Asianet Suvarna News Asianet Suvarna News

ರೈತರ ಪ್ರತಿಭಟನೆ ಹೆಸರಲ್ಲಿ ಹೆದ್ದಾರಿ ಬಂದ್‌ ಯಾಕೆ?  ಸುಪ್ರೀಂ ಅಚ್ಚರಿ ಜತೆ ಎಚ್ಚರಿಕೆ

* ರೈತರ ಪ್ರತಿಭಟನೆ ಹೆಸರಿನಲ್ಲಿ ಹೆದ್ದಾರಿ ತಡೆ
* ನಿರಂತರವಾಗಿ ಹೆದ್ದಾರಿ ಬಂದ್ ಮಾಡಿದರೆ ಹೇಗೆ?
* ಕಾನೂನು ಜಾರಿ ಮಾಡುವುದು ನ್ಯಾಯಾಂಗದ ಕೆಲಸ

How Can Highways Be Blocked Perpetually Supreme Court On Farmers Protest mah
Author
Bengaluru, First Published Sep 30, 2021, 6:23 PM IST

ನವದೆಹಲಿ(ಸೆ. 30) ಕೇಂದ್ರ ಸರ್ಕಾರದ(Union Govt)  ಕೃಷಿ ಕಾಯಿದೆ ತಿದ್ದುಪಡಿ ವಿರೋಧಿಸಿ ರೈತ (Farmars) ಸಂಘಟನೆಗಳು ಪ್ರತಿಭಟನೆ ಮಾಡಿಕೊಂಡೇ ಬಂದಿವೆ. ಇದೆ ಕಾರಣಕ್ಕೆ ಹಲವು ಸಾರಿ ಭಾರತ್ ಬಂದ್ ಗೆ ಕರೆಯನ್ನು ನೀಡಿದ್ದವು. 

ಪ್ರತಿಭಟನೆ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು(Highway) ಸದಾ ಕಾಲ ಅರ್ಧದಷ್ಟು ಬಂದ್ ಮಾಡುವ ವಿಚಾರದ ಬಗ್ಗೆ ಸುಪ್ರೀಂ(Supreme Court) ಮಾತನಾಡಿದೆ.  ಪ್ರತಿಭಟನೆ ಹೆಸರಿನಲ್ಲಿ ಹೆದ್ದಾರಿಗಳಿಗೆ ಯಾಕೆ ನಿರ್ಬಂಧ ಹಾಕುತ್ತೀರಿ? ಇದು ಎಲ್ಲಿ ಕೊನೆಯಾಗುತ್ತದೆ ಎಂಬ ಅರಿವು ನಿಮಗೆ ಇದೇಯಾ? ಎಂದು ಸುಪ್ರೀಂ ಕೋರ್ಟ್  ನ್ಯಾಯಪೀಠದ ಎಸ್‌ಕೆ  ಕೌಲ್ ಪ್ರಶ್ನೆ ಮಾಡಿದ್ದಾರೆ.

ರೈತರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನೋಯ್ಡಾದ ನಿವಾಸಿ ಮೋನಿಕಾ ಅಗರ್‌ ವಾಲ್ ಸಲ್ಲಿಕೆ ಮಾಡಿದ್ದ ಮನವಿ ವಿಚಾರಣೆ  ವೇಳೆ ನ್ಯಾಯಾಲಯ ಮೇಲಿನ ಮಾತು ಹೇಳಿದೆ. 

ಭಾರತ್ ಬಂದ್ ಗೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?

ಹೆದ್ದಾರಿಯನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ನಿರ್ವಾಹಕ ಮತ್ತು ಸರ್ಕಾರದ ಕೆಲಸವಾಗಿದೆ. ಇದಕ್ಕೆಲ್ಲ ನ್ಯಾಯಾಲಯ ಆದೇಶ ನೀಡಲು ಸಾಧ್ಯವಿಲ್ಲ.  ಕಾರ್ಯಾಂಗದ ವ್ಯಾಪ್ತಿಗೆ ಪ್ರವೇಶಿಸಿದೆ ಎಂಬ ಮಾತು ಬರುತ್ತದೆ.  ಹಾಗಾಗಿ ನಿರ್ವಹಣೆಯನ್ನು ಅವರೇ ನೋಡಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರವನ್ನು ನ್ಯಾಯಾಲಯದ ಅಂಗಣದವರೆಗೂ ತರಬೇಡಿ ಎಂದಿದೆ.  ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲಿ ರೈತರ ಪ್ರತಿಭಟನೆ ಕಾರಣಕ್ಕೆ ಹೆದ್ದಾರಿಯಲ್ಲೇ  ಹಲವು ದಿನಗಳ ಕಾಲ ಟ್ರಾಕ್ಟರ್ ಗಳನ್ನು ನಿಲ್ಲಿಸಿಕೊಳ್ಳಲಾಗಿತ್ತು. 

ಯಾವ ಆಧಾರ  ಇಟ್ಟುಕೊಂಡು ಹೆದ್ದಾರಿ ಬಂದ್ ಮಾಡಲು ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಾಲಯ  ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಕಾರ್ಯಾಂಗದ ಜವಾಬ್ದಾರಿ ಎಂದು ತಿಳಿಸಿದೆ. 

 

 

Follow Us:
Download App:
  • android
  • ios