ಸೋಂಕಿತರಲ್ಲಿ ಜೀವನೋತ್ಸಾಹ ತುಂಬಲು ಆಸ್ಪತ್ರೆ ಸಿಬ್ಬಂದಿ ಡ್ಯಾನ್ಸ್; ವಿಡಿಯೋ ವೈರಲ್!
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್‌ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಲವು ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಸರಿಯಾಗಿ ಆರೈಕೆ ಮಾಡಲಾಗುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಇದರ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಜೀವನೋತ್ಸಾಹ ತುಂಬಲು ಆಸ್ಪತ್ರೆ ಸಿಬ್ಬಂದಿಗಳು ಮಾಡಿದ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.
ವಡೋದರ(ಏ.17): ಸರಿಯಾಗಿ ಆರೈಕೆ ಮಾಡಲಾಗುತ್ತಿಲ್ಲ, ಚಿಕಿತ್ಸೆ ಸರಿಯಾಗಿಲ್ಲ ಅನ್ನೋ ಆರೋಪಗಳ ನಡುವೆ ಗುಜರಾತ್‌ನ ವಡೋದರ ಆಸ್ಪತ್ರೆ ಭಾರಿ ಸದ್ದು ಮಾಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಲ್ಲಿ ಜೀವನೋತ್ಸಾಹ ತುಂಬಲು ಆಸ್ಪತ್ರೆ ಸಿಬ್ಬಂದಿಗಳು ಡ್ಯಾನ್ಸ್ ಮಾಡಿದ್ದಾರೆ. ಸಿಬ್ಬಂದಿಗಳ ಜೊತೆ ಸೋಂಕಿತರು ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ರೋಗಿಗಳ ಆರೈಕೆ ಜೊತೆಗೆ ಅವರಲ್ಲಿ ಹೊಸ ಚೈತನ್ಯ ಮೂಡಿಸುವಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕೊರೋನಾ ಹೆಚ್ಚಳ, ಸಾಂಕೇತಿಕ ಕುಂಭಮೇಳ: ಮೋದಿ.
ಆಸ್ಪತ್ರೆಯ ಬೆಡ್ ಮೇಲೆ ಹಲವು ರೋಗಿಗಳು ಮಲಗಿದ್ದಾರೆ. ಎಲ್ಲರೂ ಕೊರೋಾ ಸೋಂಕಿತರು. ಇವರ ಚಿಕಿತ್ಸೆ ನಡುವೆ ಆಸ್ಪತ್ರೆ ಸಿಬ್ಬಂದಿಗಳು ಇವರನ್ನು ಚೀಯರ್ ಅಪ್ ಮಾಡಲು 1990ರ ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರದ ಗೀತೆ ಸೋಚ್ನಾ ಕ್ಯಾ ಜೋ ಬಿ ಹೋಗಾ ದೇಖಾ ಜಾಯೇಗಾ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಕೊರೋನಾ ಭೀತಿ, ಚಿಕಿತ್ಸೆ, ಕುಟುಂಬದರನ್ನೂ ನೋಡಲಾಗದ ಪರಿಸ್ಥಿತಿಯಲ್ಲಿ ಸೊರಗಿ ಹೋಗಿದ್ದ ಸೋಂಕಿತರಲ್ಲಿ ಈ ಹಾಡು ಹಾಗೂ ಡ್ಯಾನ್ಸ್ ಹೊಸ ಉತ್ಸಾಹ ಮೂಡಿಸಿತು. ಮುಖದಲ್ಲಿ ನಗು ತರಿಸಿತು. ಸಿಬ್ಬಂದಿಗಳ ಜೊತೆ ಸೋಂಕಿತರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಡ್ಯಾನ್ಸ್ ಮಾಡಿದ್ದಾರೆ. ಕೆಲ ಸೋಂಕಿತರು ಬೆಡ್‌ನಲ್ಲಿ ಮಲಗಿಕೊಂಡೇ ಕೈ ಮೇಲೆತ್ತಿ ಡ್ಯಾನ್ಸ್ ಮಾಡಿದ್ದಾರೆ.
ಕೊರೋನಾ 2ನೇ ಅಲೆ ಆರ್ಭಟ: ಕಿಮ್ಸ್‌ನಲ್ಲಿ ಮತ್ತೆ ಪ್ಲಾಸ್ಮಾ ಥೆರಪಿ ಪ್ರಾರಂಭ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಪತ್ರೆ ಸಿಬ್ಬಂದಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನೊಂದಿರುವ ಮನಸ್ಸುಗಳಿಗೆ ಇದು ಆಗತ್ಯವಾಗಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.