ಭಾರತಕ್ಕೆ ಆಗಮಿಸುತ್ತಿದ್ದ ಸರಕು ಹಡಗನ್ನು ಅಪಹರಿಸಿದ ಯೆಮೆನ್ ಉಗ್ರರ ಗುಂಪು!
ಇಸ್ರೇಲ್ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಸೇರಿದಂತೆ ಹಲವು ಅರಬ್ ರಾಷ್ಟ್ರಗಳು ಸದ್ದಿಲ್ಲದೆ ಪ್ರತಿದಾಳಿ ನಡೆಸುತ್ತಿದೆ. ಇದೀಗ ಭಾರತಕ್ಕೆ ಸರಕು ತುಂಬಿ ತೆರಳುತ್ತಿದ್ದ ಹಡಗಿನಲ್ಲಿ ಇಸ್ರೇಲ್ ಪ್ರಜೆಗಳಿದ್ದಾರೆ ಎಂದು ಯೆಮೆನ್‌ನ ಉಗ್ರರ ಗುಂಪು ಅಪಹರಿಸಿದ ಘಟನೆ ನಡೆದಿದೆ.

ಯೆಮೆನ್(ನ.19) ಇಸ್ರೇಲ್ ಪ್ಯಾಲೆಸ್ತಿನ್ ಯುದ್ಧದಿಂದ ಜಗತ್ತು ಭೀಕರ ಅಪಾಯ ಎದುರಿಸುತ್ತಿದೆ. ಹಮಾಸ್ ಉಗ್ರರು ನಾಗರೀಕರನ್ನು ಗುರಿಯಾಗಿಸಿ ಮತ್ತೆ ದಾಳಿಗೆ ಸಜ್ಜಾಗುತ್ತಿದ್ದಾರೆ. ಇತ್ತ ಹಮಾಸ್ ಉಗ್ರರಿಗೆ ಅರಬ್ ರಾಷ್ಟ್ರಗಳು ಬೆಂಬಲವಾಗಿ ನಿಂತುಕೊಂಡಿದೆ. ಇಷ್ಟೇ ಅಲ್ಲ ಇರಾನ್, ಯೆಮೆನ್ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರರ ಗುಂಪುಗಳು ನೆರವು ನೀಡುತ್ತಿದೆ. ಇದೀಗ ಸರಕು ತುಂಬಿ ಭಾರತದತ್ತ ಸಂಚರಿಸುತ್ತಿದ್ದ ಹಡಗನ್ನು ಯೆಮೆನ್‌ನ ಹೌತಿ ಉಗ್ರರ ಗುಂಪು ಅಪಹರಿಸಿದ ಘಟನೆ ನಡೆದಿದೆ. ಇಸ್ರೇಲ್ ಹಡಗು, ಇಸ್ರೇಲ್ ನಾಗರಿಕರು ಈ ಹಡಗಿನಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ ಅಪಹರಿಸಲಾಗಿದೆ ಎಂದು ವರದಿಗಳು ಹೇಳುತ್ತಿದೆ. ಈ ಕುರಿತು ಅಮೆರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೌತಿ ಉಗ್ರರು ಹಡಗು ಅಪಹರಣ ನಡೆಸಿದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯೂಹು ಸ್ಪಷ್ಟನೆ ನೀಡಿದ್ದರು. ಇದು ಬ್ರಿಟಿಷ್ ಮಾಲೀಕತ್ವದ ಜಪಾನ್ ನಿರ್ವಹಣೆಯ ಹಡಗು. ಈ ಹಡಗಿನಲ್ಲಿ ಇಸ್ರೇಲ್‌ನ ಯಾವುದೇ ನಾಗರೀಕರು ಕೆಲಸ ಮಾಡುತ್ತಿಲ್ಲ ಎಂದು ನೇತಾನ್ಯಾಹು ಸ್ಪಷ್ಟಪಡಿಸಿದ್ದರು. ಇದು ಇರಾನ್ ಪ್ರಾಯೋಜಿತ ಭಯೋತ್ಪಾದಕ ಕೃತ್ಯ ಎಂದು ಇಸ್ರೇಲ್ ಹೇಳಿದೆ.
ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ
ಇರಾನ್ ಪ್ರಾಯೋಜಿತ ಭಯೋತ್ಪಾದಕ ಕೃತ್ಯದಿಂದ ಅಂತಾರಾಷ್ಟ್ರೀಯ ಹಡಗುಗಳನ್ನು ಅಪಹರಿಸುವ ಕೃತ್ಯಕ್ಕೆ ಬೆಂಬಲ ನೀಡಲಾಗುತ್ತದೆ. ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರಗಳು ಸರಕು ಹಡುಗು, ಅಂತಾರಾಷ್ಟ್ರೀಯ ಹಡುಗನ್ನು ಅಪಹರಿಸುವುದು ಎಷ್ಟು ಸರಿ. ಇದರ ಬಗ್ಗೆ ಎಲ್ಲರೂ ಮೌನವೇಕೆ ಎಂದು ಇಸ್ರೇಲ್ ಪ್ರಶ್ನಿಸಿದೆ.
ಹೌತಿಸ್ ಉಗ್ರರು ಹೆಲಿಕಾಪ್ಟರ್ ಬಳಸಿ ಹಡಗನ್ನು ಹೈಜಾಕ್ ಮಾಡಿದ್ದಾರೆ. ಹಡಗು ಹೈಜಾಕ್ ಮಾಡಿದ ಬೆನ್ನಲ್ಲೇ ಪ್ರಕಟಣೆ ಹೊರಡಿಸಿದ್ದರು. ಇಸ್ರೇಲ್‌ಗೆ ಸೇರಿದ ಹಡಗನ್ನು ಹೈಜಾಕ್ ಮಾಡಲಾಗಿದೆ. ಇದರಲ್ಲಿರುವ ಸಿಬ್ಬಂದಿಗಳಿಗೆ ಇಸ್ಲಾಮಿಕ್ ಮೌಲ್ಯದ, ನೀತಿಗಳ ಪ್ರಕಾರ ನೋಡಿಕೊಳ್ಳಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ನಾವು ಇಸ್ರೇಲ್‌ಗೆ ಸೇರಿದ, ಇಸ್ರೇಲ್ ಧ್ವಜ ಹೊಂದಿರುವ ಹಡಗುಗಳನ್ನು ಟಾರ್ಗೆಟ್ ಮಾಡುತ್ತೇವೆ. ಇಸ್ರೇಲ್ ಖಾಸಗಿ ಕಂಪನಿಗೆ ಸೇರಿದ ಹಡುಗಳನ್ನೂ ಟಾರ್ಗೆಟ್ ಮಾಡಲಾಗುತ್ತದೆ ಎಂದು ಹೌತಿಸ್ ಉಗ್ರರು ಘೋಷಣೆ ಮಾಡಿದ್ದಾರೆ.
ಒಸಾಮಾ ಬಿನ್ ಲಾಡೆನ್ ಅಮೆರಿಕಕ್ಕೆ ಬರೆದ ಪತ್ರ ವೈರಲ್: ಪತ್ರ ಓದಿ 9/11 ದಾಳಿ ಸಮರ್ಥಿಸಿಕೊಂಡ ಯುವ ಅಮೆರಿಕನ್ನರು!
ಸರಕು ತುಂಬಿದ ಈ ಹಡಗಿನಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಉಕ್ರೇನ್, ಮೆಕ್ಸಿಕೋ, ಬಲ್ಗೇರಿಯಾ ಸೇರಿದಂತೆ ಹಲವು ದೇಶಗಳ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.