Asianet Suvarna News Asianet Suvarna News

Revised Home Isolation Rules: : ಇನ್ನು 10 ದಿನ ಬದಲು 7 ದಿನ ಹೋಮ್‌ ಐಸೋಲೇಶನ್‌

  • ಇನ್ನು 10 ದಿನ ಬದಲು 7 ದಿನ ಹೋಮ್‌ ಐಸೋಲೇಶನ್‌
  •  ಕೊನೆಯ 3 ದಿನ ಜ್ವರ ಕಾಣಿಸಿಕೊಳ್ಳಬಾರದು
  •  ಹೀಗಾದರೆ 7 ದಿನದಲ್ಲಿ ಕ್ವಾರಂಟೈನ್‌ ಅಂತ್ಯ
  •  ಹೋಂ ಐಸೋಲೇಷನ್‌ಗೆ ಪರಿಷ್ಕೃತ ಮಾರ್ಗಸೂಚಿ
     
Home Isolation Cut To 7 Days From 10 days snr
Author
Bengaluru, First Published Jan 6, 2022, 7:44 AM IST

ನವದೆಹಲಿ (ಜ.06): ದೇಶಾದ್ಯಂತ ಕೋವಿಡ್‌ (Covid ) ಸೋಂಕಿತರ ಪ್ರಮಾಣ ಭಾರೀ ಏರಿಕೆ ಕಾಣುತ್ತಿರುವ ಬೆನ್ನಲ್ಲೇ, ಹೋಂ ಐಸೋಲೇಷನ್‌ಗೆ (Home Isolation) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮೊದಲು ಸೋಂಕು ಕಾಣಿಸಿಕೊಂಡ ದಿನದಿಂದ 10 ದಿನ ಹೋಂ ಐಸೋಲೇಷನ್‌ ಕಡ್ಡಾಯವಿದ್ದರೆ, ಅದನ್ನೀಗ 7 ದಿನಕ್ಕೆ ಇಳಿಸಲಾಗಿದೆ. ಜೊತೆಗೆ ಕಡೆಯ ಮೂರು ದಿನ ಸತತವಾಗಿ ಜ್ವರದಿಂದ ಮುಕ್ತರಾಗಿದ್ದರೆ ಹೋಂ ಐಸೋಲೇಷನ್‌ನಿಂದ ಹೊರಬಹುದು. ಆಗ ಟೆಸ್ಟ್‌  (Test) ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಾರ್ಗಸೂಚಿ ಹೇಳಿದೆ.

ಮಾರ್ಗಸೂಚಿಯಲ್ಲೇನಿದೆ?: 

- ಸೋಂಕು ಕಾಣಿಸಿಕೊಂಡ 7 ದಿನ, ಸತತ 3 ದಿನ ಜ್ವರ ಕಾಣಿಸಿಕೊಳ್ಳದೇ ಇದ್ದರೆ ಹೋಂ ಐಸೋಲೇಷನ್‌ ಅಂತ್ಯ.

- ಹೋಂ ಐಸೋಲೇಷನ್‌ ಮುಗಿದ ಬಳಿಕ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ.

- ರೋಗಿಯನ್ನು ವೈದ್ಯಕೀಯ ಅಧಿಕಾರಿಗಳೇ ಸೌಮ್ಯ/ ಲಕ್ಷಣ ರಹಿತ ಸೋಂಕಿತ ಎಂದು ಘೋಷಿಸಬೇಕು. ರೋಗಿಯ ಕುಟುಂಬಕ್ಕೆ ಪರೀಕ್ಷೆ, ವೈದ್ಯಕೀಯ ನಿರ್ವಹಣೆ ಸಂಬಂಧಿತ ನೆರವಿವಾಗಿ ಕಂಟ್ರೋಲ್‌ ರೂಂ ನಂಬರ್‌ ನೀಡಬೇಕು.

- ಹೋಂ ಐಸೋಲೇಷನ್‌ಗೆ ಒಳಗಾಗುವ ರೋಗಿ, ಮನೆಯಲ್ಲಿ ಯಾರ ಸಂಪರ್ಕಕ್ಕೂ ಬರದೆ ಪ್ರತ್ಯೇಕವಾಗಿ ಇರಬಲ್ಲ ವ್ಯವಸ್ಥೆ ಹೊಂದಿರಬೇಕು.

- ರೋಗಿಗೆ ನೆರವಾಗಲು 2 ಡೋಸ್‌ ಲಸಿಕೆ ಪಡೆದ ದಿನದ 24 ಗಂಟೆಯೂ ಲಭ್ಯವಿರುವ ವ್ಯಕ್ತಿ ಇರಬೇಕು.

- ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟಸೋಂಕಿತರ ಹೋಂ ಐಸೋಲೇಷನ್‌ ಸಂಬಂಧ, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಅಧಿಕಾರಿಗಳೇ ಸೂಕ್ತ ಮಾರ್ಗದರ್ಶನ ನೀಡಿರಬೇಕು.

- ರೋಗಿ 3 ಸ್ತರದ ಮಾಸ್ಕ್‌ ಧರಿಸಿರಬೇಕು. ಸ್ವಯಂ ದೇಹದ ಉಷ್ಣತೆ ಮಾಪನ, ರಕ್ತದಲ್ಲಿನ ಆಮ್ಲಜನಕ ಮತ್ತು ಪಲ್ಸ್‌ ಆಕ್ಸಿಮೀಟರ್‌ ಮೂಲಕ ತಪಾಸಣೆ ಮಾಡಿಕೊಳ್ಳಬೇಕು.

- ರೋಗಿ ಸಾಕಷ್ಟುನೀರು ಕುಡಿಯಬೇಕು, ಸ್ವಚ್ಛತೆ ಕಾಪಾಡಿಕೊಳ್ಳಬೇಕು

ಒಂದೇ ದಿನ ಕೊರೋನಾ ಸ್ಫೋಟ :    ಭಾರತದಲ್ಲಿ(India) ದಿನೇದಿನೇ ಕೋವಿಡ್‌(Covid19) ಆರ್ಭಟ ಹೆಚ್ಚುತ್ತಿದ್ದು, ಎಂಟೇ ದಿನದಲ್ಲಿ ಸೋಂಕಿತರ ಸಂಖ್ಯೆ ಶೇ.630 ರಷ್ಟು(6.3 ಪಟ್ಟು) ಏರಿಕೆ ಕಂಡಿದೆ. ದೇಶದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 58,097 ಕೊರೋನಾ(Coronavirus) ಪ್ರಕರಣಗಳು ದೃಢಪಟ್ಟಿವೆ.

8 ದಿನಗಳ ಹಿಂದೆ ಬುಧವಾರ 9195 ಪ್ರಕರಣ ದೇಶದಲ್ಲಿ ದಾಖಲಾಗಿದ್ದವು. ಇದಕ್ಕೆ ಹೋಲಿಸಿದರೆ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆಯಾದಂತಾಗಿದೆ. ಅಲ್ಲದೆ, ಇದು ಕಳೆದ 199 ದಿನಗಳ (ಆರೂವರೆ ತಿಂಗಳು) ನಂತರದ ಗರಿಷ್ಠ ಸಂಖ್ಯೆಯಾಗಿದ್ದು, ಜೂನ್‌ 20ರಂದು ದೇಶದಲ್ಲಿ ಒಂದೇ ದಿನ 48,419 ಕೇಸ್‌ ಪತ್ತೆಯಾಗಿದ್ದವು. ಇದೇ ವೇಳೆ, ನಾಲ್ಕೇ ದಿನದಲ್ಲಿ ಕೋವಿಡ್‌ ಸೋಂಕು ಪ್ರಮಾಣ ದ್ವಿಗುಣಗೊಂಡಿದೆ ಎಂದೂ ಕೇಂದ್ರ ಸರ್ಕಾರ(Central Government) ಹೇಳಿದೆ.

"

Covid Threat: ಕರ್ನಾಟಕ ಸೇರಿ ದೇಶದ 8 ರಾಜ್ಯ ಆತಂಕಕಾರಿ

ಇನ್ನು ಬುಧವಾರ ಇದೇ ಅವಧಿಯಲ್ಲಿ ಕೇರಳದ(Kerala) ಹಳೆಯ ಸಾವುಗಳೂ ಸೇರಿ 534 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 2.14 ಲಕ್ಷ ಗಡಿ ದಾಟಿದೆ. ಇದು ಕಳೆದ 81 ದಿನಗಳ ನಂತರದ ಗರಿಷ್ಠ ಸಂಖ್ಯೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.01ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರ ಶೇ.5.03ಕ್ಕೆ ಹೆಚ್ಚಿದೆ. ಈ ನಡುವೆ, ಈವರೆಗೆ 147 ಕೋಟಿ ಡೋಸ್‌ ಲಸಿಕೆ(Vaccine) ವಿತರಣೆ ಮಾಡಲಾಗಿದೆ.

2000 ದಾಟಿದ ಒಮಿಕ್ರೋನ್‌,  243 ಹೊಸ ಒಮಿಕ್ರೋನ್‌ ಕೇಸು ಪತ್ತೆ

ದೇಶಾದ್ಯಂತ ಬುಧವಾರ 243 ಒಮಿಕ್ರೋನ್‌(Omicron) ಕೋವಿಡ್‌ ರೂಪಾಂತರಿ ಕೇಸ್‌ ಪತ್ತೆಯಾಗಿವೆ. ಈ ಮೂಲಕ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 2,135ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 653, ದೆಹಲಿಯಲ್ಲಿ 464, ಕೇರಳದಲ್ಲಿ 185, ರಾಜಸ್ಥಾನದಲ್ಲಿ 174, ತಮಿಳುನಾಡಲ್ಲಿ 121 ಕೇಸ್‌ ಪತ್ತೆಯಾಗಿವೆ. ಒಟ್ಟು ಒಮಿಕ್ರೋನ್‌ ಸೋಂಕಿತರ ಪೈಕಿ 828 ಮಂದಿ ಗುಣಮುಖರಾಗಿದ್ದಾರೆ.

Coronavirus ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಆಸ್ಪತ್ರೆಗಳಿಗೆ ಖಡಕ್ ಸೂಚನೆ ಕೊಟ್ಟ ಸರ್ಕಾರ

ಕರ್ನಾಟಕದಲ್ಲಿ ಕೊರೋನಾ ಕೇಸ್ ದ್ವಿಗುಣ, ಹೆಚ್ಚಾಯ್ತು ಆತಂಕ

ಕರ್ನಾಟಕ(Karnataka) ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೈಟ್ ಕರ್ಫ್ಯೂ(Night Curfew) ಜಾರಿ ಮಾಡಿದೆ. ಆದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದಿನ ದಿನಕ್ಕೆ ದ್ವಿಗುಣವಾಗುತ್ತಿದೆ.

ಹೌದು.. ಜ.04 ಗಿಂತ ಜ.05 ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಡಬಲ್ ಆಗಿದೆ. ಕಳೆದ 24 ಗಂಟೆಗಳಲ್ಲಿ  4,246  ಪ್ರಕರಣಗಳು ಪತ್ತೆ ಆಗಿವೆ.  ಇನ್ನು ಕೊರೋನಾ ಹಾಟ್‌ಸ್ಫಾಟ್(Corona Hotspot) ಆಗುತ್ತಿರುವ ಬೆಂಗಳೂರಿನಲ್ಲಿ(Bengaluru) ಇಂದು ಒಂದೇ ದಿನ 3,605 ಜನರಿಗೆ ಸೋಂಕು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್​ ಶೇ. 3.33ಕ್ಕೇರಿದೆ. ಕೊರೋನಾ ಆತಂಕದ ಮಧ್ಯೆ ರೂಪಾಂತರಿ ವೈರಸ್ ಒಮಿಕ್ರಾನ್‌ ಸಹ ಹೆಚ್ಚಳವಾಗಿದ್ದು, ಇದುವರೆಗೆ 226 ಜನರಿಗೆ ಕೇಸ್ ಪತ್ತೆಯಾಗಿದೆ  ಎಂದು ಟ್ವಿಟರ್​​ನಲ್ಲಿ (Twitter)ಆರೋಗ್ಯ ಸಚಿವ ಡಾ.ಕೆ. ಸುಧಾಕರ್​(Dr K Sudhakar) ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios