ಕೇವಲ 1200 ಕುಟುಂಬಗಳಿರುವ ಭಾರತದ ಈ ಹಳ್ಳಿಯು ಏಷ್ಯಾದ ಶ್ರೀಮಂತ ಗ್ರಾಮವಾಗಿದ್ದು ಹೇಗೆ?

ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮದ ಕಥೆ, ಇಲ್ಲಿ ಪ್ರಪಂಚದ ಎಲ್ಲಾ ಬ್ಯಾಂಕ್‌ಗಳು ತಮ್ಮ ಶಾಖೆಯನ್ನು ತೆರೆಯಲು ಬಯಸುತ್ತವೆ. ಈ ಗ್ರಾಮವು ದೇಶದ ಪ್ರಮುಖ ಬ್ಯಾಂಕ್‌ಗಳ 17 ಶಾಖೆಗಳನ್ನು ಹೊಂದಿದೆ.

 

How Madhapar In Gujarat became a Asia's Richest Village Know Its Prosperity Story gow

ಕಛ್ (ಆ.22): ಭಾರತದಲ್ಲಿ ದಶಕಗಳಿಂದ ಗ್ರಾಮಗಳು ನಿರ್ಜನವಾಗುತ್ತಿವೆ ಮತ್ತು ನಗರಗಳು ಬೆಳೆದು ಜನನಿಬಿಡವಾಗುತ್ತಿವೆ. ಬಡತನ ಮತ್ತು ನಿರುದ್ಯೋಗದಿಂದ ಮುಕ್ತಿ ಪಡೆಯಲು ಯುವಕರು ನಗರಗಳತ್ತ ಮುಖ ಮಾಡುತ್ತಿದ್ದಾರೆ ಆದರೆ ಭಾರತದಲ್ಲಿ ಒಂದು ಹಳ್ಳಿ ಇದೆ, ಇಲ್ಲಿ ವಿಶ್ವದ ಪ್ರಮುಖ ಬ್ಯಾಂಕ್‌ಗಳು ತಮ್ಮ ಶಾಖೆಗಳನ್ನು ತೆರೆಯಲು ಪೈಪೋಟಿ ನಡೆಸುತ್ತಿವೆ. ಏಷ್ಯಾದ ಅತ್ಯಂತ ಶ್ರೀಮಂತವಾಗಿರುವ ಈ ಗ್ರಾಮದಲ್ಲಿ 7000 ಕೋಟಿ ರೂಪಾಯಿಗಳ ಸ್ಥಿರ ಠೇವಣಿಗಳನ್ನು ಗ್ರಾಮಸ್ಥರು ಮಾಡಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಈ ರೀತಿಯ ಗ್ರಾಮವೊಂದಿದೆ ಎಂಬುದು ನಿಮಗೆ ಗೊತ್ತಿತ್ತಾ?

ಗುಜರಾತ್‌ನ ಕಚ್‌ ಜಿಲ್ಲೆಯಯಲ್ಲಿರುವ ಈ ಗ್ರಾಮವು  ದೇಶ ಮಾತ್ರವಲ್ಲದೆ ಪ್ರಪಂಚವು ಕೂಡ ತಿಳಿದಿರುವ ಪ್ರಸಿದ್ಧ ಸ್ಥಳವಾಗಿದೆ.  ಇತ್ತೀಚಿನ ದಿನಗಳಲ್ಲಿ ಈ ಗ್ರಾಮವು ತುಂಬಾ ಸುದ್ದಿಯಲ್ಲಿದೆ. ಈ ಗ್ರಾಮವು ತನ್ನ ಸಮೃದ್ಧಿ ಮತ್ತು ಭೂಮಿಗೆ ಸಂಬಂಧಿಸಿದ ಜನರಿಂದಾಗಿ ಹೆಸರುವಾಸಿಯಾಗಿದೆ. 32 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಮಾಧಾಪರ್ ಗ್ರಾಮವು ಒಮ್ಮೆ ಕಚ್ ಜಿಲ್ಲೆಯ ಸಾಮಾನ್ಯ ಗ್ರಾಮವಾಗಿತ್ತು. ಆದರೆ ಭುಜ್‌ನ ಹೊರವಲಯದಲ್ಲಿರುವ ಈ ಗ್ರಾಮವನ್ನು ಇಲ್ಲಿನ ಜನರು ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವನ್ನಾಗಿ ಮಾಡಿದ್ದಾರೆ. ಈ ಗ್ರಾಮದಲ್ಲಿ ಸುಮಾರು 8 ಸಾವಿರ ಮನೆಗಳಿವೆ.

ಸ್ಲೀಪರ್‌ನಿಂದ AC ಕ್ಲಾಸ್‌ಗೆ ಉಚಿತ ಅಪ್‌ಗ್ರೇಡ್, ರೈಲ್ವೆ ಇಲಾಖೆಯ ಈ ನಿಯಮ ನಿಮಗೆ ತಿಳಿದಿರಲಿ

ಈ ಗ್ರಾಮವು ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವಾಗಿ ಮಾರ್ಪಟ್ಟಿದ್ದು ಹೇಗೆ?: ಕೆಲವು ದಶಕಗಳ ಹಿಂದೆ ಸಾಮಾನ್ಯ ಹಳ್ಳಿಗಳಂತೆ ಇಲ್ಲಿಯೂ ನಿರುದ್ಯೋಗ ತಾಂಡವವಾಡಿತ್ತು. ಪಟೇಲ್ ಪ್ರಾಬಲ್ಯವಿರುವ ಈ ಗ್ರಾಮದ ಜನರು ವ್ಯಾಪಾರವನ್ನು ಅವಲಂಬಿಸಿದ್ದಾರೆ. ಸುಮಾರು 30-32 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದ ಅನೇಕ ಜನರು ಉದ್ಯೋಗ ಅಥವಾ ವ್ಯವಹಾರಕ್ಕಾಗಿ ವಿದೇಶಗಳಿಗೆ ಹೋದರು. ಕೆಲವರು ಅಲ್ಲಿಯೇ ನೆಲೆಸಿದರು ಮತ್ತು ಅವರ ವ್ಯವಹಾರವು ಚೆನ್ನಾಗಿ ನಡೆಯಿತು. ಆದರೆ ಇಲ್ಲಿಂದ ಉದ್ಯೋಗ ಅರಸಿ ಹೋದ  ಜನ ತಮ್ಮ ಹಳ್ಳಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಈ ಗ್ರಾಮದ ಯಾವುದೇ ವ್ಯಕ್ತಿ ಪ್ರಪಂಚದ ಯಾವುದೇ ಮೂಲೆಗೆ ಹೋದರೂ  ತನ್ನ ಗ್ರಾಮದೊಂದಿಗೆ ಸಂಪರ್ಕವನ್ನು ಕಡಿದುಕೊಂಡಿಲ್ಲ ಎಂದು  ಗ್ರಾಮಸ್ಥರು ಹೇಳುತ್ತಾರೆ. ಇಲ್ಲಿನ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಅವನ ಅಥವಾ ಅವನ ಕುಟುಂಬದ ಸದ್ಯಸ್ಯರ ಖಾತೆಗಳು ಇದ್ದೇ ಇರುತ್ತವೆ. ಆತ ತನ್ನ ಉಳಿತಾಯದ ಗಣನೀಯ ಭಾಗವನ್ನು ಮಾಧಾಪರ್ ಗ್ರಾಮದ ಬ್ಯಾಂಕ್‌ಗಳಲ್ಲಿಯೇ ಇಡುತ್ತಾನೆ. ಬ್ಯಾಂಕ್‌ಗಳು ಗ್ರಾಮದಲ್ಲಿ ತೆರೆದಿದ್ದರಿಂದ ಈ ಗ್ರಾಮದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದವು. ಉದ್ಯೋಗಾವಕಾಶಗಳು ಲಭ್ಯವಾದವು. ಈಗ ಈ ಗ್ರಾಮವು ನಗರಗಳೊಂದಿಗೆ ಸ್ಪರ್ಧೆಯಲ್ಲಿದೆ.

ಎಣ್ಣೆ ಪ್ರಿಯರಿಗೆ ಸಂತಸದ ಸುದ್ದಿ, ಸೆ.1ರಿಂದ ಮದ್ಯದ ದರ ಇಳಿಸಿದ ಕರ್ನಾಟಕ ಸರ್ಕಾರ!

ಇಲ್ಲಿಯವರೆಗೆ 17 ಬ್ಯಾಂಕ್‌ಗಳ ಶಾಖೆ ಇಲ್ಲಿದೆ: ಮಾಧಾಪರ್ ಗ್ರಾಮದಲ್ಲಿ ವಿವಿಧ 17 ಬ್ಯಾಂಕ್‌ಗಳ ಶಾಖೆಗಳಿವೆ. HDFC, ICICI, SBI, PNB, ಆಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸೇರಿದಂತೆ ಎಲ್ಲಾ ಪ್ರಮುಖ ಬ್ಯಾಂಕ್‌ಗಳ ಶಾಖೆಗಳು ಇಲ್ಲಿವೆ. ವರದಿ  ಪ್ರಕಾರ, ಗ್ರಾಮದಲ್ಲಿ ತೆರೆದಿರುವ ಬ್ಯಾಂಕ್‌ಗಳ ಶಾಖೆಗಳಲ್ಲಿ ಇಲ್ಲಿನ ಜನರು 7000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು FD ಇಟ್ಟಿದ್ದಾರೆ. ಗ್ರಾಮದಲ್ಲಿ ತೆರೆದಿರುವ ಈ ಬ್ಯಾಂಕ್‌ಗಳ ವಾರ್ಷಿಕ ವಹಿವಾಟು ಅನೇಕ ಮೆಟ್ರೋ ನಗರಗಳ ಬ್ಯಾಂಕ್‌ಗಳ ವ್ಯವಹಾರಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ ಇಲ್ಲಿ ಸರಾಸರಿ ಒಬ್ಬ ವ್ಯಕ್ತಿ 15-20 ಲಕ್ಷ ರೂಪಾಯಿಗಳನ್ನು FD ಮಾಡಿದ್ದಾನೆ.

1200 ಕುಟುಂಬಗಳು ಇಲ್ಲಿ NRI: ಕಚ್ ಜಿಲ್ಲೆಯ ಮಾಧಾಪರ್ ಗ್ರಾಮದಲ್ಲಿ ಸುಮಾರು 1200 NRI ಕುಟುಂಬಗಳಿವೆ. ಇವರಲ್ಲಿ ಹೆಚ್ಚಿನವರು ಆಫ್ರಿಕನ್ ದೇಶಗಳಲ್ಲಿದ್ದಾರೆ. ಈ ಗ್ರಾಮದ ಎಲ್ಲಾ NRI ಜನರು ಮಧ್ಯ ಆಫ್ರಿಕಾದಲ್ಲಿ ನಿರ್ಮಾಣ ವ್ಯವಹಾರದಲ್ಲಿ ಗಣನೀಯ ಪ್ರಾಬಲ್ಯವನ್ನು ಹೊಂದಿದ್ದಾರೆ. ಇಲ್ಲಿ ಡಜನ್‌ಗಟ್ಟಲೆ ದೊಡ್ಡ ಉದ್ಯಮಿಗಳಿದ್ದಾರೆ. ಅನೇಕ ಕುಟುಂಬಗಳು UK, ಆಸ್ಟ್ರೇಲಿಯಾ, ಅಮೆರಿಕ ಮತ್ತು ನ್ಯೂಜಿಲೆಂಡ್‌ನಲ್ಲಿಯೂ ವಾಸಿಸುತ್ತಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಊರಿನಲ್ಲಿ ಒಂದು ಖಾತೆಯನ್ನು ಹೊಂದಿಯೇ ಇದ್ದಾರೆ.

Latest Videos
Follow Us:
Download App:
  • android
  • ios