ಆರೋಪಿ ಎಂದಾಕ್ಷಣ ಅಂಥವರ ಮನೆ ಹೇಗೆ ಒಡೆಯಲಾದೀತು? ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಆಕ್ರೋಶ

ಗಂಭೀರ ಪ್ರಕರಣದ ಆರೋಪಿಗಳ ಮನೆಗೆ ಬುಲ್ಡೋಜರ್‌ ನುಗ್ಗಿಸಿ ಧ್ವಂಸ ಮಾಡುವ ಕೆಲವೊಂದು ರಾಜ್ಯ ಸರ್ಕಾರಗಳ ‘ಬುಲ್ಡೋಜರ್‌ ನ್ಯಾಯ’ ನೀತಿಗೆ ಸುಪ್ರೀಂಕೋರ್ಟ್‌ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

How is the house of accused person demolished as soon as he is accused Supreme court outrage over bulldozer justice akb

ನವದೆಹಲಿ: ಗಂಭೀರ ಪ್ರಕರಣದ ಆರೋಪಿಗಳ ಮನೆಗೆ ಬುಲ್ಡೋಜರ್‌ ನುಗ್ಗಿಸಿ ಧ್ವಂಸ ಮಾಡುವ ಕೆಲವೊಂದು ರಾಜ್ಯ ಸರ್ಕಾರಗಳ ‘ಬುಲ್ಡೋಜರ್‌ ನ್ಯಾಯ’ ನೀತಿಗೆ ಸುಪ್ರೀಂಕೋರ್ಟ್‌ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕ್ರಿಮಿನಲ್‌ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಆರೋಪಿಯಾಗಿದ್ದಾನೆ ಎಂದು ಆತನ ಮನೆಯನ್ನು ಹೇಗೆ ಒಡೆಯಲಾದೀತು? ಒಂದು ವೇಳೆ, ಆತ/ಆಕೆ ಅಪರಾಧಿಯೇ ಆಗಿದ್ದರೂ ಮನೆ ಧ್ವಂಸಕ್ಕೂ ಮುನ್ನ ನಿಯಮ ಪಾಲಿಸಬೇಕು ಎಂದು ಹೇಳಿದೆ.

ಇದೇ ವೇಳೆ, ತಾನು ಯಾವುದೇ ಅನಧಿಕೃತ ಕಟ್ಟಡಗಳಿಗೆ ರಕ್ಷಣೆ ಒದಗಿಸುವುದಿಲ್ಲ. ಕಟ್ಟಡ ಧ್ವಂಸ ವಿಚಾರವಾಗಿ ಮಾರ್ಗಸೂಚಿ ತರುವುದಾಗಿ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್‌ ಅವರಿದ್ದ ಪೀಠ ಹೇಳಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್‌ ದವೆ, ದೇಶಾದ್ಯಂತ ಬುಲ್ಡೋಜರ್‌ ನ್ಯಾಯವನ್ನು ಪಾಲಿಸಲಾಗುತ್ತಿದೆ. ಈ ಸಂಬಂಧ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಕೋರಿದರು.

ಅತ್ಯಾಚಾರಕ್ಕೊಳಗಾದ ಬಾಲಕಿ ತಾಯಿಗೆ ಯೋಗಿ ಭರವಸೆ, ಆರೋಪಿ ಶಾಪ್ ಮೇಲೆ ನುಗ್ಗಿದ ಬುಲ್ಡೋಜರ್!

ಇದೇ ವೇಳೆ, ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾದ ಕಾರಣ ಪ್ರಕರಣದ ಆರೋಪಿಯ ಯಾವುದೇ ಸ್ಥಿರಾಸ್ತಿಯನ್ನು ನೆಲಸಮಗೊಳಿಸಲು ಆಗದು. ಆ ಕಟ್ಟಡ ಅಕ್ರಮವಾಗಿದ್ದರೆ ಮಾತ್ರ ಆ ರೀತಿ ಕಾರ್ಯಾಚರಣೆ ನಡೆಸಬಹುದು. ಆದರೆ ಈ ಪ್ರಕರಣದಲ್ಲಿ ವಾಸ್ತವಾಂಶವನ್ನು ತಿರುಚಲಾಗಿದೆ ಎಂದರು. ಅಕ್ರಮ ಕಟ್ಟಡವಾಗಿದ್ದರೆ, ಪರವಾಗಿಲ್ಲ. ಆದರೆ ಈ ವಿಚಾರವನ್ನು ಮತ್ತಷ್ಟು ಸರಳಗೊಳಿಸಬೇಕಿದೆ. ಹೀಗಾಗಿ ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ. ಮುನಿಸಿಪಲ್‌ ಕಾಯ್ದೆಗಳನ್ನು ಉಲ್ಲಂಘಿಸಿದರೆ ಮಾತ್ರ ಕಟ್ಟಡ ನೆಲಸಮ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದೀರಿ. ಆದರೆ ಆ ಸಂಬಂಧ ಮಾರ್ಗಸೂಚಿ ಬೇಕಾಗಿದೆ ಎಂದು ನ್ಯಾಯಪೀಠ ಹೇಳಿತು.

ಈ ರೀತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗುವುದನ್ನು ತಪ್ಪಿಸಲು, ಅಕ್ರಮ ಕಟ್ಟಡಗಳಿಗೆ ಮೊದಲು ನೋಟಿಸ್‌ ನೀಡಿ, ಉತ್ತರಿಸಲು ಸಮಯ ಕೊಡಿ. ಕಾನೂನು ಆಯ್ಕೆಗಳನ್ನು ಪರಿಗಣಿಸಲು ಸಮಯ ನೀಡಿ. ಆ ಬಳಿಕವಷ್ಟೇ ನೆಲಸಮ ಮಾಡಿ ಎಂದೂ ಪೀಠ ಹೇಳಿತು.

ಹಿಂದೂಗಳ ಗುರಿಯಾಗಿಸಿ ಚಾಕು ದಾಳಿಸಿ ನಡೆಸಿದ್ದ ಆರೋಪಿಯ 5 ಅಂತಸ್ತಿನ ಮನೆ ಧ್ವಂಸ!

Latest Videos
Follow Us:
Download App:
  • android
  • ios