ಮೈಸೂರ್‌ ಪಾಕ್‌ ತಿಂದರೆ ಕೊರೋನಾ ಬರಲ್ವಂತೆ. ಹೀಗಂತ ಕೊಯಮತ್ತೂರಿನ ಮಿಠಾಯಿ ಅಂಗಡಿಯೊಂದು ಸಾರ್ವಜನಿಕ ಘೋಷಿಸಿಕೊಂಡಿದೆ. ‘ಹರ್ಬಲ್‌ (ಗಿಡಮೂಲಿಕೆ) ಮೈಸೂರ್‌ ಪಾಕ್‌’ ಸೇವಿಸಿದರೆ 3 ದಿನದೊಳಗೆ ಕೊರೋನಾ ಗುಣವಾಗುತ್ತದೆ. ದಿನನಿತ್ಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅಂಗಡಿಯ ಮಾಲೀಕ ಕರಪತ್ರಗಳನ್ನು ಹಂಚಿದ್ದ. ಇದನ್ನು ಕೇಳಿದ್ದೇ ತಡ ಜನರು ಮುಗಿಬಿದ್ದು ಮೈಸೂರ್‌ ಪಾಕ್‌ ಖರೀದಿ ಮಾಡಿದ್ದಾರೆ.

45 ವರ್ಷದ ಶ್ರೀರಾಮ್ ಎನ್ನುವ ವ್ಯಕ್ತಿ ಕೊಯಮತ್ತೂರಿನಲ್ಲಿ 'ನೆಲ್ಲಯ್ ಲಾಲಾ ಸ್ವೀಟ್ಸ್' ಎಂಬ ಹೆಸರಿನಲ್ಲಿ 8 ಸ್ವೀಟ್ ಅಂಗಡಿಗಳನ್ನು ನಡೆಸುತ್ತಿದ್ದ. ' ಕೋವಿಡ್ ತಡೆಗೆ ನಮ್ಮ ಅಂಗಡಿಯಲ್ಲಿ ವಿಶೇಷವಾದ ಹಿಡಮೂಲಿಕೆಗಳಿಂದ ತಯಾರಾದ ಮೈಸೂರು ಪಾಕ್ ತಯಾರಿಸಿದ್ದೇವೆ. ಪವಾಡ ಎನ್ನುವಂತೆ ಇದನ್ನು ಸೇವಿಸಿದವರೆಲ್ಲರೂ ಬಹುಬೇಗ ಗುಣಮುಖರಾಗುತ್ತಾರೆ. ಅಥವಾ ಅಂತವರಿಗೆ ಬರುವುದೇ ಇಲ್ಲ. ಯಾರಿಗಾದರೂ ಕೋವಿಡ್ ಲಕ್ಷಣಗಳು ಕಂಡು ಬಂದರೆ ನಮ್ಮಲ್ಲಿಗೆ ಬನ್ನಿ. ಹರ್ಬಲ್ ಮೈಸೂರ್ ಪಾಕ್ ಸೇವಿಸಿ. ನಿಮ್ಮ ಮನೆಗೆ ನಾವೇ ತಲುಪಿಸುತ್ತೇವೆ' ಎಂದು ಬೋರ್ಡ್ ಹಾಕಿದ್ದ.

Fact Check: ಅಯ್ಯಯ್ಯೋ... ಅಡ್ವೈಸರ್‌ ಬಿಯರ್‌ನಲ್ಲಿ ಮೂತ್ರ!

ಕೊನೆಗೆ ಈ ಸುದ್ದಿ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳಿಗೂ ತಲುಪಿದೆ. ಅಂಗಡಿಗೆ ಬಂದು ತಪಾಸಣೆ ಮಾಡಿದ ಅಧಿಕಾರಿಗಳು 120 ಕೆ.ಜಿ. ಮೈಸೂರ್‌ ಪಾಕ್‌ ಜಪ್ತಿ ಮಾಡಿ, ಅಂಗಡಿಗೆ ಬೀಗ ಜಡಿದಿದ್ದಾರೆ. ಲಾಭದಾಸೆಗೆ ಜನರನ್ನು ವಂಚಿಸಿದ್ದ ಅಂಗಡಿಕಾರನಿಗೆ ತಕ್ತ ಶಾಸ್ತಿ ಆಗಿದೆ.