ಹೋಟೆಲ್‌ ಪಾರ್ಕಿಂಗಿಂದ ವಾಹನ ಕಳವಾದರೆ ಆ ಹೋಟೆಲ್ಲೇ ಹೊಣೆ: ಸುಪ್ರೀಂ| ‘ಪಾರ್ಕಿಂಗ್‌ ಅಟ್‌ ಓನ​ರ್ಸ್ಸ್ ರಿಸ್ಕ್‌’ (ಮಾಲೀಕರೇ ಜವಾಬ್ದಾರರು) ಎಂಬ ಫಲಕ ಅಳವಡಿಸಿ ನುಣುಚಿಕೊಳ್ಳುವ ಹೋಟೆಲ್‌ ಮಾಲಿಕರಿಗೆ ಬ್ರೇಕ್

ನವದೆಹಲಿ[ನ.18]: ಹೋಟೆಲ್‌ ಪಾರ್ಕಿಂಗ್‌ನಲ್ಲಿ ಗ್ರಾಹಕರು ನಿಲ್ಲಿಸಿದ ವಾಹನಕ್ಕೆ ತೊಂದರೆ ಉಂಟಾದರೆ ಅಥವಾ ವಾಹನ ಕಳವಾದರೆ ಅದಕ್ಕೆ ಖುದ್ದು ಹೊಟೇಲ್‌ ಆಡಳಿತ ಮಂಡಳಿಯೇ ಜವಾಬ್ದಾರಿಯಾಗಲಿದೆ ಎಂದು ಸುಪ್ರಿಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ‘ಪಾರ್ಕಿಂಗ್‌ ಅಟ್‌ ಓನರ್ಸ್ಸ್ ರಿಸ್ಕ್‌’ (ಮಾಲೀಕರೇ ಜವಾಬ್ದಾರರು) ಎಂಬ ಫಲಕ ಅಳವಡಿಸಿ ನುಣುಚಿಕೊಳ್ಳುವ ಹೋಟೆಲ್‌ ಮಾಲಿಕರಿಗೆ ಸುಪ್ರೀಂ ಕೋರ್ಟ್‌ ಬ್ರೇಕ್‌ ಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

47 ನೇ ಸಿಜೆ ಆಗಿ ನ್ಯಾ ಬೋಬ್ಡೆ ಪದಗ್ರಹಣ ಸ್ವೀಕಾರ

1998ರಲ್ಲಿ ನವದೆಹಲಿಯ ತಾಜ್‌ ಮಹಲ್‌ ಹೋಟೆಲ್‌ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ತಮ್ಮ ಮಾರುತಿ ಝೆನ್‌ ಕಾರು ಕಳವಾಗಿದ್ದಕ್ಕೆ ಅದರ ಮಾಲೀಕರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಿದ್ದರು. ಪ್ರಕರಣ ವಿಚಾರಣೆ ನಡೆಸಿದ ಆಯೋಗ ಹೋಟೆಲ್‌ ಆಡಳಿತ ಮಂಡಳಿಗೆ 2.8 ಲಕ್ಷ ರು. ದಂಡ ವಿಧಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಹೊಟೇಲ್‌ ಅರ್ಜಿ ಸಲ್ಲಿಸಿತ್ತು. ಆದರೆ ಹೋಟೆಲ್‌ ಅರ್ಜಿಯನ್ನು ಅಮಾನ್ಯ ಮಾಡಿರುವ ಸರ್ವೋಚ್ಚ ನ್ಯಾಯಾಲಯ ಆಯೋಗದ ತೀರ್ಪನ್ನು ಎತ್ತಿ ಹಿಡಿದಿದೆ.

ಇತಿಹಾಸ ಸೃಷ್ಟಿಸಿ ತೆರೆಯ ಮರೆಗೆ ಸಿಜೆಐ ಗೊಗೋಯ್

ಅಲ್ಲದೇ ಉಚಿತವಾಗಿ ಪಾರ್ಕಿಂಗ್‌ಗೆ ಅವಕಾಶ ಕೊಟ್ಟರೂ ಗ್ರಾಹಕ ಕಾರು ಪಾರ್ಕಿಂಗ್‌ ಮಾಡುವಾಗ ಇದ್ದ ಅದೇ ಸ್ಥಿತಿಯಲ್ಲಿ ವಾಹನವನ್ನು ಹಿಂದಿರುಗಿಸಬೇಕು ಎಂದು ಹೇಳಿದೆ.