ಚೆನ್ನೈನ ಮೀನಂಬಾಕಂ ಏರ್‌ಪೋರ್ಟ್‌ ವಿಮಾನದ ಪೈಲಟ್‌ಗಳಿಗೆ ಸವಾಲಿನ ಪರಿಸ್ಥಿತಿ ನೀಡಿದೆ. ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಪ್ರಕ್ಷುಬ್ಧತೆ, ಗಾಳಿಯ ಬದಲಾವಣೆಗಳು ಮತ್ತು ಕಡಿಮೆ ಲಿಫ್ಟ್‌ನ ಸಮಸ್ಯೆಗಳು ಎದುರಾಗುತ್ತಿವೆ.

ಚೆನ್ನೈ (ಮೇ.4): ನಗರದಲ್ಲಿ ತಾಪಮಾನ ಹೈ ಆಗಿರುವುದು ಮಾತ್ರವಲ್ಲ, ವಿಮಾನ ನಿಲ್ದಾಣದಲ್ಲಿ ವಿಮಾಗಳ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ಗೂ ಹೀಟ್‌ವೇವ್‌ ಸಮಸ್ಯೆ ಒಡ್ಡಿದೆ ಚೆನ್ನೈ ವಿಮಾನ ನಿಲ್ದಾಣ ಇರುವ ಮೀನಂಬಾಕ್ಕಂನಲ್ಲಿ ತಾಪಮಾನದ ಮಟ್ಟವು 40 ಡಿಗ್ರಿ ಸೆಲ್ಸಿಯಸ್‌ಅನ್ನು ದಾಟಿದೆ. ಅದರ ಬೆನ್ನಲ್ಲಿಯೇ ವಿಮಾನಗಳ ಪೈಲಟ್‌ಗಳು ಟೇಕಾಫ್‌ ಹಾಗೂ ಲ್ಯಾಂಡಿಂಗ್‌ಗೆ ಕೆಲ ಭಿನ್ನ ತಂತ್ರಗಳನ್ನು ಮಾಡುತ್ತಿದ್ದಾರೆ. ಎತ್ತರದ ಮೇಲ್ಮೈ ತಾಪಮಾನ ಮತ್ತು ಹತ್ತಿರದ ಬೆಟ್ಟಗಳ ಉಪಸ್ಥಿತಿಯು ನೆಲಕ್ಕೆ ಹತ್ತಿರವಿರುವ ಗಾಳಿಯ ದಿಕ್ಕಿನಲ್ಲಿ ಹಠಾತ್ ಬದಲಾವಣೆಗೆ ಕಾರಣವಾಗುತ್ತಿದೆ. ಮತ್ತು ಕ್ರಾಸ್‌ವಿಂಡ್‌ಗಳು ನೆಲಕ್ಕೆ ಗ್ಲೈಡಿಂಗ್ ಮಾಡುವಾಗ ವಿಮಾನಗಳನ್ನು ಸ್ಥಿರವಾಗಿಡಲು ಪೈಲಟ್‌ಗಳಿಗೆ ಕಷ್ಟವಾಗುತ್ತಿದೆ. ವಾತಾವರಣದಲ್ಲಿ ಗಾಳಿಯ ಮಟ್ಟ ತೆಳುವಾಗಿರುವ ಕಾರಣ ಟೇಕಾಫ್‌ ಮಾಡುವುದು ಕೂಡ ಕಷ್ಟವಾಗುತ್ತಿದೆ. 

ಆದರೆ, ವಿಮಾನದ ಪೈಲಟ್‌ಗಳಿಗೆ ವಾತಾವರಣದಲ್ಲಿ ಆಗಿರುವ ಇಂಥ ಬದಲಾವಣೆಯನ್ನು ಎದುರಿಸುವ ನಿಟ್ಟಿನಲ್ಲಿಯೂ ತರಬೇತಿ ನೀಡಲಾಗಿರುತ್ತದೆ. ರನ್‌ವೇಯಲ್ಲಿ ವಿಮಾನ ಲ್ಯಾಂಡ್‌ ಆಗುವ ಸಮಯ ಬಂದಾಗ ಪೈಲಟ್‌ಗಳು, ಟರ್ಬುಲೆನ್ಸ್‌ (ಗಾಳಿಯ ಪ್ರಕ್ಷುಬ್ದತೆಯ ವೇಗ), ವಿಂಡ್ ಶೀರ್‌ ಅಂದರೆ ಗಾಳಿಯ ವೇಗ ಹಾಗೂ ಪಕ್ಷಿಗಳ ಮೇಲೆ ಕಟ್ಟಿಟ್ಟಿರುತ್ತಾರೆ. 'ವಿಮಾನ 10 ಸಾವಿರ ಅಡಿಯ ಮೇಲಿರುವಾಗಲೇ ಟರ್ಬುಲೆನ್ಸ್‌ ಬಗ್ಗೆ ಪೈಲಟ್‌ಗಳ ಗಮನ ನೀಡುತ್ತಾರೆ. ಏರ್‌ಪೋರ್ಟ್‌ ಸನಿಹ ಇಳಿಯುವ ಸಮಯ ಬಂದಾಗ ಕೊಂಚ ಮಟ್ಟಿಗೆ ಇಳಿಯಲು ಆರಂಭ ಮಾಡುತ್ತದೆ. ಆದರೆ, ಈ ಹಂತದಲ್ಲಿ ವಿಮಾನವನ್ನು ಇಳಿಯುವ ಪ್ರಕ್ರಿಯೆ ಎಂದಿನ ಪ್ರಕ್ರಿಯೆಗಿಂತ ಕೊಂಚ ಭಿನ್ನವಾಗಿರುತ್ತದೆ. ಹಾರಾಟ ಸ್ಮೂತ್‌ ಆಗಿರಬೇಕು ಎನ್ನುವ ನಿಟ್ಟಿನಲ್ಲಿ, ಕ್ರಾಸ್‌ ವಿಂಡ್‌ ತುಂಬಾ ಬಲಿಷ್ಠವಾಗಿದ್ದಾಗ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ' ಎಂದು ಪೈಲಟ್‌ ವೊಬ್ಬರು ಹೇಳಿದ್ದಾರೆ.

ವಿಮಾನದಲ್ಲಿ ನೀಡುವ ಸರ್ವೀಸ್‌ಗಿಂತ ಹೆಚ್ಚಾಗಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಎತ್ತರದಿಂದ ಕೆಳಗೆ ಇಳಿಯುವ ಹಂತದಲ್ಲಿ ಸೀಟ್‌ಬೆಲ್ಟ್‌ನ ಸೈನ್‌ ಸಂಪೂರ್ಣವಾಗಿ ಆನ್‌ ಆಗಿಯೇ ಇರುತ್ತದೆ. ಇದರಿಂದಾಗಿ ಪ್ರಯಾಣಿಕರು ವಿಮಾನದಲ್ಲಿ ತಿರುಗಾಟ ಮಾಡುವುದನ್ನು ತಪ್ಪಿಸುತ್ತದೆ.ಯಾಕೆಂದರೆ, ಇಂಥ ಹಂತದಲ್ಲಿ ಟರ್ಬುಲೆನ್ಸ್‌ ಹೇಗೆ ಬೇಕಾದರೂ ಹೊಡೆಯಬಹುದು' ಎನ್ನುತ್ತಾರೆ.

ಓವರ್‌ಹೀಟಿಂಗ್‌ನಿಂದ ವಿಮಾನದಲ್ಲಿ ಏನಾದರೂ ಸಮಸ್ಯೆ ಆಗಿದೆಯೇ ಎನ್ನುವುದನ್ನೂ ಈ ಹಂತದಲ್ಲಿ ಚೆಕ್‌ ಮಾಡಲಾಗುತ್ತದೆ. ಅದರ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಚೆನ್ನೈನಲ್ಲಿ ಲ್ಯಾಂಡ್‌ ಮಾಡುವ ಹಂತದಲ್ಲಿ ಮುಖ್ಯ ರನ್‌ವೇಅನ್ನೇ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಯಾಕೆಂದರೆ, ಲ್ಯಾಡಿಂಗ್‌ ಹೆಚ್ಚಿನ ದೂರವನ್ನು ನೀಡುತ್ತದೆ. ಹಾಗಂತ ನಾವು ಉದ್ದೇಶಪೂರ್ವಕವಾಗಿ ಪ್ರಧಾನ ರನ್‌ವೇ ಆಯ್ಕೆ ಮಾಡಿಕೊಳ್ಳೋದಿಲ್ಲ. 2ನೇ ರನ್‌ವೇ ಕೂಡ ಲ್ಯಾಂಡಿಂಗ್‌ಗೆ ಸಂಪೂರ್ಣ ಸೇಫ್‌ ಆಗಿಯೇ ಇದೆ. ಆದರೆ, ಪ್ರಧಾನ ರನ್‌ವೇ ಲಭ್ಯವಿದ್ದಾಗ ನಾವು ಅದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.

ಅದರೊಂದಿಗೆ ವಿಮಾನದಲ್ಲಿ ಇಂಧನ ಹೆಚ್ಚು ಉಳಿಯಬೇಕು ಎನ್ನುವ ಹಾರಣಕ್ಕೆ ಹೆಚ್ಚಿನ ವಾತಾವರಣ ಇರುವ ಸಮಯದಲ್ಲಿ ಕಾರ್ಗೋ ಲೋಡ್‌ಅನ್ನು ಕಡಿಮೆ ಮಾಡುತ್ತಾರೆ. ಅದರಲ್ಲೂ ತ್ರಿಚಿಯಂಥ ಚಿಕ್ಕ ರನ್‌ವೇ ಇರುವ ವಿಮಾನ ನಿಲ್ದಾಣಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಇದು ನೆರವಾಗುತ್ತದೆ. ವಿಮಾನ ನಿಲ್ದಾಣದ ಮೇಲೇ ಒಂದು ಸುತ್ತು ಹೋಗೋದಕ್ಕೆ, ಅಥವಾ ಇನ್ನೊಂದು ಏರ್‌ಪೋರ್ಟ್‌ ಕಡೆ ಪ್ರಯಾಣ ಮಾಡೋದಕ್ಕೆ ಇದು ನೆರವಾಗುತ್ತದೆ.

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದ ಗುಕೇಶ್‌ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಏರ್‌ ಸೇಫ್ಟಿ ತಜ್ಷ ಹಾಗೂ ಮಾಜಿ ಪೈಲಟ್‌ ಮೋಹನ್‌ ರಂಗಾನಾ ಹೇಳುವ ಪ್ರಕಾರ, ದಿನದ ಹೆಚ್ಚಿನ ಸಮಯದಲ್ಲಿ ಪ್ರಧಾನ ರನ್‌ವೇ ಲಭ್ಯವಿರಬೇಕು. ಅದರೊಂದಿಗೆ ವಿಮಾನ ಲ್ಯಾಂಡ್‌ ಆದ ತಕ್ಷಣವೇ, ಏರ್‌ಟ್ರಾಫಿಕ್‌ ಕಂಟ್ರೋಲ್‌ನ ಅಧಿಕಾರಿಗಳು ವಿಮಾನವನ್ನು ಪ್ರಧಾನ ರನ್‌ವೇಯಿಂದ ಹೊರಗೆ ತೆಗೆದುಕೊಂಡು ಹೋಗಿ ಎನ್ನುವ ಸೂಚನೆಯನ್ನೂ ನೀಡಬಾರದು. ಇದಕ್ಕಾಗಿ ಅವರು ಬ್ರೇಕ್‌ಗಳನ್ನು ಅಪ್ಲೈ ಮಾಡುತ್ತಾರೆ. ಇದು ಬ್ರೇಕಿಂಗ್‌ ಹೀಟ್‌ ಆಗಲು ಕಾರಣವಾಗುತ್ತದೆ ಎಂದಿದ್ದಾರೆ.

22 ಹಾವು, ಹಲ್ಲಿಗಳನ್ನ ತುಂಬಿಕೊಂಡು ಚೆನ್ನೈ ಏರ್‌ಪೋರ್ಟ್‌ಗೆ ಬಂದಿಳಿದ ಮಹಿಳೆ ಅಂದರ್