* ಗ್ಯಾಸ್‌ ಸಿಲಿಂಡರ್‌ಗೆ 2230 ರು. ಪಾವತಿಸುತ್ತಿದ್ದೇವೆ* ಹೋಟೆಲ್‌ ತಿನಿಸು .10 ದುಬಾರಿ!* ರಾಜ್ಯಾದ್ಯಂತ ಇಂದಿನಿಂದಲೇ ಹೊಸ ದರ ಜಾರಿ* ಸಿಲಿಂಡರ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದರ ಹೆಚ್ಚಳ

ಬೆಂಗಳೂರು(ನ.08): ದಿನಸಿ ವಸ್ತು (Grocery), ತರಕಾರಿ, ಸಿಲಿಂಡರ್‌ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೋಮವಾರದಿಂದ ಹೋಟೆಲ್‌ಗಳ (Hotel) ಊಟ, ತಿಂಡಿಗಳ ಬೆಲೆ ಹೆಚ್ಚಳವಾಗಲಿದೆ.

ಕೊರೋನಾದಿಂದ ಹೋಟೆಲ್‌ ಉದ್ಯಮ (Hotel Business) ಆರ್ಥಿಕ ಸಂಕಷ್ಟಕ್ಕೆ ತಲುಪಿದೆ. ಆದರೆ, ಕೊರೋನಾ ಬಳಿಕೆ ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವ ಹಂತದಲ್ಲಿ ಕಳೆದ ಆರು ತಿಂಗಳಿನಿಂದ ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ (Commercial gas Cylinder) ಬೆಲೆ ಹೆಚ್ಚಾಗಿದೆ. ಹೀಗಾಗಿ ಇನ್ನಷ್ಟು ಆರ್ಥಿಕ ತೊಂದರೆಗೆ (Financial Crisis) ಸಿಲುಕುವ ಮುನ್ನ ಅನಿವಾರ್ಯವಾಗಿ ಊಟ, ತಿಂಡಿ ಮತ್ತು ಕಾಫಿ ಬೆಲೆಗಳಲ್ಲಿ ಶೇ.5ರಿಂದ 10ರವರೆಗೂ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಿದ್ದೇವೆ ಎಂದು ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಚಂದ್ರಶೇಖರ ಹೆಬ್ಬಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬಹುತೇಕ ಹೊಟೇಲ್‌ಗಳಲ್ಲಿ ಸೋಮವಾರದಿಂದಲೇ ದರ ಏರಿಕೆಯಾಗಲಿದೆ. ಕೆಲವು ಹೋಟೆಲ್‌ ಮಾಲೀಕರು ಮಾತ್ರ ಒಂದು ವಾರದ ನಂತರ ದರ ಏರಿಸಲು ನಿರ್ಧರಿಸಿದ್ದಾರೆ. ಅಯಾ ಹೋಟೆಲ್‌ಗಳು ನಿಗದಿಪಡಿಸಿರುವ ದರದ ಮೇಲೆ ಶೇ. 5-10ರಷ್ಟುಜಾಸ್ತಿಯಾಗಲಿದೆ ಎಂದರು.

ಪ್ರಸ್ತುತ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ (Gas Cylinder) ಬೆಲೆ 2 ಸಾವಿರ ರು. ತಲುಪಿದೆ. ಅದಕ್ಕೆ ಶೇ.18 ರಷ್ಟು ಸರಕು ಮತ್ತು ಸಾಗಣೆ(GST) ತೆರಿಗೆ ವಿಧಿಸಲಾಗುತ್ತಿದ್ದು, ಪ್ರತಿ ಸಿಲಿಂಡರ್‌ಗೆ 2,230 ರು. ಪಾವತಿ ಮಾಡುತ್ತಿದ್ದೇವೆ. ಅಲ್ಲದೆ, ಎಲ್ಲ ರೀತಿಯ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. 50 ರು.ಗಳಿಗಿಂತ ಕಡಿಮೆ ಬೆಲೆಯಲ್ಲಿ ಯಾವುದೇ ತರಕಾರಿ ಸಿಗುತ್ತಿಲ್ಲ ಇದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರದಲ್ಲಿ 9 ಸಾವಿರ ಹೋಟೆಲ್‌ಗಳು ಸೇರಿ ರಾಜ್ಯದಲ್ಲಿ ಸುಮಾರು 50 ಸಾವಿರ ಹೋಟೆಲ್‌ಗಳಿವೆ. ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಹೋಟೆಲ್‌ ತಿಂಡಿಗಳ ಮೇಲೆ ಬೆಲೆ ಏರಿಕೆಯಾಗಿಲ್ಲ. ಪ್ರಸ್ತುತ ಬೆಲೆ ಏರಿಕೆ (Price Hike) ಮಾಡುವುದಕ್ಕೂ ಹೋಟೆಲ್‌ ಮಾಲೀಕರಲ್ಲಿ ಧೈರ್ಯ ಇಲ್ಲ. ಆದರೆ, ಇಂಧನ ಬೆಲೆ ಹೆಚ್ಚಳ ಮತ್ತು ಕಳೆದ ಕೆಲ ತಿಂಗಳಿಂದ ದಿನಸಿ, ತರಕಾರಿ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ನಷ್ಟಸರಿದೂಗಿಸುವುದಕ್ಕಾಗಿ ಬೆಲೆ ಏರಿಕೆ ಮಾಡುವುದಕ್ಕೆ ನಿರ್ಧಾರ ಮಾಡಿರುವುದಾಗಿ ಅವರು ವಿವರಿಸಿದರು.

"

- ​ಬೆಂಗಳೂರಿನಲ್ಲಿ 9 ಸಾವಿರ ಸೇರಿ ರಾಜ್ಯದಲ್ಲಿ 50 ಸಾವಿರ ಹೋಟೆಲ್‌ಗಳಿವೆ

- ಕೊರೋನಾ ಕಾರಣ 2 ವರ್ಷದಿಂದ ತಿಂಡಿ- ತಿನಿಸುಗಳ ದರ ಏರಿಕೆಯಾಗಿಲ್ಲ

- ಸಿಲಿಂಡರ್‌, ದಿನಸಿ, ತರಕಾರಿ ದುಬಾರಿ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ನಿರ್ಧಾರ

- ರಾಜ್ಯದ ಬಹುತೇಕ ಹೋಟೆಲ್‌ಗಳಲ್ಲಿ ಸೋಮವಾರದಿಂದಲೇ ಹೊಸ ದರ ಜಾರಿ

- ಕೆಲವು ಹೋಟೆಲ್‌ ಮಾಲೀಕರಿಂದ ಒಂದು ವಾರದ ನಂತರ ದರ ಪರಿಷ್ಕರಣೆಗೆ ಒಲವು

- ನಷ್ಟಸರಿದೂಗಿಸುವುದಕ್ಕಾಗಿ ದರ ಏರಿಕೆ ತೀರ್ಮಾನ: ಹೋಟೆಲ್‌ ಮಾಲೀಕರ ಸಂಘ

5-10% ಹೆಚ್ಚಳ

ಗ್ಯಾಸ್‌ ಸಿಲಿಂಡರ್‌ಗೆ 2230 ರು. ಪಾವತಿಸುತ್ತಿದ್ದೇವೆ. 50 ರು.ಗಿಂತ ಕಡಿಮೆ ಬೆಲೆಗೆ ಯಾವುದೇ ತರಕಾರಿ ಸಿಗುತ್ತಿಲ್ಲ. ಹೀಗಾಗಿ ಊಟ, ತಿಂಡಿ, ಕಾಫಿ ಬೆಲೆಯನ್ನು ಶೇ.5ರಿಂದ ಶೇ.10ರಷ್ಟುಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ. ಸೋಮವಾರದಿಂದಲೇ ಹೊಸ ದರ ಜಾರಿಯಾಗಲಿದೆ.

- ಪಿ. ಚಂದ್ರಶೇಖರ ಹೆಬ್ಬಾರ್‌, ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ