ನವದೆಹಲಿ(ಏ.20): ಕೊರೋನಾ ಎರಡನೇ ಅಲೆ ಭಾರತದಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಮೊದಲನೇ ಅಲೆಗಿಂತಲೂ ವೇಗವಾಗಿ ಹರಡುತ್ತಿರುವ ಮಹಾಮಾರಿ, ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿದೆ. ಲಸಿಕಾ ಅಭಿಯಾನದ ನಡುವೆಯೂ ಈ ಮಹಾಮಾರಿ ನಿಯಂತ್ರಿಸೋದೇ ಕಷ್ಟವಾಗಿದೆ. ಜನ ಸಾಮಾನ್ಯರ ನಿದ್ದೆಗೆಡಿಸಿರುವ ಈ ಸೋಂಕು, ಸರ್ಕಾರಕ್ಕೂ ಗಾಬರಿ ಹುಟ್ಟಿಸಿದೆ. ಸದ್ಯ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಗೂ ಈ ಸೋಂಕು ತಗುಲಿದೆ.

ಸಿದ್ಧಗಂಗಾ ಮಠದಲ್ಲಿ 30 ವಿದ್ಯಾರ್ಥಿಗಳಿಗೆ ಸೋಂಕು

ಹೌದು ಈ ಬಗ್ಗೆ ಟ್ವೀಟ್ ಮಾಡಿರುವ ಕೈ ನಾಯಕ ರಾಹುಲ್ ಗಾಂಧಿ 'ಕೊರೋನಾದ ಕೆಲ ಲಕ್ಷಣಗಳು ಕಂಡು ಬಂದಿದ್ದು, ನನಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಯಾರೆಲ್ಲಾ ನನ್ನ ಸಂಪರ್ಕದಲ್ಲಿದ್ದಿರೋ, ಎಲ್ಲರೂ ಟೆಸ್ಟ್‌ ಮಾಡಿಸಿ, ಸುರಕ್ಷತಾ ಕ್ರಮ ಕೈಗೊಳ್ಳಿ' ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊರೋನಾದ ಎರಡನೇ ಅಲೆಗೆ ಕರ್ನಾಟಕ, ಮಹಾಮಾರಷ್ಟ್ರ, ದೆಹಲಿ ಸೇರಿ ಅನೇಕ ರಾಜ್ಯಗಳು ಅಕ್ಷರಶಃ ನಲುಗಿವೆ. ವೆಂಟಿಲೇಟರ್‌ಗಿಂತ ಈ ಬಾರಿ ಆಮ್ಲಜನಕ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಅನೇಕ ಮಂದಿ ಉಸಿರಾಡಲು ಆಕ್ಸಿಜನ್ ಸಿಗದೇ ಕೊನೆಯುಸಿರೆಳೆದಿದ್ದಾರೆ. ಸ್ಮಶಾನಗಳೆದುರು ಮೃತದೇಹಗಳನ್ನು ಹೊತ್ತುಕೊಂಡ ವಾಹನಗಳು ಸಾಲುಗಟ್ಟಿವೆ. ಆಸ್ಪತ್ರೆಗಳೂ ಬಹುತೇಕ ಭರ್ತಿಯಾಗಿದ್ದು, ಮೆಡಿಕಲ್ ಎಮರ್ಜೆನ್ಸಿಯಂತಹ ಪರಿಸ್ಥಿತಿ ಎದುರಾಗಿದೆ.

"

ಬೇಗ ಗುಣಮುಖರಾಗುವಂತೆ ಹಾರೈಸಿದ ಸಿದ್ದರಾಮಯ್ಯ

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ರಾಹುಲ್ ಗಾಂಧಿಗೆ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ

ನಮ್ಮ ಆರೋಗ್ಯ, ನಮ್ಮ ಸುರಕ್ಷತೆ ನಮ್ಮ ಕೈಯ್ಯಲ್ಲಿ

ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಅಗತ್ಯವಿದ್ದರಷ್ಟೇ ಹೊರಗೆ ಓಡಾಡಿ. ಹೊರಗೆ ಹೋಗುವ ವೇಳೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮರೆಯದಿರಿ. ಕೊರೋನಾ ನಿಯಂತ್ರಿಸಲು ಅಗತ್ಯವಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳೋಣ, ಈ ಮಹಾಮಾರಿ ಮಣಿಸುವಲ್ಲಿ ಒಂದಾಗಿ ಹೋರಾಡೋಣ.

ಬೇಗ ಗುಣಮುಖರಾಗಿ ಎಂದು ಮೋದಿ ವಿಶ್