಂಬುದನ್ನು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಸ್ಕೆಚ್ ಪೆನ್, ಪೆನ್ಸಿಲ್ ಬಣ್ಣಗಳು, ಪೆನ್ಸಿಲ್ ಬಾಕ್ಸ್ ಎಂದು ಒಬ್ಬರು ಬರೆದಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಸ್ಟೆಪ್ಸ್ ಹಾಕಿದ IAS ಅಧಿಕಾರಿ, ವೈರಲ್ ಆಯ್ತು ಡಾನ್ಸ್!

ನಾನಿರುವ ಸ್ಥಳದಲ್ಲಿ ಸಮೋಸಾ ಮತ್ತು ಗುಲಾಬ್ ಜಾಮೂನ್ ಫೇಮಸ್ ಆಗಿದ್ದವು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅದೇ ತಟ್ಟೆಯಲ್ಲಿ ಒಂದು ತುಂಡು ಪೇಸ್ಟ್ರಿ ಅಂತಿಮವಾಗಿ ಚಿಪ್ಸ್‌, ಕುಕೀ ಮತ್ತು ಸಮೋಸಾದ ಮಿಶ್ರಣ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈ ಪೋಸ್ಟ್‌ಗೆ ನೆಟ್ಟಿಗರು ಹಾಕಿದ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಐಎಎಸ್‌ ಅಧಿಕಾರಿ ಶರಣ್‌ ಹುಟ್ಟುಹಬ್ಬಕ್ಕೆ ಉಡುಗೊರೆಯನ್ನು ಮುಂಚಿತವಾಗಿ ಸ್ನೇಹಿತರೊಂದಿಗೆ ಮಾತನಾಡಿ ನಿರ್ಧರಿಸಲಾಗಿದೆ, ಆದ್ದರಿಂದ ಎಲ್ಲಾ ಸ್ನೇಹಿತರು ವಿಭಿನ್ನ ಉಡುಗೊರೆಗಳನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ IAS ಅಧಿಕಾರಿ, ಮಾದರಿ
 

ಕೆಲವು ಬಳಕೆದಾರರು ಉತ್ತಮ ಸ್ನೇಹಿತನಿಗೆ ಶಾಲೆಯಲ್ಲಿ ಹೆಚ್ಚುವರಿ ಮಿಠಾಯಿಗಳನ್ನು ನೀಡುವ ಬಗ್ಗೆ ಮತ್ತು ಮನೆಯಲ್ಲಿ ಹುಟ್ಟುಹಬ್ಬದ ಸಂತೋಷ ಕೂಟದ ಡ್ರೆಸ್ಸಿಂಗ್ ಬಗ್ಗೆ ಮಾತನಾಡಿದರು. ಇತರರು ಬಂದವರಿಗೆ ನೀಡುತ್ತಿದ್ದ ಪಾನೀಯ ರಸ್ನಾದ ಬಗ್ಗೆ ಹೈಲೇಟ್ ಮಾಡಿದರು. 90ರ ದಶಕವು  ನೆಟ್‌ಫ್ಲಿಕ್ಸ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ ಮುಂತಾದ ಸಾಮಾಜಿಕ ಜಾಲತಾಣಗಳು ಅಷ್ಟಾಗಿ ಪ್ರಚಲಿತದಲ್ಲಿಲ್ಲದ ಕಾಲವಾದರಿಂದ ಕೆಲವು ಉತ್ತಮ ಹಳೆಯ ದೂರದರ್ಶನ ಕಾರ್ಯಕ್ರಮಗಳು 90 ರ ದಶಕದ ಮಕ್ಕಳ ಮನದಲ್ಲಿ ಜನಪ್ರಿಯವಾಗಿವೆ. ಸಿಟ್‌ಕಾಮ್‌ಗಳಿಂದ ಹಿಡಿದು ಆಟದ ಪ್ರದರ್ಶನಗಳವರೆಗೆ, 90ರ ದಶಕದಲ್ಲಿ ಹೆಚ್ಚು ಗಮನಾರ್ಹವಾದ ವಿಚಾರಗಳನ್ನು ಚರ್ಚಿಸಲು ಈ ಫೋಟೋ ಕಾರಣವಾಯಿತು.

ಈಗ ಪ್ರತಿಯೊಬ್ಬರಲ್ಲೂ ಮೊಬೈಲ್ ಫೋನ್‌ಗಳಿದ್ದವು. ಆದರೆ 90 ರ ದಶಕದಲ್ಲಿ ಮನೆಯಲ್ಲಿ ಲ್ಯಾಂಡ್‌ ಫೋನ್‌ಗಳಿದ್ದರೆ ಅದೇ ದೊಡ್ಡ ವಿಚಾರ ಲ್ಯಾಂಡ್‌ಫೋನ್ ಟಿವಿ ಹೊಂದಿದವರೇ ಊರಿಗೆ ಶ್ರೀಮಂತರು ಎಂಬ ಕಾಲವಿತ್ತು. ಅಲ್ಲದೇ ಸಮಾರಂಭಗಳ ಫೋಟೋ ತೆಗೆಯಲು ಈಗಿನಂತೆ ಎಲ್ಲರ ಕೈಯಲ್ಲಿ ಮೊಬೈಲ್‌ ಫೋನ್‌ಗಳಿರಲಿಲ್ಲ. ಕ್ಯಾಮರಾಗಳನ್ನೇ ಆಶ್ರಯಿಸಲಾಗುತ್ತಿತ್ತು. 
 

Latest Videos
Follow Us:
Download App:
  • android
  • ios