ತುಮ್ ಹಿ ಹೋ ಹಾಡಿಗೆ ವಿದ್ಯಾರ್ಥಿ ಜೊತೆಗೆ ಕಪಲ್ ಡ್ಯಾನ್ಸ್, ಟೀಚರ್ ವಿಡಿಯೋ ವೈರಲ್!
ತುಮ್ ಹಿ ಹೋ ಹಾಡು, ವಿದ್ಯಾರ್ಥಿ ಜೊತೆಗೆ ಟೀಚರ್ ರೋಮ್ಯಾಂಟಿಕ್ ಕಪಲ್ ಡ್ಯಾನ್ಸ್ ಮಾಡಿದ್ದಾರೆ. ಫೇರ್‌ವೆಲ್ ಕಾರ್ಯಕ್ರಮದಲ್ಲಿ ಟೀಚರ್ ಹಾಗೂ ವಿದ್ಯಾರ್ಥಿ ನಡುವಿನ ಡ್ಯಾನ್ಸ್ ಇದೀಗ ಭಾರಿ ವೈರಲ್ ಆಗಿದೆ.
ಕಾಲೇಜು ವಿದ್ಯಾರ್ಥಿಗಳ ಫೇರ್‌ವೆಲ್ ಕಾರ್ಯಕ್ರಮ. ಒಂದೆಡೆ ಸಂಭ್ರಮ, ಮತ್ತೊಂದೆಡೆ ಭಾವುಕ ಕ್ಷಣ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಅಚ್ಚರಿಯಾಗಿದ್ದಾರೆ. ಕಾರಣ ತಮ್ ಹಿ ಹೋ ಹಿಂದಿ ಹಾಡಿಗೆ ಟೀಚರ್, ತನ್ನ ವಿದ್ಯಾರ್ಥಿ ಜೊತೆಗೆ ಕಪಲ್ ಡ್ಯಾನ್ಸ್ ಮಾಡಿದ್ದಾರೆ. ರೋಮ್ಯಾಂಟಿಕ್ ಡ್ಯಾನ್ಸ್ ನೋಡಿದ ಎಲ್ಲರಿಗೂ ಅಚ್ಚರಿಯಾಗಿದೆ. ಚಪ್ಪಾಳೆ ಮೂಲಕ ಹುರಿದುಂಬಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ತರಗತಿಯೊಳಗೆ ಆಯೋಜಿಸಿದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಜರಿದ್ದರು. ಫೇರ್‌ವೆಲ್ ಭಾಷಣ, ಭಾವುಕ ಕ್ಷಣ, ಹೈ ಸ್ಕೂಲ್ ಜೀವನದಲ್ಲಿ ನಡೆದ ಸಿಹಿ ಹಾಗೂ ಕಹಿ ಘಟನೆಗಳ ಮೆಲುಕು ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಕೊನೆಯ ಕ್ಷಣಗಳನ್ನು ಸ್ಮರಣೀಯವಾಗಿಸಲು ಡ್ಯಾನ್ಸ್ ಮಾಡಲು ಅವಕಾಶ ನೀಡಲಾಗಿತ್ತು.
ಶೈಲಜಾ ಟೀಚರ್ ವೀಡಿಯೋ ಯಾರ್ ಮಾಡ್ತಾರೆ, ಮಂಜು ವಾರಿಯರ್‌ದಾದ್ರೆ ನಂಬಬಹುದು ಎಂದ ಯುಡಿಪಿ ನಾಯಕ
ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕೊನೆಯದಾಗಿ ಶಾಲೆಯಲ್ಲಿ ಹೆಜ್ಜೆ ಹಾಕಲು ಅವಕಾಶ ನೀಡಲಾಗಿತ್ತು. ಕುಣಿದು ಕುಪ್ಪಳಿಸಿ ಶಾಲಾ ದಿನಗಳನ್ನು ಸ್ಮರಣೀಯವಾಗಿಸುವ ಉದ್ದೇಶ ಇದಾಗಿತ್ತು. ಬಾಲಿವುಡ್ ಆಶಿಖಿ 2 ಚಿತ್ರದ ತುಮ್ ಹಿ ಹೋ ಚಿತ್ರ ಪ್ಲೇ ಆಗುತ್ತಿದ್ದಂತೆ ವಿದ್ಯಾರ್ಥಿ ನೇರವಾಗಿ ಟೀಚರ್ ಬಳಿ ಬಂದು ಕೈಹಿಡಿದು ವೇದಿಕೆಗೆ ಕರೆತಂದಿದ್ದಾನೆ. ಬಳಿಕ ಟೀಚರ್ ಜೊತೆ ಡ್ಯಾನ್ಸ್ ಮಾಡಿದ್ದಾನೆ.
ಇತ್ತ ಟೀಚರ್ ಮುರು ಮಾತನಾಡದೇ ವಿದ್ಯಾರ್ಥಿ ಜೊತೆಗೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ. ಇತರ ವಿದ್ಯಾರ್ಥಿಗಳು, ಸಿಬ್ಬಂದಿಗಳು ಚಪ್ಪಾಳೆ ಮೂಲಕ ಹುರಿದುಂಬಿಸಿದ್ದಾರೆ. ಈ ವಿಡಿಯೋವನ್ನು ಕುಶಾಲ್ ಎಂಜೆ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಳಾಗಿದೆ. ಈ ವಿಡಿಯೋ ಬಾರಿ ವೈರಲ್ ಆಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ನಾವು ಓದಿಗ ಶಾಲೆ, ಕಾಲೇಜಿನಲ್ಲಿ ಈ ರೀತಿ ಇರಲಿಲ್ಲ. ಟೀಚರನ್ನು ನೋಡಲು ಭಯವಾಗಿತ್ತು, ಅಪ್ಪಿ ತಪ್ಪಿ ನೋಡಿದರೆ ಅವತ್ತಿನ ದಿನವೇ ಮುಗಿದಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಇಂಗ್ಲೀಷ್ ಟೀಚರ್ ಆಗಿರಬೇಕು ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ. ನಮ್ಮ ಶಾಲೆ-ಕಾಲೇಜಿನಲ್ಲಿ ಈ ರೀತಿ ಇರಲಿಲ್ಲ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಸೀರೆ ಧರಿಸಿ ಬಂದು ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿಯ ಲುಕ್‌ಗೆ ನೆಟ್ಟಿಗರು ಫಿದಾ
ವಿದ್ಯಾರ್ಥಿ ಜೊತೆಗೆ ಟೀಚರ್ ಡ್ಯಾನ್ಸ್ ಮಾಡಿದ ಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ. ಆದರೆ ಈ ವಿಡಿಯೋ ಹೆಚ್ಚು ಕ್ಯೂಟ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿಯ ನಮಗೂ ಇರಬೇಕಿತ್ತು ಎಂದು ಹಲವರು ಪ್ರತಿಕ್ರಿಯೆಸಿದ್ದಾರೆ.