ಪತಿ ತೀರಿಕೊಂಡ ಮಹಿಳೆಗೆ ಪತಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ ಪಾಲಕ್ಕಾಡ್ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

ಕೊಚ್ಚಿ: ಪತಿ ತೀರಿದ್ರೂ ಪತ್ನಿಗೆ ಪತಿಯ ಮನೆಯಲ್ಲಿ ವಾಸಿಸುವ ಹಕ್ಕಿದೆ ಅಂತ ಹೈಕೋರ್ಟ್ ಹೇಳಿದೆ. ಮನೆ ಯಾರ ಹೆಸರಿನಲ್ಲಿದೆ ಅನ್ನೋದು ಮುಖ್ಯ ಅಲ್ಲ, ಪತ್ನಿಗೆ ಗಂಡನ ಮನೆಯಲ್ಲಿ ವಾಸಿಸಬಹುದು. ಗಾರ್ಹಿಕ ಹಿಂಸಾಚಾರ ನಿಷೇಧ ಕಾಯ್ದೆಯನ್ನ ಉಲ್ಲೇಖಿಸಿ ಹೈಕೋರ್ಟ್ ಈ ಆದೇಶ ನೀಡಿದೆ. ಈ ಮೂಲಕ ಪತಿ ತೀರಿಕೊಂಡ ಮಹಿಳೆಗೆ ಪತಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ ಪಾಲಕ್ಕಾಡ್ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಬದುಕಲು ಮಹಿಳೆಗೆ ಹಕ್ಕಿದೆ, ಪತಿ ತೀರಿದಾಗ ಸುರಕ್ಷಿತ ವಾಸಸ್ಥಳ ಅವಳ ಹಕ್ಕು ಅಂತ ಕೋರ್ಟ್ ಅಭಿಪ್ರಾಯಪಟ್ಟಿದೆ. 2009ರಲ್ಲಿ ಪತಿ ತೀರಿದ ನಂತರವೂ ಮಹಿಳೆ ಮತ್ತು ಮಗು ಗಂಡನ ಮನೆಯಲ್ಲೇ ವಾಸಿಸುತ್ತಿದ್ದರು. ಬಳಿಕ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು.

ಮೊದಲು ಮಹಿಳೆಯ ಮನವಿಯನ್ನ ತಿರಸ್ಕರಿಸಿದ್ದ ಮೆಜಿಸ್ಟ್ರೇಟ್ ಕೋರ್ಟ್ ಆದೇಶದ ವಿರುದ್ಧ ಮಹಿಳೆ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಸೆಷನ್ಸ್ ಕೋರ್ಟ್ ಮಹಿಳೆಯ ಪರವಾಗಿ ತೀರ್ಪು ನೀಡಿತ್ತು. ಇದರ ವಿರುದ್ಧ ಪತಿಯ ಮನೆಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸಂಬಂಧಿಕರ ಮನವಿಯನ್ನ ತಿರಸ್ಕರಿಸಿದ ಕೋರ್ಟ್, ಮಹಿಳೆಗೆ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ ಸೆಷನ್ಸ್ ಕೋರ್ಟ್ ಆದೇಶವನ್ನ ಎತ್ತಿಹಿಡಿದಿದೆ.