ಹೈದರಾಬಾದ್‌[ಮಾ.09]: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವಾಗಲೇ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌, ತಮ್ಮ ಬಳಿ ಜನನ ಪ್ರಮಾಣ ಪತ್ರ ಇಲ್ಲ. ಹೀಗಿರುವಾಗ ಪೌರತ್ವ ಸಾಬೀತಿಗೆ ನಾನು ನನ್ನ ತಂದೆಯ ಜನನ ಪ್ರಮಾಣ ಪತ್ರ ಹೇಗೆ ನೀಡಲಿ ಎಂದು ಪ್ರಶ್ನಿಸಿದ್ದಾರೆ.

ತೆಲಂಗಾಣ ವಿಧಾನಸಭೆಯಲ್ಲಿ ಮಾತನಾಡಿದ ರಾವ್‌, ಏ.1ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಸಿದ್ಧಪಡಿಸಲಾಗಿರುವ ಪ್ರಶ್ನಾವಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಾನು ಹಳ್ಳಿ ಮನೆಯಲ್ಲಿ ಬೆಳೆದವನು. ಆ ವೇಳೆ ಅಲ್ಲಿ ಆಸ್ಪತ್ರೆಗಳು ಇರಲಿಲ್ಲ. ಗ್ರಾಮದ ಹಿರಿಯರು ಜನ್ಮನಾಮ ಬರೆಯುತ್ತಿದ್ದರು. ಅದಕ್ಕೆ ಅಧಿಕೃತ ದಾಖಲೆಇರುತ್ತಿರಲಿಲ್ಲ. ಒಂದು ವೇಳೆ ನನ್ನ ಬಳಿ ಜನ್ಮ ದಾಖಲೆ ಕೇಳಿದರೆ ಅದನ್ನು ನಾನು ಹೇಗೆ ತೋರಿಸಲಿ ಎಂದು ಪ್ರಶ್ನಿಸಿದ್ದಾರೆ.