ನೂಪುರ್‌ಗೆ ಬೆಂಬಲ ಸೂಚಿಸಿದ ಟಿ ಸ್ಟಾಲ್ ಹಿಂದೂ ಯುವಕನ ಮೇಲೆ 20 ಮಂದಿಯಿಂದ ಭೀಕರ ದಾಳಿ!
- ಫೇಸ್‌ಬುಕ್ ಪೋಸ್ಟ್ ಹಾಕಿದ್ದ ಟಿ ಸ್ಟಾಲ್ ನಡೆಸುತ್ತಿದ್ದ ಯುವಕ
- ನೂಪುರ್ ಬೆಂಬಲ ಸೂಚಿಸಿ ಪೋಸ್ಟ್, 20 ಮುಸ್ಲಿಮ್ ಯುವಕರಿಂದ ಹಲ್ಲೆ
- ಪಕ್ಕದ ಅಂಗಡಿಯಲ್ಲಿದ್ದ ರಾಯೀಸ್ ಎಚ್ಚರಿಕೆ ನಿರ್ಲಕ್ಷ್ಯಿಸಿದ್ದ ಯುವಕ
ಪಾಟ್ನಾ(ಜು.06): ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಕಾರಣಕ್ಕೆ ಮತ್ತೊಂದು ದಾಳಿ ನಡೆದಿದೆ. ಬಿಹಾರದ ಭೋಜ್‌ಪುರ್ ಜಿಲ್ಲೆಯಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದ ಹಿಂದೂ ಯುವಕ ದೀಪಕ್ ಮೇಲೆ ಭೀಕರ ದಾಳಿ ನಡೆದಿದೆ. 20 ಮುಸ್ಲಿಮ್ ಯುವಕರು ಟಿ ಸ್ಟಾಲ್‌ಗೆ ಆಗಮಿಸಿ ಹಲ್ಲೆ ನಡೆಸಿದ್ದಾರೆ.
ದೀಪಕ್ ಟೀ ಸ್ಟಾಲ್ ಪಕ್ಕದಲ್ಲೇ ರಾಯೀಸ್ ಅನ್ನೋ ಮುಸ್ಲಿಮ್ ಯುವಕ ವ್ಯಾಪಾರ ಮಾಡುತ್ತಿದ್ದ. ದೀಪಕ್ ಫೇಸ್‌ಬುಕ್‌ನಲ್ಲಿ ಐ ಸಪೂರ್ಟ್ ನೂಪುರ್ ಶರ್ಮಾ ಅನ್ನೋ ಪೋಸ್ಟ್ ಹಾಕಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಯೀಸ್, ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳುವಂತೆ ಸೂಚಿಸಿದ್ದ. ಆದರೆ ಸೂಚನೆ ನಿರ್ಲಕ್ಷ್ಯಿಸಿದ್ದ ದೀಪಕ್‌ಗೆ ತಕ್ಕ ಪಾಠ ಕಲಿಸಲು ರಾಯೀಸ್ ಇತರ ಮುಸ್ಲಿಮ್ ಯುವಕರಿಗೆ ಮಾಹಿತಿ ನೀಡಿದ್ದಾನೆ.
ನೂಪುರ್ ಶರ್ಮ ತಲೆ ತಂದವರಿಗೆ ನನ್ನ ಮನೆಯನ್ನ ದಾನ ಮಾಡ್ತೇನೆ
20 ಮುಂದಿ ಮುಸ್ಲಿಮ್ ಯುವಕರು ನೇರವಾಗಿ ದೀಪಕ್ ಟೀ ಸ್ಟಾಲ್‌ಗೆ ಆಗಮಿಸಿ ದಾಂಧಲೆ ನಡೆಸಿದ್ದಾರೆ. ದೀಪಕ್ ಮೇಲೆ ಹಲ್ಲೆ ನಡೆಸಿದ್ದಾರೆ. ನೂಪುರ್ ಶರ್ಮಾ ಬೆಂಬಲಿಸುವ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ದಾಳಿ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿದ 20 ಯುವಕರು ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ದೀಪಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇತ್ತ ಟೀ ಸ್ಟಾಲ್ ಸಂಪೂರ್ಣ ಧ್ವಂಸ ಮಾಡಲಾಗಿದೆ. ಇದೀಗ ನೂಪರ್ ಶರ್ಮಾ ಬೆಂಬಲಿಸದವರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವ ವ್ಯವಸ್ಥಿತಿ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ ಅನ್ನೋ ಅನುಮಾನಗಳನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ನೂಪರ್ ಶರ್ಮಾಗೆ ಬೆಂಬಲ ಸೂಚಿಸಿದ ಉದಯಪುರದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ಭೀಕರ ಹತ್ಯೆ, ಮಹಾರಾಷ್ಟ್ರದಲ್ಲಿ ಮೆಡಿಕಲ್ ಸ್ಟೋರ್ ಮಾಲೀಕ ಉಮೇಶ್ ಕೋಲ್ಹೆ ಕೊಲೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಧರ ಬೆನ್ನಲ್ಲೇ ಇದೀಗ ಬಿಹಾರದಲ್ಲೂ ಇದೇ ರೀತಿ ದಾಳಿ ನಡೆದಿದೆ. ಅದೃಷ್ಟವಶಾತ್ ಹಿಂದೂ ಯುವಕ ಅಪಾಯದಿಂದ ಪಾರಾಗಿದ್ದಾನೆ. ಆದರೆ ದೇಶದ ಹಲವು ಭಾಗಗಳಲ್ಲಿ ಈ ದಾಳಿ ಆತಂಕ ಹೆಚ್ಚಾಗುತ್ತಿದೆ.
ಹತ ಅಮರಾವತಿ ಔಷಧ ವ್ಯಾಪಾರಿ, ಹಂತಕ ಇಬ್ಬರೂ Whatsapp ಗೆಳೆಯರು!
ನೂಪುರ್ ಶಿರಚ್ಛೇದ ಮಾಡಿದವರಿಗೆ ಮನೆ, ಆಸ್ತಿ ಬಹುಮಾನ!
ರಾಜಸ್ಥಾನದ ಅಜ್ಮೇರಿನ ವ್ಯಕ್ತಿಯೊಬ್ಬನು ಪ್ರವಾದಿ ಮೊಹಮ್ಮದ್ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದನ ಮಾಡಿದರಿಗೆ ತನ್ನ ಮನೆ ಹಾಗೂ ಆಸ್ತಿಯನ್ನು ಬಹುಮಾನವಾಗಿ ನೀಡುವೆ ಎಂದು ಘೋಷಿಸಿದ್ದಾನೆ. ಈ ವ್ಯಕ್ತಿಯನ್ನು ಸಲ್ಮಾನ್ ಚಿಸ್ತಿ ಎಂದು ಗುರುತಿಸಲಾಗಿದ್ದು, ವಿಡಿಯೋದಲ್ಲಿ ಆತ ನೂಪುರ್ ಶರ್ಮಾ ತಲೆಯನ್ನು ತಂದುಕೊಟ್ಟವರಿಗೆ ನನ್ನ ಮನೆ ಆಸ್ತಿ ನೀಡುತ್ತೇನೆ ಎಂದು ಘೋಷಿಸಿದ್ದಾನೆ.
ಈ ವಿಡಿಯೋದಲ್ಲಿ ಆತ ಮುಸ್ಲಿಮರನ್ನು ದೇಶದೆಲ್ಲಡೆ ಕಿರುಕುಳ ಕೊಡಲಾಗುತ್ತಿದೆ, ಕೊಲ್ಲಲಾಗುತ್ತಿದೆ ಎಂದು ಆರೋಪಿಸಿದ್ದಾನೆ. ವಿಡಿಯೋ ವೈರಲ್ ಆಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠ ವಿಕಾಸ ಸಾಂಗ್ವಾನ್ ಅವರು ಇದರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.‘ವಿಡಿಯೋ ವಾಟ್ಸಾಪ್‌ನಲ್ಲಿ ನನಗೂ ತಲುಪಿದೆ. ಸಲ್ಮಾನ್ ಚಿಸ್ತಿ ಕುಡಿದ ಮತ್ತಿನಲ್ಲಿ ಈ ವಿಡಿಯೋ ಮಾಡಿದ್ದಾನೆ ಎಂಬಂತೆ ಕಂಡುಬರುತ್ತದೆ. ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ವಿಡಿಯೋ ವೈರಲ್ ಆಗುವುದನ್ನು ತಪ್ಪಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಸಾಂಗ್ವಾನ್ ಹೇಳಿದ್ದಾರೆ. ‘ಸಲ್ಮಾನ್ ಚಿಸ್ತಿ ದರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಶೀಘ್ರವೇ ಆತನನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಕನ್ಹಯ್ಯಲಾಲ್ ಕುಟುಂಬಕ್ಕೆ ಸಹಾಯ, 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ!