ಕೊರೋನಾ ಗೆದ್ದ ಬಳಿಕವೂ ಮಾನವೀಯತೆ ಮೆರೆದ KSRP ಪೊಲೀಸ್ರು

ಕೊರೋನಾ ಗೆದ್ದ ಬಳಿಕವೂ ಪೊಲೀಸರು ಪ್ಲಾಸ್ಮ ದಾನ ಮಾಡುವ ಮೂಲಕ ಮಾನವೀಯತೆ ಮೆರೆದು ನಿಜವಾದ ವಾರಿಯರ್ಸ್ ಎನಿಸಿಕೊಂಡಿದ್ದಾರೆ. 

KSRP ADGP Alok Kumar honors cop who donated his plasma to covid19 patients

ಬೆಂಗಳೂರು, (ಆ.21): ದಾನಗಳಲ್ಲಿಯೇ ಅತಿ ಶ್ರೇಷ್ಠವಾದ ದಾನ ಎಂದರೆ ರಕ್ತದಾನ. ಈಗ ಸದ್ಯದ ಪತಿಸ್ಥಿತಿಯಲ್ಲಿ ಪ್ಲಾಸ್ಮ ದಾನವೂ ಒಂದು ಮಹಾದಾನ.

ಹೌದು...ಕೊರೋನಾ ಗೆದ್ದ ಬಳಿಕವೂ ಪೊಲೀಸರು ಪ್ಲಾಸ್ಮ ದಾನ ಮಾಡುವ ಮೂಲಕ ಮಾನವೀಯತೆ ಮೆರೆದು ನಿಜವಾದ ವಾರಿಯರ್ಸ್ ಎನಿಸಿಕೊಂಡಿದ್ದಾರೆ. 

ಕೊರೋನಾದಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಕರ್ನಾಟಕದ ಶಾಸಕ

 KSRP ಪೊಲೀಸ್ರು ಬಡ ಕೊರೋನಾ ಸೋಂಕಿತರಿಗೆ ಫ್ಲಾಸ್ಮಾ ದಾನ ಮಾಡಿದ್ದಾರೆ. ಮಾರುತಿ ನಾಯ್ಕ್. ವಿಶ್ವನಾಥ, ನರೇಶ್ ಕುಮಾರ್, ರಾಜೀವ್ ಹಾಗೂ ರವಿ ಪ್ಲಾಸ್ಮ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. 

ಪ್ಲಾಸ್ಮ ದಾನಿಗಳಿಗೆ ಸನ್ಮಾನ
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 4ನೇ ಪಡೆಯ 5 ಸಿಬ್ಬಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಸನ್ಮಾನ ಮಾಡಿ ಗೌರವಿಸಿದರು. ಇಂದು (ಶುಕ್ರವಾರ) ಬೆಂಗಳೂರಿನ ಕೋರಮಂಗಲ 4ನೇ ಪಡೆ ಸಭಾಂಗಣದಲ್ಲಿ ನಡೆದ ಸಮಾಂಭದಲ್ಲಿ ಪ್ರತಿಯೊಬ್ಬರಿಗೂ ತಲಾ 3 ಸಾವಿರ ರೂ.  ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದರು.

ಕಳೆದ ಮೂರು ತಿಂಗಳಿನಿಂದ ಪೊಲೀಸರು ಹಗಲಿರುಳು ಎನ್ನದೇ , ರಜೆ ಇಲ್ಲದೇ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಆದರೂ ಕೆಲವರೂ ಸೋಂಕಿಗೆ ತುತ್ತಾಗಿ ಗೆದ್ದು ಬಂದ್ರೆ, ಇನ್ನು ಕೆಲವರು ಕೊರೋನಾ ಮಹಾಮಾರಿಗೆ ಉಸಿರು ಚೆಲ್ಲಿದ್ದಾರೆ.
 

Latest Videos
Follow Us:
Download App:
  • android
  • ios