ಗುಜರಾತ್‌ನ ದ್ವಾರಕಾದಲ್ಲಿ ಯುವಕನೊರ್ವ ಕಚೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ದ್ವಾರಕಾ : ಇದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚುತಿದೆ. ಪ್ರತಿದಿನವೂ ಒಂದಲ್ಲ ಒಂದು ಕಡೆ ಇಂತಹ ಪ್ರಕರಣಗಳು ದಿನವೂ ಕೇಳಿ ಬರುತ್ತಿದೆ. ಅದೇ ರೀತಿ ಇಂದು ಗುಜರಾತ್‌ನ ದ್ವಾರಕಾದಲ್ಲಿ ಯುವಕನೋರ್ವ ದಿಢೀರ್ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.

ಕಚೇರಿಗೆ ಬಂದ ಕೆಲ ನಿಮಿಷಗಳಲ್ಲಿ ಯುವಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಗುಜರಾತ್‌ನ ದ್ವಾರಕಾದಲ್ಲಿ ನಡೆದಿದೆ. ಆತನ ಕೊನೆಕ್ಷಣಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಆತ ಕುಸಿದು ಬೀಳುತ್ತಿರುವುದು ಸೆರೆಯಾಗಿದೆ. ಮೃತ ಯುವಕನನ್ನು 36 ವರ್ಷದವ ಎಂದು ಗುರುತಿಸಲಾಗಿದ್ದು, ಹೆಸರು ತಿಳಿದಿಲ್ಲ. 

Scroll to load tweet…

ನಿನ್ನೆಯೂ ಇದೇ ರೀತಿಯ ಘಟನೆಯೊಂದು ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಕುಕ್ಕಟಪಲ್ಲಿಯಲ್ಲಿರುವ ಪ್ರಗತಿ ನಗರದ ಸಮೀಪವಿರುವ ಜಾಕಿ ಶೋರೂಮೊಂದಕ್ಕೆ ಶಾಪಿಂಗ್ ಮಾಡಲು ಬಂದ 37 ವರ್ಷದ ಯುವಕನೋರ್ವ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮೃತ ಯುವಕನನ್ನು ಕಲಾಲ್ ಪ್ರವೀಣ್ ಗೌಡ್ ಎಂದು ಗುರುತಿಸಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಯಾವುದೇ ಪ್ರಯೋಜನವಾಗಿಲ್ಲ, ವೈದ್ಯರು ಆತ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿಯೂ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿತ್ತು.

ಹಾಗೆಯೇ ಕಳೆದ ತಿಂಗಳು ಗುಜರಾತ್‌ನಲ್ಲಿ ಮಗನ ಐದು ವರ್ಷದ ಹುಟ್ಟುಹಬ್ಬದ ವೇಳೆ ತಾಯಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಗುಜರಾತ್‌ನ ವಾಪಿಯ ಹೊಟೇಲೊಂದರಲ್ಲಿ ಈ ಘಟನೆ ನಡೆದಿತ್ತು. ಈ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಐದು ವರ್ಷದ ಮಗ ಗೌರಿಕ್‌ ಹುಟ್ಟುಹಬ್ಬವದ ಸಂಭ್ರಮಾಚರಣೆ ನಡೆಯುತ್ತಿರುವಾಗಲೇ ತಾಯಿ ಯಾಮಿನಿಬೇನ್ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಸಮೀಪದಲ್ಲಿದ್ದ ಜನ ಅವರ ನರೆವಿಗೆ ಆಗಮಿಸಿದರೂ ಅವರನ್ನು ಬದುಕಿಸಿಕೊಳ್ಳಲಾಗಿರಲಿಲ್ಲ.

Scroll to load tweet…