ಲೋಕಲ್ ಟ್ರೈನೇರಿದ ಕುದುರೆ : ಫೋಟೋ ವೈರಲ್, ತನಿಖೆಗೆ ಆದೇಶ
- ರೈಲೇರಿದ ಕುದುರೆ ಫೋಟೋ ವೈರಲ್
- ಜನಜಂಗುಳಿ ಮಧ್ಯೆ ಕುದುರೆಯ ಸಂಚಾರ
- ಪೋಟೋ ವೈರಲ್ ತನಿಖೆಗೆ ಆದೇಶ
ಕೋಲ್ಕತ್ತಾ(ಏ.8): ಪಶ್ಚಿಮ ಬಂಗಾಳದಲ್ಲಿ ಕಿಕ್ಕಿರಿದು ತುಂಬಿರುವ ಸ್ಥಳೀಯ ರೈಲಿನಲ್ಲಿ ಕುದುರೆಯೂ ಪ್ರಯಾಣಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಭಾರತದಲ್ಲಿ ಲೋಕಲ್ ರೈಲುಗಳು (Local Train) ಯಾವಾಗಲೂ ಜನರಿಂದ ಕಿಕ್ಕಿರಿದು ತುಂಬಿರುತ್ತವೆ. ಸಾಮಾನ್ಯ ಬೋಗಿಗಳಲ್ಲಂತೂ ಕಾಲಿಡಲು ಜಾಗ ಇರುವುದಿಲ್ಲ. ಇದರೊಳಗೆ ಜನರು ಸೀಟು ಪಡೆಯಲು ನೂಕಾಟ ತಳ್ಳಾಟ ಮಾಡುತ್ತಿರುತ್ತಾರೆ. ಇಂತಹ ರೈಲಿನೊಳಗೆ ಕುದುರೆಯೂ ಬಂದರೆ ಹೇಗಿರುತ್ತೆ. ಪಶ್ಚಿಮ ಬಂಗಾಳದ ಲೋಕಲ್ ರೈಲೊಂದರಲ್ಲಿ ಕುದುರೆಯೂ ಪ್ರಯಾಣಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಕ್ಕಿರಿದ ಜನಗಳ ಮಧ್ಯೆ ಕುದುರೆಯೂ ಗಾಂಭೀರ್ಯವಾಗಿ ನಿಂತಿದೆ.
ಸೀಲ್ದಾ-ಡೈಮಂಡ್ ಹಾರ್ಬರ್ (Sealdah-Diamond Harbour)ಲೋಕಲ್ ರೈಲಿನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕುದುರೆ ಸಮೇತ ರೈಲು ಹತ್ತಿದ ವ್ಯಕ್ತಿಗೆ ಹಲವು ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಕುದುರೆಯ ಮಾಲೀಕ ತಲೆಕೆಡಿಸಿಕೊಳ್ಳಲಿಲ್ಲ ಮತ್ತು ತನಗೆ ಮತ್ತು ತನ್ನ ಕುದುರೆಗೆ ಸ್ಥಳವನ್ನು ಮಾಡಿದ್ದಾರೆ. ಈ ಕುದುರೆ (horse) ಮತ್ತು ಅವನ ಮಾಲೀಕರು ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ಆಯೋಜಿಸಿದ್ದ ಓಟವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ಹೇಳಲಾಗುತ್ತಿದೆ.
ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ರೈಲ್ವೆಯು ಚಿತ್ರದ ಸತ್ಯಾಸತ್ಯತೆಯನ್ನು ಇನ್ನೂ ದೃಢಪಡಿಸಿಲ್ಲ ಮತ್ತು ಇದು ಹೇಗೆ ಸಂಭವಿಸಿತು ಎಂಬುದನ್ನು ಕಂಡುಹಿಡಿಯಲು ಮೊದಲು ಫೋಟೋವನ್ನು ಪರಿಶೀಲಿಸಲು ತನಿಖೆಗೆ ಆದೇಶಿಸಿದೆ . ಈಸ್ಟರ್ನ್ ರೈಲ್ವೇ ವಕ್ತಾರರು ಸಹ ಫೋಟೋವನ್ನು ನೋಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಆದರೆ ಈ ರೀತಿಯ ಘಟನೆ ನಿಜವಾಗಿ ನಡೆದಿದೆಯೇ ಎಂದು ಅವರಿಗೆ ತಿಳಿದಿಲ್ಲ ಎಂದು ವರದಿ ಹೇಳಿದೆ.
ಕಾಲೇಜ್ ಹೋಗಲು ಬೈಕ್ ಅಲ್ಲ ಕುದುರೆ ಖರೀದಿಸಿದ ಯುವಕ
ಜನವರಿಯಲ್ಲಿ ಎರಡು ವಿರುದ್ಧ ದಿಕ್ಕಿಗೆ ಚಲಿಸುತ್ತಿರುವ ರೈಲುಗಳ ಮಧ್ಯೆ ಕುದುರೆಯೊಂದು ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರೈಲಿನಲ್ಲಿ ಚಲಿಸುತ್ತಿರುವ ಪ್ರಯಾಣಿಕರು ಈ ದೃಶ್ಯವನ್ನು ಚಿತ್ರೀಕರಿಸಿದ್ದರು. ಈ ಘಟನೆ ಈಜಿಪ್ಟ್‌ನಲ್ಲಿ ನಡೆದಿದೆ ಎಂದು ವಿದೇಶಿ ಮಾಧ್ಯಮವೊಂದು ವರದಿ ಮಾಡಿತ್ತು. ಈ ವಿಡಿಯೋದಲ್ಲಿ ಕುದುರೆ ಓಡುವುದನ್ನು ನೋಡಿ ಜನ ಕಿಟಕಿಯಿಂದ ತಲೆ ಹೊರಗೆ ಹಾಕಿ ಜೋರಾಗಿ ಬೊಬ್ಬೆ ಹೊಡೆಯುವುದನ್ನು ನೋಡಬಹುದು. ಇತ್ತ ಶ್ವೇತ ವರ್ಣದ ಕುದುರೆಯು ಎರಡು ರೈಲುಗಳ ಮಧ್ಯೆ ಎಲ್ಲಿಯೂ ನಿಲ್ಲದೇ ಮಿಂಚಿನ ವೇಗದಲ್ಲಿ ಚಲಿಸುವುದನ್ನು ಕಾಣಬಹುದು.
South Western Railway: ನೈಋುತ್ಯ ರೈಲ್ವೆಯಿಂದ ವರ್ಷದಲ್ಲಿ 209 ಕಿಮೀ ರೈಲು ಮಾರ್ಗ ನಿರ್ಮಾಣ
ಇತ್ತ ಈಜಿಪ್ಟ್‌ನ (Egypt) ಅಸ್ಯುತ್‌ನಿಂದ (Asyut) ಸೊಹಾಗ್‌ಗೆ (Sohag) ಚಲಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋ ಮಾಡಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಬಿಳಿ ಕುದುರೆಯೊಂದು ಎರಡು ರೈಲುಗಳ ನಡುವೆ ಹಳಿಗಳ ಮೇಲೆ ಓಡುತ್ತಿರುವುದನ್ನು ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ನಂತರ ಕುದುರೆ ಪಕ್ಷದ ಹಳಿಗೆ ಹತ್ತಿದ್ದು ಅಲ್ಲಿಯೂ ರೈಲಿಗೆ ಸ್ಪರ್ಧೆ ಕೊಡುವಂತೆ ಓಡುತ್ತಿರುವುದನ್ನು ಕಾಣಬಹುದು. ಮತ್ತು ಅದಕ್ಕೆ ಏನು ತೊಂದರೆಯಾಗಿಲ್ಲ ಎಂಬುದು ತಿಳಿಯುತ್ತಿದ್ದಂತೆ ಪ್ರಯಾಣಿಕರು ಹರ್ಷೋದ್ಘಾರ ಮಾಡುವುದನ್ನು ಕೇಳಬಹುದು.
ಭಾರತೀಯ ಪೊಲೀಸ್ ಸೇವೆಯ(IPS)ಅಧಿಕಾರಿ ದೀಪಾಂಶು ಕಾಬ್ರಾ (Dipanshu Kabra) ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೊವನ್ನು17 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಟ್ವೀಟ್‌ನ ಶೀರ್ಷಿಕೆಯನ್ನು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. 'ಕುದುರೆ ಎರಡು ರೈಲುಗಳ ನಡುವೆ ಸಿಲುಕಿಕೊಂಡಿತು. ಅದು ಹೇಗೆ ಓಡಬೇಕು ಎಂದು ತಿಳಿದಿತ್ತು, ಅದು ಗುರಿ ಬದಲಾಯಿಸದೆ ಓಡುತ್ತಲೇ ಇತ್ತು ಮತ್ತು ಅಂತಿಮವಾಗಿ ಹೊರಬಂದಿತು.