Asianet Suvarna News Asianet Suvarna News

ಮಗನ ಹುಟ್ಟುಹಬ್ಬಕ್ಕೆ ಮನೆಗೆ ಬರುತ್ತೇನೆ ಎಂದಿದ್ದರು : ಹುತಾತ್ಮ ಯೋಧನ ಪತ್ನಿಯ ಅಳಲು!

*ಮಣಿಪುರದ ಸಿಂಘಾತ್‌ನಲ್ಲಿ ನಡೆದ  ಉಗ್ರರ ದಾಳಿ
*ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮ
*ದಾಳಿಯಲ್ಲಿ ಮೃತಪಟ್ಟವರಲ್ಲಿ ಅಸ್ಸಾಂ ರೈಫಲ್ಸ್‌ನ ಸುಮನ್
*ಮಗನ ಹುಟ್ಟುಹಬ್ಬಕ್ಕೆ ಭೇಟಿ ನೀಡುತ್ತೇನೆ ಎಂದಿದ್ದ ಯೋಧ

He promised to come home for sons birthday said  Wife of soldier killed in Manipur ambush mnj
Author
Bengaluru, First Published Nov 14, 2021, 7:53 PM IST

ಗುವಾಹಟಿ(ನ.14): ಮಣಿಪುರದ ಸಿಂಘಾತ್‌ನಲ್ಲಿ ನಡೆದ  ಉಗ್ರರ ದಾಳಿಯಲ್ಲಿ(Manipur ambush) ಕರ್ನಲ್ , ಪತ್ನಿ ಹಾಗೂ 7 ವರ್ಷದ ಪುತ್ರ ಸೇರಿದಂತೆ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಹೊಂಚು ಹಾಕಿ ಕುಳಿತು ಸೇನಾ ವಾಹನದ ಮೇಲೆ ದಾಳಿ ಮಾಡಿದ ಉಗ್ರರು ಅಟ್ಟಹಾಸ ಮೆರೆದಿದ್ದರು. ಈ ಘಟನೆಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ. ಶನಿವಾರ(ನ.13) ಬೆಳಗ್ಗೆ ಅಸ್ಸಾಂ ರೈಫಲ್ಸ್ (Assam Rifles) ಸೇನಾ ವಾಹನ ಬರುವಿಕೆಯನ್ನು ಕಾದು ಕುಳಿತ ಉಗ್ರರು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದರೆ, ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಚುರಾಚಂದ್‌ಪುರ ಜಿಲ್ಲೆಯ ಸಿಂಘತ್ ಉಪವಿಭಾಗದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಲ್ಲಿ ಅಸ್ಸಾಂ ರೈಫಲ್ಸ್ ಜವಾನ್ ಸುಮನ್ ಸ್ವರ್ಗೀಯರಿ (Suman Swargiary) ಕೂಡ ಒಬ್ಬರು. 2011 ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ಅವರು ಬಕ್ಸಾ ಜಿಲ್ಲೆಯ ಬಾರಾಮಾ ಪ್ರದೇಶದ ಬಳಿಯ ತೆಕೆರಕುಚಿ ಕಲಿಬರಿ (Thekerakuchi Kalibari) ಗ್ರಾಮದವರು. ಈ ಹಿಂದೆ 2007 ರಲ್ಲಿ ಉಗ್ರರು ಅವರ ತಂದೆ ಕನಕ್ ಸ್ವರ್ಗಿಯರಿಯನ್ನು ಕೊಂದಿದ್ದರು. ಸುಮನ್ ಕೊನೆಯ ಬಾರಿಗೆ ಈ ವರ್ಷ ಜುಲೈನಲ್ಲಿ ಮನೆಗೆ ಭೇಟಿ ನೀಡಿದ್ದರು.

 

 

ನಂತರ ನನಗೆ ಕರೆ ಮಾಡುವುದಾಗಿ ಹೇಳಿದ್ದರು!

"ನಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಲು ಮುಂದಿನ ತಿಂಗಳು ಮನೆಗೆ ಭೇಟಿ ನೀಡುವುದಾಗಿ ನನ್ನ ಪತಿ ಭರವಸೆ ನೀಡಿದ್ದರು. ಅವರು ಶುಕ್ರವಾರ ನನಗೆ ಕರೆ ಮಾಡಿದರು. ನನ್ನ ಪತಿ ಅವರು ದೂರದ ಪ್ರದೇಶಕ್ಕೆ ಹೋಗುತ್ತಿದ್ದಾರೆ ಮತ್ತು ನಂತರ ನನಗೆ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಮತ್ತೊಮ್ಮೆ ಅವರು ಕರೆ ಮಾಡಲಿಲ್ಲ" ಎಂದು ಸುಮನ್ ಸ್ವರ್ಗಿಯರಿ ಅವರ ಪತ್ನಿ ಹೇಳಿದ್ದಾರೆ.

Manipur Terror Attack:ಉಗ್ರ ದಾಳಿಗೆ ಕರ್ನಲ್ ಕುಟುಂಬ, 4 ಯೋಧರು ಹುತಾತ್ಮ, ಘಟನೆ ಖಂಡಿಸಿದ ಮೋದಿ!

ಗಾಯಗೊಂಡ ಅಸ್ಸಾಂ ರೈಫಲ್ಸ್ ಸಿಬ್ಬಂದಿಯೊಬ್ಬರು ಚಿಕಿತ್ಸೆಗಾಗಿ ದಾಖಲಾಗಿರುವ ಶಿಜಾ ಆಸ್ಪತ್ರೆಗೆ ಈ  ಭೇಟಿ ನೀಡಿದ್ದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh) ಅವರು "ಮ್ಯಾನ್ಮಾರ್ ಗಡಿಯಿಂದ 4 ಕಿಲೋಮೀಟರ್ ದೂರದ ನಮ್ಮ ಪ್ರದೇಶಕ್ಕೆ ಶಸ್ತ್ರಸಜ್ಜಿತರು ನುಸುಳಿದಾಗ ಈ ಘಟನೆ ನಡೆದಿದೆ. ಇದು ಮ್ಯಾನ್ಮಾರ್ ಗಡಿಯಲ್ಲಿ ನಡೆದಿದೆ. ರಾಜ್ಯ ಸರ್ಕಾರ ಈಗಾಗಲೇ ನಮ್ಮ ಕಮಾಂಡೋಗಳು ಮತ್ತು ಪೊಲೀಸ್ ತಂಡಗಳನ್ನು ಕಳುಹಿಸಿದೆ. ಅಸ್ಸಾಂ ರೈಫಲ್ಸ್‌ನೊಂದಿಗೆ ಸಂಯೋಜಿತ ತಂಡದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ."  ಎಂದು ಮಾಹಿತಿ ನೀಡಿದ್ದಾರೆ. 

2018ರ ನಂತರ ಮಣಿಪುರದಲ್ಲಿ ಭದ್ರತಾ ಪಡೆಗಳ ಮೇಲೆ ಮೊದಲ ಭಾರೀ ದಾಳಿ

ಜೂನ್ 4, 2018 ರಂದು ಚಂದೇಲ್ ಜಿಲ್ಲೆಯಲ್ಲಿ ಸೇನಾ ಬೆಂಗಾವಲು ಪಡೆ ದಾಳಿಗೆ ಒಳಗಾದ ನಂತರ ಈ ಘಟನೆಯು ಮಣಿಪುರದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಮೊದಲ ದೊಡ್ಡ ದಾಳಿಯಾಗಿದೆ. ಹೊಂಚುದಾಳಿಯು ಸೇನೆಯ 6 ಡೋಗ್ರಾ ರೆಜಿಮೆಂಟ್‌ನ ರೋಟ್‌ ಓಪನಿಂಗ್‌ ಪ್ಯಾಟ್ರೋಲ್‌ನ (ROP) 18 ಸಿಬ್ಬಂದಿಗಳ ಸಾವಿಗೆ ಕಾರಣವಾಗಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ದಾಳಿಯನ್ನು ಖಂಡಿಸಿ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

Follow Us:
Download App:
  • android
  • ios