ಈ ಬಾರಿಯೂ ಚಳಿಗೆ ಉತ್ತರ ಭಾರತದ ರಾಜ್ಯಗಳು ತತ್ತರಿಸಿ ಹೋಗಿದ್ದು, ಅನೇಕ ಕಡೆ ತಾಪಮಾನ ಮೈನಸ್ ಪ್ರಮಾಣದಲ್ಲಿ ದಾಖಲಾಗುತ್ತಿದೆ.
ನವದೆಹಲಿ: ಈ ಬಾರಿಯೂ ಚಳಿಗೆ ಉತ್ತರ ಭಾರತದ ರಾಜ್ಯಗಳು ತತ್ತರಿಸಿ ಹೋಗಿದ್ದು, ಅನೇಕ ಕಡೆ ತಾಪಮಾನ ಮೈನಸ್ ಪ್ರಮಾಣದಲ್ಲಿ ದಾಖಲಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಟ್ಟಮಂಜು ಸಹಿತ 4.4 ಡಿಗ್ರಿ ತಾಪಮಾನ ದಾಖಲಾಗಿದೆ ಹಾಗೂ ಇದು ಈ ಬಾರಿಯ ಋುತುಮಾನದ ಅತಿ ಕನಿಷ್ಠ ದಾಖಲೆಯಾಗಿದ್ದು ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ರಾಜಸ್ಥಾನದ ಫತೇಪುರದಲ್ಲಿ -0.5 ಡಿಗ್ರಿ, ಕನಿಷ್ಠ ತಾಪಮಾನ ದಾಖಲಾಗಿದೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮಂಗಳವಾರ ರಾತ್ರಿ -5.2 ಡಿಗ್ರಿ ತಾಪಮಾನ ದಾಖಲಾಗಿದೆ ಹಾಗೂ -9.4 ಡಿಗ್ರಿ ತಾಪಮಾನ ಮೂಲಕ ಪಹಲ್ಗಾಮ್ ಇಲ್ಲಿನ ಅತಿ ಕಡಿಮೆ ತಾಪಮಾನ ಹೊಂದಿದ ಸ್ಥಳವಾಗಿದೆ. ಪಂಜಾಬ್ ಮತ್ತು ಹರ್ಯಾಣಗಳು ಮಂಜು ಸಹಿತ ಚಳಿಯಿಂದ ಆವರಿಸಲ್ಪಟ್ಟಿದ್ದು ಗುರುದಾಸ್‌ಪುರ 2.5 ಡಿಗ್ರಿ ಹಾಗೂ ಹಿಸಾರ್ 5.9 ಡಿಗ್ರಿ ತಾಪಮಾನ ದಾಖಲಿಸುವ ಮೂಲಕ ಕ್ರಮವಾಗಿ ಪಂಜಾಬ್ ಹಾಗೂ ಹರ್ಯಾಣದ ಅತ್ಯಂತ ಕಡಿಮೆ ಉಷ್ಣತೆ ಹೊಂದಿದ ಸ್ಥಳಗಳಾಗಿವೆ. ಈ ನಡುವೆ, ಜಾರ್ಖಂಡ್‌ನಲ್ಲಿ ಚಳಿ ಕಾರಣ 1 ವಾರ ಶಾಲೆಗೆ ರಜೆ ಸಾರಲಾಗಿದೆ.
ಬೆಚ್ಚಗಿರ್ಲಿ ಅಂತ ಮುಸುಕು ಹಾಕ್ಕೊಂಡು ಮಲಗ್ತೀರಾ ? ಹುಷಾರ್ ಜೀವಾನೇ ಹೋಗ್ಬೋದು !
