ಅರವಿಂದ್ ಕೇಜ್ರವಾಲ್ ಅಧಿಕೃತ ನಿವಾಸ ನವೀಕರಿಸಲು 45 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಅನ್ನೋ ಆರೋಪ ಮತ್ತೆ ಆಪ್ ಸರ್ಕಾರಕ್ಕೆ ಸಂಕಷ್ಟ ತಂದಿದೆ. ಇದೀಗ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ. 

ನವದೆಹಲಿ(ಸೆ.27) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಅಬಕಾರಿ ಹಗರಣದ ಸಂಕಷ್ಟದಿಂದ ನಿಧಾನವಾಗಿ ಹೊರಬರುತ್ತಿದ್ದಂತೆ ಇದೀಗ ಸಿಎಂ ಮನ ನವೀಕರಣ ಪ್ರಕರಣ ಉರುಳು ಬಿಗಿಯಾಗುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸವನ್ನು ನವೀಕರಿಸಲು 45 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಆರೋಪ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ಕಳೆದ ಕೆಲದಿನಗಳಿಂದ ತಣ್ಣಗಾಗಿತ್ತು. ಇದೀಗ ಕೇಂದ್ರ ಸರ್ಕಾರ ಸಿಎಂ ಮನೆ ನವೀಕರಣ ಅಕ್ರಮ ತನಿಖೆ ಹೊಣೆಯನ್ನು ಸಿಬಿಐಗೆ ನೀಡಿದೆ. ಕೇಂದ್ರದ ಈ ನಡೆಯಿಂದ ಅರವಿಂದ್ ಕೇಜ್ರಿವಾಲ್‌ಗೆ ಇದೀಗ ಸಂಕಷ್ಟ ಹಚ್ಚಾಗಿದೆ.

ಕೇಂದ್ರ ಗೃಹ ಸಚಿವಾಲಯ ಆದೇಶದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ದೆಹಲಿ ಸರ್ಕಾರದ ವಿವಿಧ ಇಲಾಖೆಗಳ ವರದಿ ಕೇಳಿದ್ದಾರೆ. ಪ್ರಮುಕವಾಗಿ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ ಬಳಿ ಸಿಎಂ ನಿವಾಸ ನವೀಕರಣದ ಕುರಿತು ಲಭ್ಯವಿರುವ ಎಲ್ಲಾ ದಾಖಲೆಗಳನ್ನು, ಕಡತಗಳನ್ನು ಅಕ್ಟೋಬರ್ 3ರೊಳಗೆ ಸಿಬಿಐಗೆ ಸಲ್ಲಿಸಲು ಸೂಚಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕೇಂದ್ರಕ್ಕೆ ಬರೆದಿದ್ದ 5 ಪುಟಗಳ ಪತ್ರದ ಆಧಾರದಲ್ಲಿ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. 

ಉಚಿತ ಯೋಜನೆಯಿಂದ ಸಾಲದ ಸುಳಿಯಲ್ಲಿ ಪಂಜಾಬ್, ದಾಖಲೆ ಬಹಿರಂಗಪಡಿಸಿದ ಸಿಧು!

ಆರೋಪ ಏನು?
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸವನ್ನು ನವೀಕರಿಸಲು 45 ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಈ ಗಂಭೀರ ಆರೋಪನ್ನು ಮಾಡಿತ್ತು. ಕೇಜ್ರಿವಾಲ್‌, ತಮ್ಮ ಮನೆಗೆ 45 ಕೋಟಿ ರು. ವೆಚಚ್ಚದಲ್ಲಿ ನವೀಕರಣ ಮಾಡಿಸಿಕೊಂಡಿದ್ದಾರೆ. ಮನೆಗೆ ಖರೀದಿಸಿದ 8 ಕರ್ಟೈನ್‌ಗಳ ಬೆಲೆ ಕನಿಷ್ಠ 3.57 ಲಕ್ಷ ರು. ಇಂದ 7.94 ಲಕ್ಷ ರು. ಇದೆ. ಅಲ್ಲದೇ ವಿಯೆಟ್ನಾಂನಿಂದ 1.15 ಕೋಟಿ ರು. ಬೆಲೆಯ ಅಮೃತಶಿಲೆ ತರಲಾಗಿದೆ ಎನ್ನಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ 80 ವರ್ಷಗಳಷ್ಟುಹಳೆಯ ಮನೆ ಅಲ್ಲಲ್ಲಿ ಪತನಗೊಳ್ಳುತ್ತಿದ್ದ ಕಾರಣ ಕೇಂದ್ರ ಲೋಕೋಪಯೋಗಿ ಸಚಿವಾಲಯದ ಶಿಫಾರಸಿನ ಅನ್ವಯ ನವೀಕರಣ ಮಾಡಲಾಗಿದೆ ಎಂದು ಆಪ್‌ ಸ್ಪಷ್ಟನೆ ನೀಡಿತ್ತು. 

ಇತ್ತ ದೆಹಲಿ ಕಾಂಗ್ರೆಸ್ ಮಾಡಿದ ಆರೋಪಕ್ಕೆ ಆಪ್ ಬೆಚ್ಚಿ ಬಿದ್ದಿತ್ತು. ಕೇಜ್ರಿವಾಲ್‌ ನಿವಾಸ ನವೀಕರಣಕ್ಕೆ 45 ಕೋಟಿ ರು. ವ್ಯಯ ಮಾಡಲಾಗಿದೆ ಎಂದು ಬಿಜೆಪಿ ಟೀಕಿಸಿದ್ದ ಬೆನ್ನಲ್ಲೇ ಕೇಜ್ರಿ ನಿವಾಸಕ್ಕೆ ಒಟ್ಟು 171 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಇದೀಗ ಕಾಂಗ್ರೆಸ್‌ ಆರೋಪಿಸಿದೆ. 

ಸದನದಲ್ಲಿ ಕೇಜ್ರಿವಾಲ್ ದಿಲ್ಲಿ ಮಾಡೆಲ್ ಬಣ್ಣ ಬಯಲು ಮಾಡಿದ ಆಪ್ ಶಾಸಕ, ಆಪ್‌ಗೆ ಮುಖಭಂಗ!

ಕೇಜ್ರಿ ನಿವಾಸದ ಪಕ್ಕದಲ್ಲಿ ಅಧಿಕಾರಿಗಳ 22 ಮನೆಗಳಿರುವ 6 ವಸತಿ ಸಮುಚ್ಛಯಗಳಿದ್ದವು. ಕೇಜ್ರಿ ಮನೆ ನವೀಕರಣಕ್ಕಾಗಿ ಈ 22 ಮನೆಗಳ ಪೈಕಿ 15 ಮನೆಗಳನ್ನು ಉರುಳಿಸಲಾಗಿದೆ ಇಲ್ಲವೇ ತೆರವು ಮಾಡಲಾಗಿದೆ. ಹೀಗೆ ಮನೆ ಖಾಲಿ ಮಾಡಿದ ಅಧಿಕಾರಿಗಳಿಗಾಗಿ 126 ಕೋಟಿ ರು. ವೆಚ್ಚದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ವಿಲೇಜ್‌ನಲ್ಲಿ 21 ಮನೆಗಳನ್ನು ಖರೀದಿಸಲಾಗಿದೆ. ಅಂದರೆ ಮನೆ ನವೀಕರಣ ಮತ್ತು ಅದಕ್ಕೆ ಸಂಬಂಧಿಸಿದ ಒಟ್ಟು ವೆಚ್ಚ 171 ಕೋಟಿ ರು. ಸರಳ ಜೀವನ ಶೈಲಿಯ ನೆಪವಾಗಿಟ್ಟುಕೊಂಡು ಕೇಜ್ರಿವಾಲ್‌ ತಮ್ಮ ನಿವಾಸಕ್ಕೆ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಜನರು ಆಕ್ಸಿಜನ್‌ ಇಲ್ಲದೆ ಒದ್ದಾಡುತ್ತಿದ್ದ ವೇಳೆ ಕೇಜ್ರಿವಾಲ್‌ ತಮ್ಮ ಮನೆಗೆ 171 ಕೋಟಿ ರು. ವ್ಯಯಿಸಿದ್ದರು ಎಂದು ಕಾಂಗ್ರೆಸ್‌ ವಕ್ತಾರ್‌ ಅಜಯ ಮಾಕನ್‌ ಆರೋಪ ಮಾಡಿದ್ದರು.