ಶಿಮ್ಲಾ[ಜ.15]: ಹಿಮಾಚಲ ಪ್ರದೇಶದಲ್ಲಿ ನೋಡ-ನೋಡುತ್ತಿದ್ದಂತೆ ಭಾರೀ ಗಾತ್ರದ ಹಿಮ ರಸ್ತೆಯ ಮೇಲೆ ಹರಿದುಬಂದ ವಿಡಿಯೋವೊಂದು ಭಾರೀ ವೈರಲ್‌ ಆಗಿದೆ. ಹಿಮಾಚಲ ಪ್ರದೇಶದ ಪೂಹ್‌ ಬಳಿಯ ಟಿಂಕು ನಲ್ಲಾಹ್‌ ಎಂಬಲ್ಲಿ ಈ ಘಟನೆ ನಡೆದಿದೆ.

ಐಆರ್‌ಎಸ್‌ ಅಧಿಕಾರಿ ನವೀದ್‌ ಟ್ರುಂಬೂ ಅವರು ತಮ್ಮ ಟ್ವೀಟರ್‌ ಖಾತೆಯಿಂದ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲ ಪ್ರವಾಸಿಗರು ರಸ್ತೆಯಲ್ಲಿ ನಿಂತು ಮಂಜು ಮುಸುಕಿದ ಗುಡ್ಡ ಹಾಗೂ ಇತರ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ವಿಡಿಯೋ ಮಾಡುತ್ತಿದ್ದರು. ಈ ವೇಳೆ ನೋಡ-ನೋಡುತ್ತಿದ್ದಂತೆ, ಬೆಟ್ಟದ ಮೇಲಿಂದ ಬೃಹತ್‌ ಗಾತ್ರದ ಹಿಮದಬೆಟ್ಟಮೆಲ್ಲಗೆ ರಸ್ತೆಯತ್ತ ಉರುಳುತ್ತ ಬಂದಿದೆ.

ಅಲ್ಲಿದ್ದ ವ್ಯಕ್ತಿಯೋರ್ವ, ಇಲ್ಲಿಂದ ದೂರ ಹೋಗಿ ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.