Asianet Suvarna News Asianet Suvarna News

ತಿಲಕ ಅಳಿಸಿ ಹಿಂದೂ ಬಾಲಕನಿಗೆ ಥಳಿಸಿದ ಮುಸ್ಲಿಂ ವಿದ್ಯಾರ್ಥಿಗಳ ಗುಂಪು, ಶಾಲೆಯಲ್ಲಿ ಮಾರಾಮಾರಿ!

ಶಾಲೆಯಲ್ಲಿ ಎರಡು ಕೋಮುಗಳ ನಡುವೆ ಮಾರಾಮಾರಿ ನಡೆದಿದೆ. 11ನೇ ತರಗತಿ ವಿದ್ಯಾರ್ಥಿ ತಿಲಕವಿಟ್ಟು ಶಾಲೆಗೆ ಆಗಮಿಸಿದ ಕಾರಣಕ್ಕೆ ಮುಸ್ಲಿಂ ಗುಂಪು ಕೆರಳಿದೆ. ಬಾಲಕನಿಗೆ ಥಲಿಸಿ ತಿಲಕ ಅಳಿಸಿ ಹಾಕಿದ್ದಾರೆ. ಇತ್ತ ಬಾಲಕ ಹಾಗೂ ಕುಟುಂಬ ಸಮೇತೆ ಇಸ್ಲಾಂಗೆ ಮತಾಂತರವಾಗಲು ಬೆದರಿಕೆ ಹಾಕಲಾಗಿದೆ. ಈ ಘಟನೆಯಿಂದ ಭಾರಿ ಘರ್ಷಣೆ ನಡೆದಿದೆ. 

Hindu boy thrashed by Muslim student group for wearing tilak on forehead in Rajasthan alwar ckm
Author
First Published Jul 28, 2023, 6:41 PM IST | Last Updated Jul 28, 2023, 6:41 PM IST

ಅಲ್ವಾರ(ಜು.28)  ಶಾಲೆಯಲ್ಲೇ ಕೋಮು ಸಂಘರ್ಷದ ವಾತವರಣದಲ್ಲೇ ಹೆಚ್ಚಾಗುತ್ತಿದೆ. ಎರಡು ಕೋಮುಗಳ ನಡುವೆ ಮಾರಾಮಾರಿ ನಡೆಯುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಇದೀಗ 11 ವರ್ಷದ ಶಾಲಾ ಬಾಲಕ ಎಂದಿನಂತೆ ಹಣೆಗೆ ತಿಲಕವಿಟ್ಟು ತರಗತಿಗೆ ಆಗಮಿಸಿದ್ದಾನೆ. ಇದು ಮುಸ್ಲಿಂ ಯುವಕರ ಗುಂಪನ್ನು ಕೆರಳಿಸಿದೆ. ಪರಿಣಾಮ ಬಾಲಕನ ಹಿಡಿದು ಥಳಿಸಿದ್ದಾರೆ. ಇಷ್ಟೇ ಅಲ್ಲ ಬಾಲಕ ಹಾಗೂ ಆತನ ಕುಟುಂಬಕ್ಕೆ ಇಸ್ಲಾಂಗೆ ಮತಾಂತರವಾಗುವಂತೆ ಬೆದರಿಕೆ ಹಾಕಿದ ಘಟನೆ ರಾಜಸ್ಥಾನದ ಅಲ್ವಾರದ ಚೊಮಾ ಗ್ರಾಮದಲ್ಲಿ ನಡೆದಿದೆ.

ಚೊಮಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ 11 ನೇ ತರಗತಿ ವಿದ್ಯಾರ್ಥಿ ಶುಭಮ್ ರಜಪೂತ್ ಎಂದಿನಂತೆ ತಿಲಕವಿಟ್ಟು ತರಗತಿಗೆ ಆಗಮಿಸಿದ್ದಾನೆ. ಆದರೆ ಹಲವು ದಿನಗಳಿಂದ ಶುಭಮ್ ರಜಪೂತ್ ಗಮನಿಸುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಯುವಕರ ಗುಂಪು, ತಿಲಕ ಅಳಿಸಿ ತರಗತಿಗೆ ಹಾಜರಾಗುವಂತೆ ಎಚ್ಚರಿಸಿದ್ದಾರೆ. ಆದರೆ ಈ ಬೆದರಿಕೆಗೆ ಕಿವಿಗೊಡದ ಶುಭಮ್ ರಜಪೂತ್ ನೇರವಾಗಿ ತರಗತಿ ಪ್ರವೇಶಿಸಿದ್ದಾರೆ.ಇದು ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಯುವಕರ ಗುಂಪನ್ನು ಕೆರಳಿಸಿದೆ.

ಬಿಂದಿ ಇಟ್ಟು ಶಾಲೆಗೆ ಬಂದ ವಿದ್ಯಾರ್ಥಿನಿ ಥಳಿಸಿದ ಟೀಚರ್, ಬದುಕು ಅಂತ್ಯಗೊಳಿಸಿದ ಬಾಲಕಿ!

ಈ ಬೆದರಿಕೆ ಹಿಂದೂ ವಿದ್ಯಾರ್ಥಿಗಳ ಕಿವಿ ಬಿದ್ದಿದೆ. ಹೀಗಾಗಿ ಜುಲೈ 27 ರಂದು ಕೆಲ ಹಿಂದೂ ವಿದ್ಯಾರ್ಥಿಗಳು ತಿಲಕವಿತ್ತು ಶಾಲೆಗೆ ಆಗಮಿಸಿದ್ದಾರೆ. ಇದು ಮುಸ್ಲಿಂ ವಿದ್ಯಾರ್ಥಿಗಳನ್ನು ಮತ್ತಷ್ಟು ಕೆರಳಿಸಿದೆ. 8 ಮುಸ್ಲಿಂ ವಿದ್ಯಾರ್ಥಿಗಳ ಗುಂಪು ಶುಭಮ್ ರಜಪೂತ್ ಹಿಡಿದು ತಿಲಕ ಅಳಿಸುವಂತೆ ಬೆದರಿಸಿದ್ದಾರೆ. ಇದೇ ವೇಳೆ ಪ್ರಾಂಶುಪಾಲರಿಗೆ ದೂರು ನೀಡುವುದಾಗಿ ಹೇಳಿದ ಶುಭಮ್ , ಕೊಠಡಿಯತ್ತ ತೆರಳಲು ಮುಂದಾಗಿದ್ದಾನೆ. ಇತ್ತ 8 ಮುಸ್ಲಿಂ ವಿದ್ಯಾರ್ಥಿಗಳ ಗುಂಪು  ವಿದ್ಯಾರ್ಥಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ತಿಲಕ ಅಳಿಸಿದ್ದಾರೆ. 

ಈ ಘಟನೆ ಕಾಡ್ಗಿಚ್ಚಿನಂತೆ ಹರಡಿದೆ. ಹಿಂದೂ ವಿದ್ಯಾರ್ಥಿಗಳ ಪೋಷಕರು ದೂರು ದಾಖಲಿಸಿದ್ದಾರೆ. ಶುಭಮ್ ರಜಪೂತ್ ಪೋಷಕರು ಶಾಲೆಗೆ ಆಗಮಸಿದ್ದಾರೆ. ಇತ್ತ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಹಾಗೂ ಯುವಕರ ಗುಂಪು ಶಾಲೆಗೆ ಆಗಮಿಸಿ ಹೋರಾಟ ಆರಂಭಿಸಿದೆ. ಶುಭಮನ್ ಹಾಗೂ ಆತನ ಪೋಷಕರಿಗೆ ಇಸ್ಲಾಂಗೆ ಮತಾಂತರವಾಗುವಂತೆ ಬೆದರಿಕೆ ಹಾಕಿದ್ದಾರೆ.  ಈ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. 

Teacher beats student ಜಮ್ಮು ಕಾಶ್ಮೀರದಲ್ಲಿ ತಿಲಕವಿಟ್ಟು ಶಾಲೆ ಬಂದ ಬಾಲಕಿಗೆ ಥಳಿಸಿದ ಶಿಕ್ಷಕ!

ಶುಭಮ್ ರಜಪೂತ್ ಪೋಷಕರು ದೂರು ದಾಖಲಿಸಿದ್ದರು ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿಲ್ಲ. ಶಾಲಾ ಆವರಣದಲ್ಲಿ ಮಾರಾಮಾರಿ ನಡೆಯುತ್ತಿದ್ದರೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿಲ್ಲ. ದೂರಿನ ತನಿಖೆ ನಡೆಸಲು ಹಿಂದೇಟು ಹಾಕಿದ್ದಾರೆ. ಇದುವರೆಗೂ ಈ ಪ್ರಕರಣದ ಕುರಿತು ಯಾರೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಲ್ಲ ಎಂದು ಬಿಜೆಪಿ ನಾಯಕ ಜಯ್ ಅಹುಜಾ ಆರೋಪಿಸಿದ್ದಾರೆ. ರಾಜಸ್ಥಾನ ಸರ್ಕಾರ ಕೆಲವೇ ಸಮುದಾಯಕ್ಕೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ಎಚ್ಚರಿಕೆ ನೀಡಿದೆ.
 

Latest Videos
Follow Us:
Download App:
  • android
  • ios