Asianet Suvarna News Asianet Suvarna News

ಮೋದಿಯನ್ನು ಕೊಂಡಾಡಿದ ದೇವೇಗೌಡ, ಶಂಕರಾಚಾರ್ಯರ ಪ್ರತಿಮೆ ನೋಡುವ ಆಸೆ ವ್ಯಕ್ತಪಡಿಸಿದ ಎಚ್‌ಡಿಡಿ

* ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ದೇವೇಗೌಡ
* ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ
* ಪತ್ರದ ಮೂಲಕದ ಮೋದಿಗೆ ಅಭಿನಂದನೆ ತಿಳಿಸಿದ ಎಚ್‌ಡಿಡಿ

HD Devegowd Writes to PM Narendra Modi over Shankaracharya statue in Kedarnath rbj
Author
Bengaluru, First Published Nov 6, 2021, 11:13 PM IST

ಬೆಂಗಳೂರು, (ನ.06): ಕೇದಾರನಾಥದಲ್ಲಿ ಆದಿ ಶಂಕರಚಾರ್ಯರ ಪ್ರತಿಮೆಯನ್ನು (Shankaracharya statue) ಅನಾವರಣಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (HD Devegowda) ಅಭಿನಂದನೆ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ  ಬರೆದಿದ್ದು, ಕೇದಾರನಾಥ (Kedarnath) ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡುವುದಕ್ಕೆ ಆದಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ಹೊಂದಿದ್ದ ಬದ್ಧತೆ, ಸಮರ್ಪಣಾ ಮನೋಭಾವವನ್ನು ಕೊಂಡಾಡಿದ್ದಾರೆ.

Modi In Kedarnath| ಕೇದಾರನ ರುದ್ರಾಭಿಷೇಕ ಮಾಡಿ, ಆದಿಗುರು ಶಂಕರರ ಪುತ್ಥಳಿ ಅನಾವರಣಗೊಳಿಸಿದ ಪಿಎಂ!

ತಾವೂ ಸಹ ಬದಲಾಗಿರುವ ಕೇದಾರನಾಥ ಕ್ಷೇತ್ರವನ್ನು ಹಾಗೂ ಶಂಕರಾಚಾರ್ಯರ ಪ್ರತಿಮೆಯನ್ನು ದರ್ಶಿಸಬೇಕೆಂಬ ಆಸೆಯನ್ನು ಮಾಜಿ ಪ್ರಧಾನಿ ದೇವೇಗೌಡ ಬಹಿರಂಗಪಡಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಕೇದಾರನಾಥದಲ್ಲಿ ನವೆಂಬರ್ 5 ರಂದು ನೀವು ಅನಾವರಣಗೊಳಿಸಿದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕಂಡು ತುಂಬಾ ಸಂತೋಷವಾಗಿದೆ. ನಿಮಗೆ ಇದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ಕರ್ನಾಟಕದ ಚಿಕ್ಕಮಗಳೂರಿನ ಸೃಂಗೇರಿಯ ಶಾರದಾ ಪೀಠದ ಅನುಯಾಯಿ ನಾನು. ನಿಮಗೆ ತಿಳಿದಿರುವಂತೆ ಮಹಾನ್ ಸಂತ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಶಕ್ತಿಕೇಂದ್ರಗಳಲ್ಲಿ ಇದೂ ಕೂಡ ಒಂದು. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತವಾಗಿದೆ.

Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!

ಶೃಂಗೇರಿ ಮಠ ನನ್ನನ್ನು ಆಕರ್ಷಿಸಿದ್ದು, ಅವರ ಸಾಮರಸ್ಯದಿಂದ. ಇಲ್ಲಿ ಅನೇಕ ಶತಮಾನಗಳಿಂದ ರಾಜರು, ಆಡಳಿತಗಾರರಿಗೆ ಆಧ್ಯಾತ್ಮಿಕದ ಅರಿವನ್ನು ಮೂಡಿಸಿದ್ದಾರೆ. ಒಡೆಯರು, ಪೇಶ್ವೆಗಳು, ಕೆಳದಿ ಹಾಗೂ ತಿರೂವಾಂಕೂರು ದೊರೆಗಳು ಮಠದಿಂದ ಪ್ರಯೋಜನ ಪಡೆದಿದ್ದಾರೆ. ಮೈಸೂರಿನಲ್ಲಿ ಆಡಳಿತ ನಡೆಸಿದ ರಾಜರುಗಳಾದ ಹೈದರಿ ಅಲಿ, ಟಿಪ್ಪು ಸುಲ್ತಾನ್ ಮತ್ತು ಹೈದರಾಬಾದ್‍ನ ನಿಜಾಮರು ಮಠಕ್ಕೆ ಆಗಮಿಸಿ ಭಕ್ತಿಯನ್ನು ಸಲ್ಲಿಸುತ್ತಿದ್ದರು ಜೊತೆಗೆ ಇಲ್ಲಿಂದ ಮಾರ್ಗದರ್ಶನವನ್ನು ಪಡೆದಿದ್ದಾರೆ.

ಶೃಂಗೇರಿ ಮಠ ಇಂದಿಗೂ ತನ್ನನ್ನು ಅರಸಿ ಬರುವವರಿಗೆ ಮಾರ್ಗದರ್ಶನ ನೀಡುತ್ತಿದ್ದು, ನನಗೆ ವೈಯಕ್ತಿಕವಾಗಿ ನನಗೆ ಸಮಾಜದ ಸಾಮರಸ್ಯದ ಕೇಂದ್ರವಾಗಿ ಕಂಡಿದೆ. ಅಲ್ಲಿಂದ ಪಡೆದುಕೊಂಡ ಆಶೀರ್ವಾದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ದೇವೇಗೌಡ ತಿಳಿಸಿದ್ದಾರೆ.

ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!
ಉತ್ತರಾಖಂಡದ ಕೇದಾರನಾಥದಲ್ಲಿ ಆದಿಗುರು ಶಂಕರಾಚಾರ್ಯರ(Adi Shankaracharya) ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ (Mysuru) ಶಿಲ್ಪಿ ಅರುಣ್‌ ಯೋಗಿರಾಜ್‌. ಸ್ವತಃ ಪ್ರಧಾನಿ ಕಾರ್ಯಾಲಯವೇ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ(Mysuru, Karnataka) ಕಲಾವಿದನಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ. 2013ರಲ್ಲಿ ಉತ್ತರಾಖಂಡದಲ್ಲಿ ಭಾರಿ ಪ್ರವಾಹ ಉಂಟಾಗಿ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿಹೋಗಿತ್ತು. ನಂತರ ಅದರ ಮರುನಿರ್ಮಾಣದ ಭಾಗವಾಗಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರಗಳು ಜಂಟಿಯಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿವೆ.

12 ಅಡಿ ಎತ್ತರ 35 ಟನ್‌ ತೂಕ
ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 35 ಟನ್‌ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್‌ನ ಕೃಷ್ಣಶಿಲೆ ಬಳಸಲಾಗಿದೆ. . ಈ ಕಲ್ಲು ಮಳೆ, ಗಾಳಿ, ಬಿಸಿಲು ಹಾಗೂ ಕಠಿಣ ಹವಾಮಾನವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಪುತ್ಥಳಿಗೆ ಹೊಳಪು ಬರಲು ತೆಂಗಿನಕಾಯಿಯ ನೀರಿನಿಂದ ಪಾಲಿಶ್‌ ಮಾಡಲಾಗಿದೆ.

ಮೈಸೂರಿನಿಂದ ಪುತ್ಥಳಿ ಸಾಗಿದ ಹಾದಿ
ಮೈಸೂರಿನಲ್ಲಿ 9 ತಿಂಗಳ ಶ್ರಮದ ಬಳಿಕ ಪುತ್ಥಳಿಯನ್ನು ಕೆತ್ತಲಾಗಿತ್ತು. ಬಳಿಕ ಮೈಸೂರಿನಿಂದ ಚಮೋಲಿ ಏರ್‌ಬೇಸ್‌ವರೆಗೆ ರಸ್ತೆಯ ಮೂಲಕ ಸಾಗಿಸಲಾಯಿತು. ಅಲ್ಲಿಂದ ಕೇದಾರನಾಥದಲ್ಲಿರುವ ಸಮಾಧಿ ಸ್ಥಳಕ್ಕೆ ಭಾರತೀಯ ವಾಯುಪಡೆ ವಿಮಾನದ ಮೂಲಕ ಸಾಗಿಸಲಾಗಿದೆ.

Follow Us:
Download App:
  • android
  • ios