Asianet Suvarna News Asianet Suvarna News

ಸಚಿನ್ ವಾಜೆ ಬಂಧನದ ಬೆನ್ನಲ್ಲೇ ಮುಂಬೈ ಪೊಲೀಸ್ ಆಯುಕ್ತರ ವರ್ಗಾವಣೆ!

ಮುಂಬೈ ಮಹಾನಗರಿಯಲ್ಲಿ ಸರ್ಕಾರ, ಪೊಲೀಸ್, ಹಾಗೂ ತನಿಖಾ ದಳದಲ್ಲಿ ಕೆಲ ಬದಲಾವಣೆಗಳು ಆಗುತ್ತಿದೆ. ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಇಟ್ಟ ಪ್ರಕರಣದಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧನಕ್ಕೊಳಗಾಗಿದ್ದಾರೆ. ಇದರ ಬೆನ್ನಲ್ಲೇ  ಮುಂಬೈ ಪೊಲೀಸ್ ಕಮಿಶನರ್ ವರ್ಗಾವಣೆ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

Hemant Nagrale replaces Parambir Singh as Mumbai Police commissioner after sachin waze arrest ckm
Author
Bengaluru, First Published Mar 17, 2021, 5:50 PM IST

ಮುಂಬೈ(ಮಾ.17): ಉದ್ಯಮಿ ಮುಕೇಶ್ ಅಂಬಾನಿ ಮನೆ ಸಮೀಪದಲ್ಲಿ ಬಾಂಬ್ ಇಟ್ಟ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖೆಯಲ್ಲಿ ಹೊಸ ಹೊಸ ಮಾಹಿತಿಗಳು ಸ್ಫೋಟಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆ ಆಗಿದೆ. ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಅಂಬಾನಿ ಮನೆ ಸನಿಹದ ಬಾಂಬ್ ಪ್ರಕರಣ: ಅರೆಸ್ಟ್ ಆಗಿದ್ದ ಪೊಲೀಸ್ ಸಚಿನ್ ವಾಜೆ ಅಮಾನತು!.

ಮುಂಬೈ ಪೊಲೀಸ್ ಕಮೀಶನರ್ ಪರಮ್ ಬೀರ್ ಸಿಂಗ್ ಅವರನ್ನು ಹೋಮ್ ಗಾರ್ಡ್ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಇದೀಗ ಪರಮ್ ಬೀರಿ ಸಿಂಗ್ ಅವರಿಂದ ತೆರವಾದ ಮುಂಬೈ ಪೊಲೀಸ್ ಆಯುಕ್ತ ಸ್ಥಾನಕ್ಕೆ ಇದೀಗ ಹೇಮಂತ್ ನಗ್ರಾಲೆ ಅವರನ್ನು ನೇಮಕ ಮಾಡಲಾಗಿದೆ.

ಅಂಬಾನಿ ಮನೆ ಸಮೀದಲ್ಲಿನ ಸ್ಫೋಟಕ ಪ್ರಕರಣ ಮಹಾರಾಷ್ಟ್ರದ ಮೈತ್ರಿ ಸರ್ಕಾರವನ್ನು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಸಿದೆ. ಇದರ ಬೆನ್ನಲ್ಲೇ ಬಾಂಬ್ ಪ್ರಕರಣದಲ್ಲಿ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧನಕ್ಕೊಳಗಾಗಿ ಇದೀಗ ಅಮಾನತುಗೊಂಡಿದ್ದಾರೆ. ತೀವ್ರ ಹಿನ್ನಡೆ ಅನುಭವಿಸಿರುವ ಉದ್ಧವ್ ಠಾಕ್ರೆ ಸರ್ಕಾರ ಇದೀಗ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಿದೆ.

ಅಂಬಾನಿ ಮನೆ ಸಮೀಪದ ಬಾಂಬ್ ಪ್ರಕರಣವನ್ನು ಪರಮ್ ಬೀರ್  ಸಿಂಗ್ ಸರಿಯಾಗಿ ನಿರ್ವಹಿಸಿಲ್ಲ ಅನ್ನೋದು ಸರ್ಕಾರದ ನಿಲುವು. ಹೀಗಾಗಿ ಈ ಪ್ರಕರಣ ಸರ್ಕಾರಕ್ಕೂ ತೀವ್ರ ಹಿನ್ನಡೆ ತಂದಿದೆ. ಆದರೆ ಆಯುಕ್ತರ ವರ್ಗಾವಣೆಗೆ ಟೀಕೆಗಳು ಕೇಳಿಬಂದಿದೆ.

Follow Us:
Download App:
  • android
  • ios