ಮೃತರು ಟಿಡಾಂಗ್ ಜಲವಿದ್ಯುತ್ ಯೋಜನೆಯ ಕಾರ್ಮಿಕರು ಮತ್ತು ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ನಿವಾಸಿಗಳು ಎಂದು ತಿಳಿದುಬಂದಿದೆ
ಕಿನ್ನೌರ್ (ಮೇ. 07): ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿರುವ ಟಿಡಾಂಗ್ ಜಲವಿದ್ಯುತ್ ಯೋಜನೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ದೊಡ್ಡ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಐಟಿಬಿಪಿ ಸಿಬ್ಬಂದಿ 2 ಮೃತದೇಹಗಳನ್ನು ಹೊರತೆಗೆದಿದ್ದು 3 ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾಹಿತಿಯ ಪ್ರಕಾರ, ಬೆಳಿಗ್ಗೆ 11 ಗಂಟೆ ಸುಮಾರಿಗೆ ಯೋಜನೆಯ ಸುರಂಗದೊಳಗೆ ಹೋಗುವ ಟ್ರಾಲಿಯೊಂದು ಜಾರಿ ಬಿದ್ದು ಆಳಕ್ಕೆ ಬಿದ್ದಿದೆ.
ಯೋಜನೆಯ ಐವರು ಕಾರ್ಮಿಕರು ಟ್ರಾಲಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅದು ಟ್ರ್ಯಾಕ್‌ನಿಂದ ಜಾರಿಬಿದ್ದು 45 ರಿಂದ 50 ಡಿಗ್ರಿಗಳ ಇಳಿಜಾರನ್ನು ದಾಟಿ ನೂರಾರು ಅಡಿ ಆಳಕ್ಕೆ ಬಿದ್ದಿದೆ ಎಂದು ವರದಿಯಾಗಿದೆ. ಇಂದು ಬೆಳಗ್ಗೆ 6 ರಿಂದ 7 ಗಂಟೆಯ ನಡುವೆ ಈ ಘಟನೆ ನಡೆದಿದೆ. ವಿದ್ಯುತ್ ಯೋಜನೆಯು ಸಟ್ಲುಜ್‌ನ ಉಪನದಿಯಾದ ಟಿಡಾಂಗ್ ನದಿಯ ರೆಟಾಖಾನ್‌ನಲ್ಲಿದೆ.
ಇದನ್ನೂ ಓದಿ:ಬಂಗಾಳ ಭೇಟಿ ವೇಳೆ ಬಿಜೆಪಿ ಕಾರ‍್ಯಕರ್ತನ ನಿಗೂಢ ಸಾವು: ಅಮಿತ್ ಶಾ ಕಿಡಿ
50 ನೇ ಬೆಟಾಲಿಯನ್‌ನ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಇತರ ಏಜೆನ್ಸಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ ಮತ್ತು ಮೂವರು ಗಾಯಾಳುಗಳನ್ನು ಸುರಂಗದಿಂದ ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇದಲ್ಲದೆ, ಐಟಿಬಿಪಿ ಸಿಬ್ಬಂದಿ ಸುರಂಗದಿಂದ ಎರಡು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತರು ಟಿಡಾಂಗ್ ಜಲವಿದ್ಯುತ್ ಯೋಜನೆಯ ಕಾರ್ಮಿಕರು ಮತ್ತು ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಹೊರತೆಗೆದ ಬಳಿಕ ಮಧ್ಯಾಹ್ನ 2.30ಕ್ಕೆ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
