ನವದೆಹಲಿ (ಡಿ.04) : ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಎಚ್‌ಸಿಎಲ್‌ ಟೆಕ್ನಾಲಜಿ ಮುಖ್ಯಸ್ಥೆ ರೋಷನಿ ನಾಡಾರ್‌ ಮಲ್ಹೋತ್ರಾ ಭಾರತದ ಅತಿ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೋಟಕ್‌ ವೆಲ್ತ್‌ ಮ್ಯಾನೇಜ್ಮೆಂಟ್‌ ಮತ್ತು ಹುರುನ್‌ ಇಂಡಿಯಾ ಪ್ರಸಕ್ತ ವರ್ಷದ 100 ಅತಿ ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ಪಟ್ಟಿಯಲ್ಲಿ ರೋಷನಿ ನಾಡಾರ್‌ 54,850 ಕೋಟಿ ರು. ಆಸ್ತಿಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಯೋಟೆಕ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ 36,600 ಕೋಟಿ ಆಸ್ತಿ ಮೂಲಕ 2ನೇ ಸ್ಥಾನ ಮತ್ತು ಯುಎಸ್‌ವಿ ಮುಖ್ಯಸ್ಥೆ ಲೀನಾ ಗಾಂಧಿ 21,340 ಕೋಟಿ ರು. ಆಸ್ತಿ ಗಳಿಕೆ ಮೂಲಕ 3ನೇ ರಾರ‍ಯಂಕ್‌ ಪಡೆದಿದ್ದಾರೆ.

ಮುಕೇಶ್‌ ಅಂಬಾನಿ ಆಸ್ತಿ ಒಂದೇ ವರ್ಷದಲ್ಲಿ 73% ವೃದ್ಧಿ ..

ಅಗ್ರ 100 ಶ್ರೀಮಂತ ಮಹಿಳೆಯರ ಪೈಕಿ 31 ಮಂದಿ ಸ್ವಂತ ಪರಿಶ್ರಮದಿಂದ ಆಸ್ತಿ ಸಂಪಾದಿಸಿದವರಾಗಿದ್ದಾರೆ. ಉದಾಹರಣೆಗೆ ಝುಹೋ ಕಾರ್ಪೊರೇಷನ್‌ನ ಮುಖ್ಯಸ್ಥೆ ರಾಧಾ ವಂಬು ತಮ್ಮ ಸ್ವಂತ ಪರಿಶ್ರಮದಿಂದ 11,590 ಕೋಟಿ ರು. ಸಂಪತ್ತಿನ ಒಡತಿಯಾಗಿದ್ದಾರೆ. ಇನ್ನು 38 ಮಹಿಳೆಯರ ಬಳಿ 1000 ಕೋಟಿಗೂ ಅಧಿಕ ಆಸ್ತಿ ಇದೆ. ಪಟ್ಟಿಯಲ್ಲಿರುವ ಶ್ರೀಮಂತ ಮಹಿಳೆಯರ ಒಟ್ಟು ಆಸ್ತಿ ಮೌಲ್ಯ 2.72 ಲಕ್ಷ ಕೋಟಿ ರು.ಗಳಾಗಿವೆ ಎಂದು ವರದಿ ತಿಳಿಸಿದೆ.