ಪ್ರಧಾನಿ ಮೋದಿ ಕೇವಲ 3 ತಾಸು ನಿದ್ದೆ ಮಾಡ್ತಾರೆ: ನಟ ಸೈಫ್ ಅಲಿ ಖಾನ್ ಪ್ರಶಂಸೆ
ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಕೇವಲ 3 ತಾಸು ನಿದ್ದೆ ಮಾಡುತ್ತಾರೆ. ಇದನ್ನು ಕೇಳಿ ನನಗೆ ಅಚ್ಚರಿಯಾಯಿತು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಡಿ.16): ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಕೇವಲ 3 ತಾಸು ನಿದ್ದೆ ಮಾಡುತ್ತಾರೆ. ಇದನ್ನು ಕೇಳಿ ನನಗೆ ಅಚ್ಚರಿಯಾಯಿತು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಜ್ ಕಪೂರ್ ಫಿಲಂ ಫೆಸ್ಟಿವಲ್‌ಗೆ ಮೋದಿಯವರನ್ನು ಆಹ್ವಾನಿಸಲು ಅವರ ನಿವಾಸಕ್ಕೆ ತೆರಳಿದ್ದಾಗ ಆದ ಭೇಟಿಯ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸೈಫ್, ‘ಪ್ರಧಾನಿ ಮೋದಿ ನಾವು ಅವರನ್ನು ಭೇಟಿಯಾದಾಗ ಸಂಸತ್ತಿನಿಂದ ಆಗಮಿಸಿದರ. ಅಲ್ಲಿಂದ ನೇರವಾಗಿ ನಮ್ಮ ಭೇಟಿಗೆ ಬಂದಿದ್ದರಿಂದ ದಣಿದಿರುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ನಗುಮೊಗದಿಂದ ಮಾತಾಡಿದರು. ಅವರ ವಿಶ್ರಾಂತಿಯ ಬಗ್ಗೆ ವಿಚಾರಿಸಿದಾಗ, ಮೋದಿ ರಾತ್ರಿ ಕೇವಲ 3 ತಾಸು ನಿದ್ದೆ ಮಾಡುತ್ತಾರೆ ಎಂದು ತಿಳಿಯಿತು’ ಎಂದು ಹೇಳಿದರು.
ಈ ಹಿಂದೆಯೂ ಸಚಿವ, ಬಿಜೆಪಿಗರಿಂದ ಹೇಳಿಕೆ: ಈ ಮುಂಚೆ ಮೋದಿಯವರ ವಿಶ್ರಾಂತಿಯ ಬಗ್ಗೆ ಮಾತನಾಡಿದ್ದ ಕೇಂದ್ರ ಸಚಿವ ಎಲ್. ಮುರುಗನ್, ‘ಮೋದಿಯವರಿಂದ ಹಲವು ಸ್ಫೂರ್ತಿದಾಯಕ ವಿಚಾರಗಳನ್ನು ಕಲಿತೆ. ಅವರು ಕೇವಲ 3.5 ತಾಸು ಮಲಗುತ್ತಾರೆ ಹಾಗೂ ಸಂಜೆ 6 ಗಂಟೆಯ ಬಳಿಕ ಏನನ್ನೂ ತಿನ್ನುವುದಿಲ್ಲ’ ಎಂದಿದ್ದರು. ಅಂತೆಯೇ, ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದ್ರಕಾಂತ್ ಪಾಟಿಲ್ ಕೂಡ, ‘ದಿನಕ್ಕೆ 2 ತಾಸು ಮಾತ್ರ ಮಲಗುವ ಮೋದಿ ಈಗ 24 ಗಂಟೆಯೂ ಎಚ್ಚರವಿದ್ದು ದೇಶಕ್ಕಾಗಿ ದುಡಿಯುವ ಪ್ರಯೋಗ ನಡೆಸುತ್ತಿದ್ದಾರೆ’ ಎಂದಿದ್ದರು.
ಮಹಾ ಕುಂಭ ಏಕತೆಯ ಮಹಾಯಜ್ಞ: ಪ್ರಯಾಗರಾಜ್‌ದಲ್ಲಿ ನಡೆಯುವ ಮಹಾ ಕುಂಭಮೇಳವು ಏಕತೆಯ ಮಹಾಯಜ್ಞವಾಗಿದೆ. ವಿಕಸಿತ ಭಾರತದ ಕನಸನ್ನು ನನಸು ಮಾಡುವಲ್ಲಿ ಮಹಾ ಕುಂಭಮೇಳವು ತನ್ನದೇ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ ಸ್ಥಾನವನ್ನು ಮಹಾಕುಂಭ ಸ್ಥಾಪಿಸಲಿದೆ ಎಂದು ಭವಿಷ್ಯ ನುಡಿದರು. ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಗಂಗಾ, ಯಮನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮ ಸ್ಥಳವಾದ ಸಂಗಮನಗರಿಯಲ್ಲಿ ಬರೋಬ್ಬರಿ ₹ 5500 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಡೆ ಹನುಮಾನ ಮಂದಿರದ ಪಕ್ಕದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ 30 ನಿಮಿಷ ಭಾಷಣ ಮಾಡಿದರು ಮೋದಿ.
ಬೆಂಗಳೂರಲ್ಲಿ ಮತ್ತೊಂದು ‘ಎಲೆಕ್ಟ್ರಾನಿಕ್ ಸಿಟಿ’ಗೆ ಸಿದ್ಧತೆ: 1000 ಎಕರೆಯಲ್ಲಿ ‘ಸ್ವಿಫ್ಟ್ ಸಿಟಿ’ ನಿರ್ಮಾಣ
ಹೊಸ ಇತಿಹಾಸ ಸೃಷ್ಟಿ: ಮಹಾಕುಂಭ ಮೇಳದ ಇತಿಹಾಸ ವಿವರಿಸುತ್ತಲೇ ಈ ಮಹಾಕುಂಭ ಮೇಳ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತದೆ. ಭಕ್ತಿ, ಧರ್ಮ, ಜ್ಞಾನದ ಸಮಾಗಮವಾಗಲಿದೆ. ಮಹಾಕುಂಭಮೇಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ನಮ್ಮ ಸಂಸ್ಕತಿ, ಸನಾತನ ಸಂಪ್ರದಾಯದ ಪ್ರತೀಕವಾಗಿದೆ. ದಿವ್ಯ, ಭವ್ಯ ಹಾಗೂ ಡಿಜಿಟಲ್ ಮಹಾಕುಂಭವಾಗಲಿದೆ. ಸ್ವಚ್ಛ-ಶುದ್ಧ ಮಹಾಕುಂಭವನ್ನಾಗಿ ಮಾಡೋಣ. ಇದಕ್ಕಾಗಿ ಎಲ್ಲರೂ ಸಂಕಲ್ಪ ಮಾಡೋಣ ಎಂದು ನೆರೆದ ಜನತೆಗೆ ಕರೆ ನೀಡಿದರು. ಅಲ್ಲದೇ, ಕುಂಭ ಮೇಳದ ಯಶಸ್ಸಿಗಾಗಿ ಶ್ರಮಿಸುತ್ತಿರುವ ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು ಎಂದು ನುಡಿದರು. ಈ ಸಲದ ಕುಂಭಮೇಳದ ಇಡೀ ಜಗತ್ತಿನಲ್ಲೇ ಚರ್ಚೆಯಾಗುತ್ತದೆ. ಮಹಾಕುಂಭಮೇಳದಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಲಿದೆ. ಭಾರತದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿದೆ ಎಂದರು.