Asianet Suvarna News Asianet Suvarna News

ತಮಿಳುನಾಡು ದೇಗುಲಗಳಲ್ಲಿ ಮೊಬೈಲ್‌ ನಿಷೇಧ ಜಾರಿಗೆ ಹೈಕೋರ್ಟ್‌ ಆದೇಶ

ತಮಿಳುನಾಡಿನ ದೇಗುಲಗಳಲ್ಲಿ ಮೊಬೈಲ್‌ ಫೋನ್‌ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮದ್ರಾಸ್‌ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

High Court orders ban on mobile phones in Tamilnadu temples akb
Author
First Published Dec 4, 2022, 9:35 AM IST

ಮಧುರೈ: ತಮಿಳುನಾಡಿನ ದೇಗುಲಗಳಲ್ಲಿ ಮೊಬೈಲ್‌ ಫೋನ್‌ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮದ್ರಾಸ್‌ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ದೇವಾಲಯ ಪಾವಿತ್ರ್ಯತೆಯನ್ನು ಕಾಪಾಡುವ ಕಾರಣ ನೀಡಿ ಈ ಆದೇಶವನ್ನು ನ್ಯಾ.ಆರ್‌. ಮಹಾದೇವನ್‌ ಹಾಗೂ ನ್ಯಾ. ಜೆ. ಸತ್ಯನಾರಾಯಣ ಪ್ರಸಾದ್‌ ಅವರ ಪೀಠ ನೀಡಿದೆ. 

ದೇವಾಲಯಗಳಲ್ಲಿ(temple) ಮೊಬೈಲ್‌ (mobile phones) ಹಾವಳಿ ಹೆಚ್ಚಾಗಿದ್ದು ಶಾಂತಿಯುತವಾಗಿ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಜನರು ಮೊಬೈಲ್‌ ಹಿಡಿದು ಫೋಟೋ ಹಾಗೂ ವಿಡಿಯೋಗೆ ಮುಂದಾಗುತ್ತಾರೆ. ದೇವಾಲಯದ ಪ್ರಮುಖ ವಿಗ್ರಹ ಹಾಗೂ ಬೆಲೆಬಾಳುವ ವಸ್ತುಗಳ ಫೋಟೋ ತೆಗೆಯುವುದರಿಂದ ಅವುಗಳ ಸುರಕ್ಷತೆಗೂ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (public interest petition) ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದ ಪೀಠ ರಾಜ್ಯ ಹಿಂದೂ ಧರ್ಮ (Hindu Religion) ಹಾಗೂ ದತ್ತಿ ಇಲಾಖೆಗೆ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ ನಿಷೇಧದ ಆದೇಶ ಜಾರಿಗೆ ತರುವಂತೆ ಆದೇಶ ನೀಡಿದೆ. ದೇವಾಲಯಗಳ ಮುಂಭಾಗದಲ್ಲಿ ಮೊಬೈಲ್‌ಗಳನ್ನು ಸುರಕ್ಷಿತವಾಗಿ ಡೆಪಾಸಿಟ್‌ ಮಾಡಲು ಕೌಂಟರ್‌ ನಿರ್ಮಾಣ ಮಾಡಲು ತಿಳಿಸಿದೆ.

ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಸುಳ್ಳು ಸುದ್ದಿ, ಉನ್ನತ ಶಿಕ್ಷಣ ಸಚಿವರ ಸ್ಪಷ್ಟನೆ

ಮೊಬೈಲ್‌ ನಿಷೇಧ ವಿಚಾರ : ಚರ್ಚಿಸಿ ಶೀಘ್ರ ಕ್ರಮ

 

Follow Us:
Download App:
  • android
  • ios