ಭಾರತೀಯ ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ ಕರ್ನಲ್ ಕುಟುಂಬ, ಭದ್ರತಾ ಪಡೆ ಸೇರಿ 7 ಮಂದಿ ಹುತಾತ್ಮ ಉಗ್ರ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ
ನವದೆಹಲಿ(ನ.13): ಹೊಂಚು ಹಾಕಿ ಕುಳಿತು ಸೇನಾ ವಾಹನದ ಮೇಲೆ ದಾಳಿ ಮಾಡಿದ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮಣಿಪುರದ ಸಿಂಘಾತ್‌ನಲ್ಲಿ ನಡೆದ ಈ ಉಗ್ರರ ದಾಳಿಯಲ್ಲಿ(Manipur ambush) ಕರ್ನಲ್ , ಪತ್ನಿ ಹಾಗೂ 7 ವರ್ಷದ ಪುತ್ರ ಸೇರಿದಂತೆ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ಅಸ್ಸಾಂ ರೈಫಲ್ಸ್ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯನ್ನು(Terror Attack) ಕಠುವಾಗಿ ಖಂಡಿಸಿರುವ ಪ್ರಧಾನಿ ಮೋದಿ, ದಾಳಿಯಲ್ಲಿ ಹುತಾತ್ಮರಾದ ಕುಟುಂಬಕ್ಕೆ ನನ್ನ ಸಂತಾಪಗಳು. ನೋವಿನಲ್ಲಿರುವ ಕುಟುಂಬದ ಜೊತೆ ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರು ಮಣಿಪುರದಲ್ಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಅಸ್ಸಾ ರೈಫಲ್ಸ್ ವಾಹನದ ಮೇಲಿನ ಭಯೋತ್ಪದನಾ ದಾಳಿಯಿಂದ ತೀವ್ರ ನೋವಾಗಿದೆ. ಈ ದೇಶ ನಾಲ್ವರು ವೀರ ಯೋಧರನ್ನು ಕಳದುಕೊಂಡಿದೆ. ಇದರ ಜೊತೆಗೆ ಕರ್ನಲ್ ಹಾಗೂ ಅವರ ಕುಟುಂಬವನ್ನು ಕಳೆದುಕೊಂಡ ನೋವಿನಲ್ಲಿದೆ. ದುಃಖದಲ್ಲಿರುವ ಕುಟುಂಬಕ್ಕೆ ಸಂತಾಪ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
Terror Attack: ಶ್ರೀನರದಲ್ಲಿ ಉಗ್ರರ ಗುಂಡಿನ ದಾಳಿಗೆ 29 ವರ್ಷದ ಪೊಲೀಸ್ ಹುತಾತ್ಮ!
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಬಹುತೇಕ ನಾಯಕರು ಮಣಿಪುರ ದಾಳಿಯನ್ನು ಖಂಡಿಸಿದ್ದಾರೆ. ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಆಗ್ರಹಿಸಿದ್ದಾರೆ.
ಶನಿವಾರ(ನ.13) ಬೆಳಗ್ಗೆ ಅಸ್ಸಾಂ ರೈಫಲ್ಸ್ ಸೇನಾ ವಾಹನ ಬರುವಿಕೆಯನ್ನು ಕಾದು ಕುಳಿತ ಉಗ್ರರು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದರೆ, ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ಸಂದರ್ಭದಲ್ಲಿ ಕರ್ನಲ್ ವಿಪ್ಲವ್ ತ್ರಿಪಾಠಿ ಪತ್ನಿ ಹಾಗೂ 7 ವರ್ಷದ ಪುತ್ರನೊಂದಿಗೆ ಮಯನ್ಮಾರ್ ಗಡಿಯಿಂದ ಹಿಂತುರುಗಿತ್ತಿದ್ದರು.
ಪಾಕ್ ಟೂಲ್‌ಕಿಟ್ ಬೆಳಕಿಗೆ: ಕಾಶ್ಮೀರದಲ್ಲಿ ದಾಳಿಗೆ ಪಾಕ್ ಐಎಸ್‌ಐ ಸಂಚು!
ಕಮಾಡಿಂಗ್ ಅಧಿಕಾರಿಯ ಕುಟುಂಬವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ. ಇದು ದುರಂತ. ಈ ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಣಿಪುರದಲ್ಲಿ ಹಲವು ಬಂಡುಕೋರರ ಗುಂಪುಗಳಿವೆ. ಇದರ ಜೊತೆಗೆ ಉಗ್ರಗಾಮಿಗಳ ಗುಂಪು ಸೇರಿಕೊಂಡಿದೆ. ಯಾವ ಭಯೋತ್ಪಾದಕ ಸಂಘಟನೆ, ಬಂಡುಕೋರರು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಮೂಲಗಳ ಪ್ರಕರಾ ಮಣಿಪುರ ಬಂಡುಕೋರರ ಗುಂಪು ಪೀಪಲ್ಸ್ ಲಿಬರೇಶನ್ ಆರ್ಮಿ ಈ ದಾಳಿ ನಡೆಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದೀಗ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದೆ. ದಾಳಿ ನಡೆದ ಪ್ರದೇಶ ಬೆಟ್ಟ ಗುಡ್ಡಗಳಿಂದ ಕೂಡಿ ದುರ್ಗಮ ಪ್ರದೇಶವಾಗಿದೆ. ಆದರೆ ಭಾರತೀಯ ಸೇನೆ ಕಾರ್ಯಾಚರಣೆ ಚುರುಕುಗೊಳಿಸಿದೆ. ಈ ದಾಳಿಕೋರರನ್ನು ಮೇಲೆ ಸೇಡು ತೀರಿಸಿಕೊಳ್ಳಲು ಪ್ಯಾರಾಮಿಲಟರಿ ಪಡೆ, ರಾಜ್ಯ ಪಡೆ ಹಾಗೂ ಭಾರತೀಯ ಸೇನೆ ಸಜ್ಜಾಗಿದೆ. ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ ಎಂದು ಮಣಿಪುರ ಮುಖ್ಯಮಂತ್ರಿ ಬಿರೆನ್ ಸಿಂಗ್ ಹೇಳಿದ್ದಾರೆ.
ಮಣಿಪುರದಲ್ಲಿನ ಭಯೋತ್ಪಾದಕ ದಾಳಿಗೆ ಆಕ್ರೋಶ ವ್ಯಕ್ತವಾಗಿದೆ. ಮಣಿಪುರದಲ್ಲಿ ಯಾವ ಬಂಡುಕೋರರ ಗುಂಪನ್ನು ಉಳಿಸಬಾರದು. ಭಯೋತ್ಪಾದಕರ ಸದ್ದು ಅಡಗಿಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದಾಳಿಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.
