ಇದೇನ್ ಕರ್ನಾಟಕವೋ ಇಲ್ಲ ಪಾಕಿಸ್ತಾನವೋ? ಸ್ವಿಗ್ಗಿ ಡೆಲಿವರಿಗಾಗಿ ಕನ್ನಡಿಗರು ಹಿಂದಿ ಕಲಿಬೇಕಾ?
ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಸೇವೆಗಳ ಕುರಿತು ಮಹಿಳೆಯೊಬ್ಬರು ಮಾಡಿದ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾಷಾ ವಿವಾದಕ್ಕೆ ಕಾರಣವಾಗಿವೆ. ಕರ್ನಾಟಕದಲ್ಲಿರುವ ನಾವು ಸ್ವಿಗ್ಗಿ ಡೆಲಿವರಿ ಬಾಯ್‌ಗೋಸ್ಕರ್ ಅವನ ರಾಜ್ಯ ಭಾಷೆ ಹಿಂದಿ ಕಲಿಯಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು (ಸೆ.16): ನಾವಿರುವುದು ಕನ್ನಡ ನಾಡು, ಕರ್ನಾಟಕ. ಇಲ್ಲಿನ ಪ್ರಾದೇಶಿಕ ಭಾಷೆ ಕನ್ನಡ ಅಥವಾ ಜಾಗತಿಕ ಮಟ್ಟದ ವ್ಯವಹಾರಿಕ ಭಾಷೆ ಇಂಗ್ಲೀಷ್ ಮಾತನಾಡಿದರೂ ಅಡ್ಡಿಯಿಲ್ಲ. ಆದರೆ, ಉತ್ತರ ಭಾರತೀಯ ಯುವಕನೊಬ್ಬ ನಮ್ಮಿಂದ ನಿಮಗೆ ಹಿಂದಿ ಬರುವುದಿಲ್ಲವೇ ಎಂದು ಪ್ರಶ್ನೆ ಮಾಡಿರುವುದು ಎಷ್ಟು ಸರಿ ಎಂದು ಬೆಂಗಳೂರು ಮಹಿಳೆಯೊಬ್ಬರು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಮಹಿಳೆಯೊಬ್ಬರು ಸ್ವಿಗ್ಗಿಯ ಡೆಲಿವರಿ ಸೇವೆಗಳ ಕುರಿತು ಟೀಕೆ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾಷಾ ವಿವಾದಕ್ಕೆ ಭಾರಿ ಬೆಂಕಿಯನ್ನೇ ಹಚ್ಚಿವೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿನ ಪೋಸ್ಟ್‌ನಲ್ಲಿ, ಅವರು ಕನ್ನಡ ಮಾತನಾಡುವ ಡೆಲಿವರಿ ಬಾಯ್‌ಗಳು ಇಲ್ಲದಿರುವ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕರ್ನಾಟಕದಲ್ಲಿ ಭಾಷಾ ಆದ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯ ಪೋಸ್ಟ್ ಅನ್ನು ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದು, 3.5 ಸಾವಿರಕ್ಕೂ ಅಧಿಕ ಜನರು ಕಾಮೆಂಟ್‌ಗಳನ್ನು ಮಾಡುತ್ತಾ ಈ ವಿಷಯವನ್ನು ತಮ್ಮದೇ ಧಾಟಿಯಲ್ಲಿ ಚರ್ಚೆ ಮಾಡಿದ್ದಾರೆ.
ಅಂಗಾಂಗ ದಾನಿ ಅರ್ಚನಾ ಕಾಮತ್ ಇನ್ನಿಲ್ಲ; ಪರರ ಜೀವ ಉಳಿಸಲು ತನ್ನ ಪ್ರಾಣಾರ್ಪಣೆ!
ಇನ್ನು ಮಹಿಳೆ ತನ್ನ ಸ್ವಿಗ್ಗಿ ಆರ್ಡರ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಅದರೊಂದಿಗೆ 'ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ @swiggy? ನಿಮ್ಮ ಡೆಲಿವರಿ ಮಾಡುವ ವ್ಯಕ್ತಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಅಥವಾ ಅರ್ಥವಾಗುವುದಿಲ್ಲ, ಇಂಗ್ಲಿಷ್ ಕೂಡ ಬರುವುದಿಲ್ಲ. ಇದನ್ನು ನೀವು ನಿರೀಕ್ಷಿಸುತ್ತೀರಾ? ನಾವು ನಮ್ಮ ನಾಡಿನಲ್ಲಿ ಅವರ ರಾಜ್ಯ ಭಾಷೆ ಹಿಂದಿಯನ್ನು ಕಲಿಯಬೇಕೆ? ಎಂದು ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ. ಇನ್ನು ಮಹಿಳೆ ಪ್ರಶ್ನೆ ಮಾಡಿರುವ ದಾಟಿಯಾದ 'ನಮ್ಮ ನಾಡಿನಲ್ಲಿ ಹಿಂದಿ ಕಲಿಯುವುದೇ?'ಎಂಬ ಪ್ರಶ್ನೆಯು ದೂರು ಭಾಷಾ ಚರ್ಚೆಗೆ ಕಾರಣವಾಗಿದೆ.
ಈ ಪೋಸ್ಟ್‌ಗೆ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ ನೆಟ್ಟಿಗನೊಬ್ಬ, 'ಎಲ್ಲಾ ಡೆಲಿವರಿ ಹುಡುಗರು ಕೇವಲ ಆಹಾರವನ್ನು ತಲುಪಿಸಲು ಕನ್ನಡ ಕಲಿಯಬೇಕೆಂದು ನೀವು ನಿರೀಕ್ಷಿಸುತ್ತೀರಾ? ಪ್ರಶ್ನೆಯನ್ನೂ ಕೇಳಿದ್ದಾರೆ. ಇದಕ್ಕೆ ಮತ್ತೊಬ್ಬ ನೆಟ್ಟಿಗರು ಹೌದು ಎನ್ನುತ್ತಾ ಸ್ಥಳೀಯರು ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ' ಎಂದು ಪ್ರತಿಪಾದಿಸಿದ್ದಾರೆ.
ಆರ್ಥಿಕ ಪರಿಣಾಮಗಳ ಬಗ್ಗೆಯೂ ಚರ್ಚೆ: ಕರ್ನಾಟಕದಲ್ಲಿ ನಡೆಯುತ್ತಿರುವ ಭಾಷಾ ಉದ್ವಿಗ್ನತೆಯಿಂದಾಗಿ, 14 ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಸೂರತ್, ಲಕ್ನೋ ಮತ್ತು ಇಂದೋರ್ ಮೂಲದ 53 ಕಂಪನಿಗಳನ್ನು ಸ್ಥಳಾಂತರಿಸಲು ಮುಂದಾಗಿವೆ ಎಂಬ ವರದಿಗಳು ಬಂದಿವೆ. ಇದು ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಕೃತಿ (startup culture) ಮತ್ತು ಜಾಗತಿಕ ಉಪಸ್ಥಿತಿಯ (global presence) ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು. ನಗರದ ಟೆಕ್ ಹಬ್ ಸ್ಥಿತಿಯು ಸುರಕ್ಷಿತವಾಗಿ ಉಳಿಯುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸರ್ಕಾರದಿಂದ ಮದ್ಯ ಪ್ರಿಯರಿಗೆ ಶಾಕ್, ಒಂದೂವರೆ ವರ್ಷದಲ್ಲಿ 3ನೇ ಬಾರಿ ದರ ಏರಿಕೆ!
ಮತ್ತೊಬ್ಬ ಬಳಕೆದಾರರು, ಸಮಯಕ್ಕೆ ಸರಿಯಾಗಿ ಡೆಲಿವರಿ ಆಗುವವರೆಗೆ, ಡೆಲಿವರಿ ಬಾಯ್‌ನ ಭಾಷಾ ಕೌಶಲ್ಯದ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ. ಬೆಂಗಳೂರು ಕರ್ನಾಟಕದಲ್ಲಿ ಇದೆಯೇ ಅಥವಾ ಇಂಗ್ಲೆಂಡ್ ಆಗಿದೆಯೇ? ನನಗೆ ತಿಳಿದಿರುವಂತೆ, ಇಂಗ್ಲಿಷ್ ಮೂಲತಃ ಕರ್ನಾಟಕದಲ್ಲಿ ಸಾಂಸ್ಕೃತಿಕ ಭಾಷೆಯಾಗಿರಲಿಲ್ಲ ಎಂದು ಮತ್ತೊಬ್ಬರು ಮಹಿಳೆಗೆ ಟಾಂಗ್ ಕೊಟ್ಟಿದ್ದಾರೆ.