ದೆಹಲಿ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ: ಇಂದು 13 ಮಂದಿ ಬಲಿ, 1250 ಪ್ರಕರಣ ಪತ್ತೆ!
ದೇಶದ ಹಲವು ನಗರಗಳಲ್ಲಿ ಕೊರೋನಾ ವೈರಸ್ ನಿಯಂತ್ರಣ ಕಷ್ಟವಾಗುತ್ತಿದೆ. ದೆಹಲಿ ಆರೋಗ್ಯ ಇಲಾಖೆ ಇಂದಿನ(ಆ.21) ಕೊರೋನಾ ವೈರಸ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಇಂದೂ ಕೂಡ ಹೊಸ ಪ್ರಕರಣ ಸಾವಿರ ಗಡಿ ದಾಟಿದೆ. ಚೇತರಿಕೆ ಪ್ರಮಾಣ ಸಮಾಧಾನ ತರುವಂತಿದೆ.
ದೆಹಲಿ(ಆ.21): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸುತ್ತಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಧಾನವಾಗಿ ಕೊರೋನಾ ವೈರಸ್ ಹರಡುವಿಕೆ ಕಡಿಮೆಯಾಗುತ್ತಿದೆ. ಆದರೂ ಪ್ರತಿ ದಿನ ಸೋಂಕಿತರ ಸಂಖ್ಯೆ ಸಾವಿರ ದಾಡುತ್ತಿದೆ. ಇಂದೂ(ಆ.21) ಹೊಸ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿನ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿರುವುದು ಕೊಂಚ ಸಮಾಧಾನ ತಂದಿದೆ.
ಕೊರೋನಾ ಗೆದ್ದ ಬಳಿಕವೂ ಮಾನವೀಯತೆ ಮೆರೆದ KSRP ಪೊಲೀಸ್ರು
ದೆಹಲ್ಲಿಂದು ಕೊರೋನಾ ವೈರಸ್‌ಗೆ 13 ಮಂದಿ ಬಲಿಯಾಗಿದ್ದಾರೆ. ಇನ್ನು 1,250 ಹೊಸ ಪ್ರಕರಣಗಳು ಪತ್ತೆಯಾಗಿದೆ. 1082 ಕೊರೋನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1,58,604. ಆದರೆ ಸಕ್ರೀಯ ಪ್ರಕರಣದ ಸಂಖ್ಯೆ 11,426. ಒಟ್ಟು ಸಾವು 4270.
ಶೇ.51 ರಷ್ಟು ಮಂದಿಯ ಸಂಪೂರ್ಣ ಆದಾಯ ಸ್ಥಗಿತ: ಲಾಕ್‌ಡೌನ್ ಪರಿಣಾಮದ ಅಧ್ಯಯನ ವರದಿ ಬಹಿರಂಗ!.
ಆಗಸ್ಟ್ 21ರ ಕೊರೋನಾ ಹೆಲ್ತ್ ಬುಲೆಟಿನ್(ದೆಹಲಿ)
ಹೊಸ ಸೋಂಕಿತರ ಸಂಖ್ಯೆ : 1250
ಗುಣಮುಖರ ಸಂಖ್ಯೆ: 1082
ಸಾವು: 13
ದೆಹಲಿ ಆಸ್ಪತ್ರೆಗಳಲ್ಲಿ ಒಟ್ಟು 14125 ಬೆಡ್‌ಗಳು ಲಭ್ಯವಿದೆ. ಇದರಲ್ಲಿ 3585 ಬೆಡ್ ಭರ್ತಿಯಾಗಿದ್ದು, ಇನ್ನು 10540 ಬೆಡ್‌ಗಳು ಖಾಲಿ ಇವೆ. ದೆಹಲಿ ನಗರದಲ್ಲಿ ಒಟ್ಟು 10143 ಕೋವಿಡ್ ಕೇಂದ್ರಗಳಿವೆ. ಇದರಲ್ಲಿ 598 ಕೇಂದ್ರಗಳಲ್ಲಿ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 5719 ಕೋವಿಡ್ ಕೇರ್ ಸೆಂಟರ್ ಖಾಲಿ ಇವೆ. 5818 ಮಂದಿ ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದಾರೆ.
ದೆಹಲಿಯಲ್ಲಿನ ಕೊರೋನಾ ಮಾಹಿತಿ:
ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ :158604
ಗುಣಮುಖರ ಸಂಖ್ಯೆ: 142908
ಸಾವು : 4270
ಸಕ್ರಿಯ ಪ್ರಕರಣ: 11426