ನವದೆಹಲಿ(ಆ.14): ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾ ವರದಿ ನೆಗೆಟಿವ್ ಬಂದಿದ್ದು, ಅವರು ಮಹಾಮಾರಿಯಿಂದ ಮುಕ್ತಿ ಪಡೆದಿದಿದ್ದು ಆಸ್ಪತ್ರೆಯಿಂಡಿ ಡಿಸ್ಚಾರ್ಜ್ ಆಗಿದ್ದಾರೆ.

ಟ್ವಿಟರ್ ಮೂಲಕ ವಿಚಾರ ತಿಳಿಸಿರುವ ಅಮಿತ್ ಶಾ, ಈ ಸಂದರ್ಭದಲ್ಲಿ ಹಾರೈಸಿದ, ನನಗೆ ಚಿಕಿತ್ಸೆ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವೈದ್ಯರ ಸಲಹೆ ಮೇರೆಗೆ ಮನೆಲ್ಲೇ ಕೆಲವು ದಿನ ವಿಶ್ರಾಂತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಕೊರೋನಾಕ್ಕೆ ತುತ್ತಾಗಿರುವ ಎಸ್‌ಪಿಬಿ ಆರೋಗ್ಯ ಗಂಭೀರ

ಆಗಸ್ಟ್ 2ರಂದು ಅಮಿತ್ ಶಾರವರ ಕೊರೋನಾ ವೈರಸ್ ವರದಿ ಪಾಸಿಟಿವ್ ಎಂದು ಬಂದಿತ್ತು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೋನಾ ಸೋಂಕಿನ ಕಾರಣಕ್ಕೆ ಅಮಿತ್ ಶಾ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ತಪ್ಪಿಸಿಕೊಂಡಿದ್ದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಕೊರೋನಾ ಗೆದ್ದು ವಾಪಾಸಾಗಿದ್ದರು .