Asianet Suvarna News Asianet Suvarna News

Honours for service: ಏಷ್ಯಾನೆಟ್‌ ನ್ಯೂಸ್‌ ಅಮೆರಿಕ ಹೆಲ್ತ್‌ ಎಕ್ಸಲೆನ್ಸ್‌ ಪ್ರಶಸ್ತಿ ಘೋಷಣೆ; ವಿಜೇತರ ವಿವರ ಹೀಗಿದೆ..

ಯೂತ್ ಐಕಾನ್, ವರ್ಷದ ನರ್ಸ್, ವರ್ಷದ ವೈದ್ಯ, ಜೀವಮಾನದ ಸಾಧನೆ ಮತ್ತು ಕೋವಿಡ್ ವಾರಿಯರ್ ಐದು ವಿಭಾಗಗಳ ಏಷ್ಯಾನೆಟ್‌ ನ್ಯೂಸ್‌ ಅಮೆರಿಕ ಹೆಲ್ತ್‌ ಎಕ್ಸಲೆನ್ಸ್‌ ಪ್ರಶಸ್ತಿ ಒಳಗೊಂಡಿದೆ.

honours for service asianet news us healthcare excellence awards announced ash
Author
First Published Nov 29, 2022, 3:20 PM IST

ಏಷ್ಯಾನೆಟ್‌ ನ್ಯೂಸ್‌ ಅಮೆರಿಕದಲ್ಲಿ ಆರೋಗ್ಯ ಸಿಬ್ಬಂದಿಗೆ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪ್ರಶಸ್ತಿ ಯೂತ್ ಐಕಾನ್, ವರ್ಷದ ನರ್ಸ್, ವರ್ಷದ ವೈದ್ಯ, ಜೀವಮಾನದ ಸಾಧನೆ ಮತ್ತು ಕೋವಿಡ್ ವಾರಿಯರ್.- ಹೀಗೆ ಐದು ವಿಭಾಗಗಳನ್ನು ಒಳಗೊಂಡಿದೆ. ಮತ್ತು ಈ ಪ್ರಶಸ್ತಿಗಳ ವಿಜೇತರ ವಿವರ ಹೀಗಿದೆ ನೋಡಿ..

ಯೂತ್ ಐಕಾನ್: ಆಂಡ್ರಿಯಾ ಅಗಸ್ಟಿನ್

ಡ್ಯೂಕ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿದ್ಯಾರ್ಥಿ, ಆಂಡ್ರಿಯಾ ಶೈಕ್ಷಣಿಕ ಶ್ರೇಷ್ಠತೆಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ರೈಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು ಸಾಂಕ್ರಾಮಿಕ ಸಮಯದಲ್ಲಿ, ಹಲವಾರು ಸಂಶೋಧನೆ ಮತ್ತು ಚಿಕಿತ್ಸೆ-ಸಂಬಂಧಿತ ಯೋಜನೆಗಳನ್ನು ಪ್ರಾರಂಭಿಸಿದರು. ಇವರು ಅಟ್ಲಾಂಟಾ ನಿವಾಸಿ.

ಇದನ್ನು ಓದಿ: Nursing Excellence Awards ಕುವೈಟ್‌ನಲ್ಲಿನ 5 ಭಾರತೀಯ ನರ್ಸ್‌ಗಳಿಗೆ ಏಷ್ಯಾನೆಟ್ ನ್ಯೂಸ್‌ ಶ್ರೇಷ್ಠ ಪ್ರಶಸ್ತಿ ಗೌರವ!

ಕೋವಿಡ್ ವಾರಿಯರ್: ಮಲಯಾಳಿ ರೆಸ್ಪಿರೇಟರಿ ಚಿಕಿತ್ಸಕರು

ಕೋವಿಡ್ ಸಮಯದಲ್ಲಿ ಅನುಕರಣೀಯ ಸೇವೆ ಸಲ್ಲಿಸಿದ ವೃತ್ತಿಪರರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಗೆ ನಾಮನಿರ್ದೇಶನಗೊಂಡವರೆಲ್ಲರೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದು, ಈ ಪೈಕಿ ಮಲಯಾಳಿ ಮೂಲದ ರೆಸ್ಪಿರೇಟರಿ ಚಿಕಿತ್ಸಕರು ಕೋವಿಡ್ -19 ಸಮಯದಲ್ಲಿ ತೀವ್ರವಾಗಿ ಅಸ್ವಸ್ಥರಾದ ರೋಗಿಗಳ ಜೀವವನ್ನು ಉಳಿಸಲು ಮಾಡಿದ್ದು ಅತ್ಯುತ್ತಮವಾಗಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೋಗಿಗಳ ಆರೈಕೆ ಮಾಡಿದ ಈ ವೃತ್ತಿಪರರು, ಮಲಯಾಳಿಗಳೆಲ್ಲ ಹೆಮ್ಮೆ ಪಡುವಂತಹ ಅವರ ಸೇವೆಗೆ ಗುಂಪಿಗೆ ಪ್ರಶಸ್ತಿ ಲಭಿಸಿದೆ.

ವಿಶೇಷ ತೀರ್ಪುಗಾರರ ಪ್ರಶಸ್ತಿ: ಡಾ.ರಾಗೇಶ್ ಕಾಂಗತ್

ಇವರು ಕ್ಯಾಲಿಫೋರ್ನಿಯಾದ ಸಾಂಟಾ ರೋಸಾ ವೆಟರನ್ಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿದ್ದಾರೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಸಾಂಕ್ರಾಮಿಕ ರೋಗಗಳಲ್ಲಿ ಖ್ಯಾತ ತಜ್ಞ ಡಾ. ರಾಗೇಶ್ ಅವರು ಕೋವಿಡ್ ಹರಡುವಿಕೆಯಿಂದ ರಕ್ಷಿಸಲು ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸಿದರು. ಸಾಂಕ್ರಾಮಿಕ ಸಮಯದಲ್ಲಿ ಇವರ ಅತ್ಯುತ್ತಮ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ದಾದಿಯರು

ಅತ್ಯುತ್ತಮ ವೈದ್ಯ: ಡಾ. ಸುನೀಲ್ ಕುಮಾರ್

ಇವರು ಫ್ಲೋರಿಡಾದ ಅತಿದೊಡ್ಡ ಆಸ್ಪತ್ರೆ ನೆಟ್‌ವರ್ಕ್‌ಗಳಲ್ಲಿ ಒಂದಾದ ಬ್ರಾವರ್ಡ್ ಹೆಲ್ತ್‌ನಲ್ಲಿ ಚೀಫ್-ಆಫ್-ಸ್ಟಾಫ್ ಆಗಿದ್ದಾರೆ. ಶ್ವಾಸಕೋಶಶಾಸ್ತ್ರ ಕ್ಷೇತ್ರದಲ್ಲಿ ಡಾ. ಸುನೀಲ್ ದಶಕಗಳ ಕಾಲ ಸೇವೆಯ ಅನುಭವ ಹೊಂದಿದ್ದಾರೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಅವರ ನಿಸ್ವಾರ್ಥ ಸೇವೆಯು ಹೆಚ್ಚು ಮೆಚ್ಚುಗೆ ಪಡೆದಿದೆ. ಫ್ಲೋರಿಡಾ ಗವರ್ನರ್‌ನ ಆರೋಗ್ಯ ಸಲಹೆಗಾರರಾಗಿ, ಇವರು ಕೋವಿಡ್ ಸಾಂಕ್ರಾಮಿಕ ದಿನಗಳಲ್ಲಿ ಅಮೆರಿಕ ಮಾಧ್ಯಮಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡರು. ಇಯಾನ್ ಚಂಡಮಾರುತವು ಅಪ್ಪಳಿಸಿದಾಗಲೂ ಡಾ. ಸುನೀಲ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು.

ಅತ್ಯುತ್ತಮ ನರ್ಸ್: ಡಾ. ತಂಕಮಣಿ ಅರವಿಂದನ್

ಡಾ. ತಂಕಮಣಿ ಅರವಿಂದನ್ ನರ್ಸಿಂಗ್‌ನಲ್ಲಿ ಡಾಕ್ಟರೇಟ್ ಹೊಂದಿದ್ದಾರೆ ಮತ್ತು ಈ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಕ್ಲಿನಿಕಲ್ ನರ್ಸ್, ನರ್ಸಿಂಗ್ ವೃತ್ತಿಪರ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದ್ದಾರೆ. ದಾದಿಯಾಗಿ ಇವರು ಭಾರತೀಯ ಸಮುದಾಯಕ್ಕಾಗಿ ಹಲವಾರು ಪ್ರತಿಷ್ಠಿತ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನ್ಯೂಜೆರ್ಸಿಯ ರಟ್ಜರ್ಸ್ ವಿಶ್ವವಿದ್ಯಾಲಯ ಮತ್ತು ಹ್ಯಾಕೆನ್‌ಸಾಕ್ ಮುಹ್ಲೆನ್‌ಬರ್ಗ್ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ಪ್ರಾಧ್ಯಾಪಕರೂ ಆಗಿದ್ದಾರೆ. ಜಾಗತಿಕ ಮಲಯಾಳಿ ಕೌನ್ಸಿಲ್‌ನ ಮುಂಚೂಣಿ ನಾಯಕರಾದ ಇವರು ಅಮೆರಿಕದ ಪ್ರಾದೇಶಿಕ ಅಧ್ಯಕ್ಷರಾಗಿದ್ದಾರೆ.

ದೇಹ ನಿರ್ಜಲೀಕರಣ ಮಾಡೋ PPE ಕಿಟ್‌ ಧರಿಸಿಕೊಂಡೇ ಉಪವಾಸವಿದ್ರೂ ಸೋಂಕಿತರ ಸೇವೆ ಮಾಡಿದ್ರು

 ನರ್ಸಿಂಗ್: ವಿಶೇಷ ತೀರ್ಪುಗಾರರ ಪ್ರಶಸ್ತಿ: ಪ್ರೀತಿ ಪೈನಾಡತ್.

 20 ವರ್ಷಗಳ ಅನುಭವ ಹೊಂದಿರುವ ಪ್ರೀತಿ ಪೈನಾಡತ್ ಟೆಕ್ಸಾಸ್‌ನಲ್ಲಿ ನರ್ಸ್ ಆಗಿದ್ದಾರೆ. ಇವರ ಅನುಕರಣೀಯ ಸೇವೆಯು ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳಿಗೆ ಸಹಾಯಕವಾಗಿದೆ. ತನ್ನ ವೃತ್ತಿಯಲ್ಲಿ ಆಲ್ ರೌಂಡರ್ ಆಗಿರುವ ಅವರು ಶುಶ್ರೂಷೆಯಲ್ಲಿನ ಅತ್ಯುತ್ತಮ ಸೇವೆಗಾಗಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರೀತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೃತ್ಯಗಾರ್ತಿಯಾಗಿಯೂ ಹೆಸರು ಮಾಡಿದ್ದಾರೆ.  

ಜೀವಮಾನದ ಸಾಧನೆ: ಡಾ. ಜಾಕೋಬ್ ಈಪೆನ್

ಅಮೆರಿಕದ ಮಲಯಾಳಿಗಳ ಹೆಮ್ಮೆ, ಡಾ. ಜಾಕೋಬ್ ಈಪೆನ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಶಿಶುವೈದ್ಯರಾಗಿದ್ದಾರೆ ಮತ್ತು ವೈದ್ಯಕೀಯ ಆರೈಕೆಯ ಎಲ್ಲಾ ವಿಭಾಗಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಅಲ್ಮೇಡಾ ಕೌಂಟಿ ಹೆಲ್ತ್ ಸರ್ವಿಸಸ್‌ನೊಂದಿಗೆ ಕೆಲಸ ಮಾಡುತ್ತಿರುವ .ಈಪೆನ್ 6ನೇ ಬಾರಿಗೆ ಫ್ರೀಮಾಂಟ್ ಮೂಲದ ವಾಷಿಂಗ್ಟನ್ ಆಸ್ಪತ್ರೆಯ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಸಾರ್ವಜನಿಕ ಚುನಾವಣೆಯಲ್ಲಿ ಗೆದ್ದ ಮೊದಲ ಭಾರತೀಯ ಎಂದೂ ಅನಿಸಿಕೊಂಡಿದ್ದಾರೆ.

ಡಾ. ಈಪೆನ್ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ವೆಲ್ಲೂರಿನ CMC ಮತ್ತು CMC ಲುಧಿಯಾನದಲ್ಲಿ ಉನ್ನತ ವ್ಯಾಸಂಗ ಮಾಡಿದರು. ಹಾಗೂ, ತಾಂಜೇನಿಯಾದ ಅಗಾ ಖಾನ್ ಫೌಂಡೇಶನ್ ಆಸ್ಪತ್ರೆಯಲ್ಲಿ ಸಲಹೆಗಾರ ಶಿಶುವೈದ್ಯರಾಗಿ ಕೆಲಸ ಮಾಡಿದ್ದಾರೆ. 1984 ರಲ್ಲಿ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನ ಪೂರ್ಣಗೊಳಿಸಿದ್ದು, ಸ್ಟ್ಯಾನ್‌ಫೋರ್ಡ್ ವಿವಿಯಲ್ಲಿ MD ಮಾಡಿದ್ದಾರೆ. ಇವರು, ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ನಿಂದ ನಿಯೋಜನೆಯ ಮೇರೆಗೆ ಫಿಲಿಪೈನ್ಸ್‌ನಲ್ಲಿ ಕೆಲಸ ಮಡಿದ್ದಾರೆ. ಹಾಗೂ, ನಾನಾ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಡಾ.ಎಂ.ವಿ. ಪಿಳ್ಳೈ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ತೀರ್ಪುಗಾರರ ಸಮಿತಿಯು ಡಾ.ಎಸ್.ಎಸ್.ಲಾಲ್, ಡಾ.ಫ್ರೀಮು ವರ್ಗೀಸ್ ಮತ್ತು ಡಾ. ಆನಿ ಪೌಲ್ ಸೇರಿದಂತೆ ತಜ್ಞರನ್ನು ಒಳಗೊಂಡಿತ್ತು. ಏಷ್ಯಾನೆಟ್ ನ್ಯೂಸ್‌ನ ವ್ಯವಸ್ಥಾಪಕ ಸಂಪಾದಕ ಮನೋಜ್ ಕೆ.ದಾಸ್ ಮತ್ತು ಹಿರಿಯ ಸಹಾಯಕ ಸಂಪಾದಕ ಅನಿಲ್ ಅಡೂರ್ ಸಹ ಪ್ರಶಸ್ತಿ ಆಯ್ಕೆ ಸಭೆಯ ಭಾಗವಾಗಿದ್ದರು. ಹಾಗೂ, ಅಮೆರಿಕದ ಏಷ್ಯಾನೆಟ್ ನ್ಯೂಸ್‌ನ ಮುಖ್ಯಸ್ಥ ಡಾ.ಕೃಷ್ಣಕುಮಾರ್ ಸಭೆಗಳಲ್ಲಿ ಸಂಚಾಲಕರಾಗಿದ್ದರು ಮತ್ತು ರಾಯ್ ಜಾರ್ಜ್ ಸಹ ಉಪಸ್ಥಿತರಿದ್ದರು.

ಪ್ರತಿ ವರ್ಗಕ್ಕೆ ವಿಜೇತರನ್ನು ಆಯ್ಕೆ ಮಾಡಲು ತೀರ್ಪುಗಾರರು ಅಮೆರಿಕದ ರಾಜ್ಯಗಳಿಂದ ನಾಮನಿರ್ದೇಶನಗಳನ್ನು ಪರಿಗಣಿಸಿದರು. ಆಯ್ಕೆ ಪ್ರಕ್ರಿಯೆಯು ಕಠಿಣವಾಗಿತ್ತು ಎಂಬುದು ತೀರ್ಪುಗಾರರ ಅಭಿಪ್ರಾಯ.

ಇನ್ನು, ಡಿಸೆಂಬರ್ 11 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು.

Follow Us:
Download App:
  • android
  • ios