ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಸು ಬಲಿಕೊಡುವ ಫೋಟೋ: ರೊಚ್ಚಿಗೆದ್ದ ಜನ, ಬಟ್ಟೆ ಅಂಗಡಿ ಮಾಲೀಕ ನಾಪತ್ತೆ
ಬಟ್ಟೆ ಶಾಪ್ ಮಾಲೀಕನೋರ್ವ ಹಸುವನ್ನು ಬಲಿಕೊಡುವಂತಹ ಚಿತ್ರವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದು, ಇದರಿಂದ ರೊಚ್ಚಿಗೆದ್ದ ಜನ ಹಾಗೂ ಹಿಂದೂ ಸಂಘಟನೆಗಳು ಆತನ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ನಹನ್: ಬಟ್ಟೆ ಶಾಪ್ ಮಾಲೀಕನೋರ್ವ ಹಸುವನ್ನು ಬಲಿಕೊಡುವಂತಹ ಚಿತ್ರವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದು, ಇದರಿಂದ ರೊಚ್ಚಿಗೆದ್ದ ಜನ ಹಾಗೂ ಹಿಂದೂ ಸಂಘಟನೆಗಳು ಆತನ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹಿಮಾಚಲ ಪ್ರದೇಶದ ನಹನ್ ಎಂಬಲ್ಲಿ ಈ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಸಚಿನ್ ಗುಪ್ತಾ ಎಂಬುವವರು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಪೊಲೀಸರ ಎದುರೇ ಆಕ್ರೋಶಗೊಂಡ ಜನ ಬಟ್ಟೆ ಅಂಗಡಿಗೆ ನುಗ್ಗಿ ಅಲ್ಲಿದ್ದ ಸಾಮಾನು ಸರಂಜಾಂಮುಗಳನ್ನು ಹೊರಗೆಸೆಯುತ್ತಿರುವ ದೃಶ್ಯ ವೀಡಿಯೋದಲ್ಲಿ ವೈರಲ್ ಆಗಿದೆ.
ಸಚಿನ್ ಗುಪ್ತಾ ಅವರ ಪೋಸ್ಟ್ ಪ್ರಕಾರ, 'ಹಿಮಾಚಲ ಪ್ರದೇಶದ ನಹನ್‌ನಲ್ಲಿ ಹಿಂದೂ ಸಂಘಟನೆಗಳು ಜಾವೇದ್ ಎಂಬಾತನ ರೆಡಿಮೇಡ್ ಬಟ್ಟೆ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಅಲ್ಲಿದ ವಸ್ತುಗಳನ್ನೆಲ್ಲಾ ಹೊರಗೆಸೆದಿದ್ದಾರೆ. ಬಟ್ಟೆ ಅಂಗಡಿ ಮಾಲೀಕ ಜಾವೇದ್ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಸುವನ್ನು ಬಲಿಕೊಡುತ್ತಿರುವ ಫೋಟೋ ಹಾಕಿದ್ದೆ ಘಟನೆಗೆ ಕಾರಣ' ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಬಕ್ರೀದ್ ಕುರ್ಬಾನಿಗೆ ತಂದ ಮೇಕೆ ಮೇಲೆ ರಾಮನ ಹೆಸರು : ಸಿಟ್ಟಿಗೆದ್ದ ಜನ, ಮಾಂಸದಂಗಡಿ ಮಾಲೀಕನ ಬಂಧನ
ಈ ಜಾವೇದ್ ಉತ್ತರ ಪ್ರದೇಶ ಸಹ್ರಾನ್‌ಪುರ ನಿವಾಸಿಯಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ. ಈತನ ವಿರುದ್ಧ ಹಸು ಹತ್ಯೆ ಮಾಡಿದ ಆರೋಪವನ್ನು ಜನ ಮಾಡಿದ್ದು, ಆತನನ್ನು ಇನ್ನು ಮುಂದೆ ಹಿಮಾಚಲ ಪ್ರವೇಶಿಸಲು ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಘಟನೆಯ ಬಳಿಕ ಜಾವೇದ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಹಿಂದೂ ಸಂಘಟನೆಗಳು ಬಟ್ಟೆ ಶಾಪ್ ಮಾಲೀಕ ಕೂಡಲೇ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ.
ಜೂನ್ ಆರಂಭದಲ್ಲಿ ಚಂಡೀಗಡ ಏರ್‌ಪೋರ್ಟ್‌ನಲ್ಲಿ ಹಿಮಾಚಲ ಪ್ರದೇಶದ ಮಂಡಿ ಸಂಸದೆ ನಟಿ ಕಂಗನಾ ರಣಾವತ್‌ಗೆ ಭದ್ರತಾ ಸಿಬ್ಬಂದಿಯಾಗಿದ್ದ ಕುಲ್ವಿಂದರ್ ಕೌರ್ ಹಲ್ಲೆ ಮಾಡಿದ ನಂತರ ಹಿಮಾಚಲದಲ್ಲಿ ಇಂತಹ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ನಾಲ್ಕು ದಿನಗಳ ಹಿಂದಷ್ಟೇ ಪಂಜಾಭ್ ಮೂಲದ ಎನ್‌ಆರ್‌ಐ ದಂಪತಿಗಳ ಮೇಲೆ ಗುಂಪೊಂದು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಆರಂಭಿಸಿ ಹಲ್ಲೆ ಮಾಡಿತ್ತು. ಹಿಮಾಚಲ ಪ್ರದೇಶದ ಡಾಲ್‌ಹೌಸಿಗೆ ಭೇಟಿ ನೀಡಿದ ಕವಲ್‌ಜಿತ್ ಸಿಂಗ್ ತಮ್ಮ ಸ್ಪೇನಿಶ್ ಮೂಲದ ಪತ್ನಿ ಜೊತೆ ಬಂದಿದ್ದಾಗ ತಾನು ಪಂಜಾಬಿ ಎಂದು ತಿಳಿದು ಹಲ್ಲೆ ಮಾಡಿದರು ಎಂದು ಕವಲ್‌ಜಿತ್ ಸಿಂಗ್ ದೂರಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಶಿರೋಮಣಿ ಅಕಾಲಿದಳದ ಜನರಲ್ ಸೆಕ್ರೆಟರಿ ಬಿಕ್ರಂ ಸಿಂಗ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಕಂಗನಾ ರಣಾವತ್ ಮೇಲೆ ಹಲ್ಲೆ ನಂತರ ಹಿಮಾಚಲ ಪ್ರದೇಶದ ಸ್ಥಳೀಯರು ಪಂಜಾಬಿ ಪ್ರವಾಸಿಗರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದರು.
ಅಣ್ಣಾಮಲೈನನ್ನು ಹರಕೆಯ ಮೇಕೆ ಮಾಡಿ ತಲೆ ಕತ್ತರಿಸಿದ ಡಿಎಂಕೆ ಸದಸ್ಯರು