ದೆಹಲಿ ಆತ್ಮಾಹುತಿ ದಾಳಿಯ ಉಗ್ರರ ಆಶ್ರಯತಾಣವಾಗಿದ್ದ ಅಲ್ ಫಲಾ ವಿವಿಯ ಸುಮಾರು 140 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ನವದೆಹಲಿ: ದೆಹಲಿ ಆತ್ಮಾಹುತಿ ದಾಳಿಯ ಉಗ್ರರ ಆಶ್ರಯತಾಣವಾಗಿದ್ದ ಅಲ್ ಫಲಾ ವಿವಿಯ ಸುಮಾರು 140 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜೊತೆಗೆ, ಅಲ್ ಫಲಾ ಗ್ರೂಪ್ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಮತ್ತು ಟ್ರಸ್ಟ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ, ಫರೀದಾಬಾದ್‌ನ ಧೌಜ್‌ನಲ್ಲಿನ ವಿವಿಗೆ ಸೇರಿದ 55 ಎಕರೆ ಜಾಗ, ವಿವಿಯ ಕಟ್ಟಡಗಳು, ವಿವಿಧ ಶಾಲೆ ಹಾಗೂ ವಸತಿಗೃಹಗಳನ್ನು ಮುಟ್ಟುಗೋಲು ಹಾಕಲಾಗಿದೆ.
ವಿಶೇಷ ಪಿಎಂಎಲ್‌ಎ ಕೋರ್ಟ್‌ನಲ್ಲಿ ಆರೋಪಪಟ್ಟಿ
ವಿಶೇಷ ಪಿಎಂಎಲ್‌ಎ ಕೋರ್ಟ್‌ನಲ್ಲಿ ಸಿದ್ದಿಕಿ ಮತ್ತು ಅಲ್ ಫಲಾ ಟ್ರಸ್ಟ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಪಿಎಂಎಲ್‌ಎ ಅಡಿಯಲ್ಲಿ ಸಿದ್ದಿಕಿ ಮತ್ತು ಟ್ರಸ್ಟ್ ವಿರುದ್ಧ ಮೊಕದ್ದಮೆ ಹೂಡಲು ಇ.ಡಿ. ಕೋರ್ಟ್‌ಗೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.ಸುಮಾರು 415.10 ಕೋಟಿ ರು. ಆರ್ಥಿಕ ವಂಚನೆ ಎಸಗಿದ ಆರೋಪದಲ್ಲಿ ಸಿದ್ದಿಕಿಯನ್ನು ಕಳೆದ ನವೆಂಬರ್‌ನಲ್ಲೇ ಇ.ಡಿ. ಬಂಧಿಸಿತ್ತು. ನ.10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ ಶಾಮೀಲಾಗಿದ್ದ ಅನೇಕ ವೈದ್ಯರು ಇದೇ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು.


