ಹಾಥ್ರಸ್ ದುರಂತ: ಅನುಮತಿ 80 ಸಾವಿರ ಜನಕ್ಕೆ ಸೇರಿದ್ದು 2.5 ಲಕ್ಷ ಜನ: ದುರಂತದ ನಂತರ ಭೋಲೆಬಾಬಾ ನಾಪತ್ತೆ

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಭೋಲೆ ಬಾಬಾ ಅಲಿಯಾಸ್‌ ಸಾಕಾರ ವಿಶ್ವ ಹರಿ ನಾಪತ್ತೆ ಆಗಿದ್ದಾರೆ. ಅಲ್ಲದೆ, ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಬದಲಾಗಿ, ಕಾರ್ಯಕ್ರಮ ಆಯೋಜಿಸಿದ್ದ ಅವರ ಭಕ್ತರ ಮೇಲೆ ಪ್ರಕರಣ ದಾಖಲಾಗಿದೆ.

Hathras Satsang was permitted to 80 thousand people but attended 2.5 lakh people:  Bhole Baba absconding after the tragedy akb

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಭೋಲೆ ಬಾಬಾ ಅಲಿಯಾಸ್‌ ಸಾಕಾರ ವಿಶ್ವ ಹರಿ ನಾಪತ್ತೆ ಆಗಿದ್ದಾರೆ. ಅಲ್ಲದೆ, ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಬದಲಾಗಿ, ಕಾರ್ಯಕ್ರಮ ಆಯೋಜಿಸಿದ್ದ ಅವರ ಭಕ್ತರ ಮೇಲೆ ಪ್ರಕರಣ ದಾಖಲಾಗಿದೆ.

80 ಸಾವಿರ ಜನರನ್ನು ಸೇರಿಸಲು ಅನುಮತಿ ಪಡೆದು ಎರಡೂವರೆ ಲಕ್ಷ ಜನರನ್ನು ಸೇರಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದರಿಂದಲೇ ಕಾಲ್ತುಳಿತ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಎಫ್‌ಐಆರ್ ಜಿಲ್ಲಾಡಳಿತಕ್ಕೆ ಕ್ಲೀನ್‌ಚಿಟ್‌ ನೀಡಿದ್ದು, ಸಾಧ್ಯವಿರುವ ಸಂಪನ್ಮೂಲಗಳಲ್ಲಿ ಅವರು ಎಲ್ಲವನ್ನೂ ಮಾಡಿದ್ದಾರೆ ಎಂದು ಹೇಳಿದ್ದಾರೆ.  ಅನುಮತಿ ಕೋರುವಾಗಿ ಸತ್ಸಂಗಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಸಂಘಟಕರು ಮರೆಮಾಚಿದರು. ಸಂಚಾರ ನಿರ್ವಹಣೆಗೆ ಸಹಕರಿಸಲಿಲ್ಲ,  ಮತ್ತು ಕಾಲ್ತುಳಿತದ ನಂತರ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಚಪ್ಪಲಿಗಳನ್ನು ಬೇರೆಡೆ ಎಸೆಯಲಾಯ್ತು. 

ಹಾಥ್ರಸ್ ಕಾಲ್ತುಳಿತ ದುರಂತ: ಹಸುಗೂಸಿನ ಮೃತದೇಹ ಕಂಡು ಶವಾಗಾರ ಸಿಬ್ಬಂದಿಯೇ ಕಣ್ಣೀರು

ಅಲ್ಲಿ ಸೇರಿದ ಜನರು ಬಾಬಾ ಸಾಗಿ ಹೋದ ಸ್ಥಳದ ಪಾದದ ಧೂಳನ್ನು ಸಂಗ್ರಹಿಸಲು ಮುಂದಾದಾಗ ಅವರನ್ನು ತಳ್ಳಲು ಭದ್ರತಾ ಸಿಬ್ಬಂದಿ ಯತ್ನಿಸಿದರು. ಇಳಿಜಾರಲ್ಲಿ ಘಟನೆ ನಡೆದಿದ್ದು, ಆಗ ನೂಕುನುಗ್ಗಲು ಉಂಟಾಯ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. 

ಕಾರ್ಯಕ್ರಮ ಆಯೋಜಿಸಿದ್ದ 'ಮುಖ್ಯ ಸೇವಾದಾರ' ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರನ್ನು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ. ಇವರ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 (ಆಪರಾಧಿಕ ನರಹತ್ಯೆ), 110 (ಆಪರಾಧಿಕ ನರಹತ್ಯೆಗೆ ಯತ್ನ), 238 (ಸಾಕ್ಷ್ಯ ನಾಶ) ಕೇಸು ದಾಖಲಿಸಲಾಗಿದೆ. ಈ ನಡುವೆ, ಬಾಬಾ ಅವರ ಮೈನ್‌ಪುರಿ ಸಮೀಪದ ಬಿಚ್ವಾನ್‌ ಗ್ರಾಮದ ಆಶ್ರಮದ ಸುತ್ತ ಪೊಲೀಸ್‌ ಭದ್ರತೆ ಹಾಕಲಾಗಿದೆ. ಬಾಬಾ ಆಶ್ರಮದಲ್ಲೇ ಇದ್ದಾರೆ ಎಂದು ಕೆಲವು ಪೊಲೀಸರು ಹೇಳಿದ್ದರೆ, ಕೆಲವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಕಾಲ್ತುಳಿತ ಸಮಾಜಘಾತಕ ಶಕ್ತಿಗಳ ಕೃತ್ಯ: ಭೋಲೆಬಾಬಾ

121 ಭಕ್ತರ ಬಲಿಪಡೆದ ಭೀಕರ ಕಾಲ್ತುಳಿತ ಘಟನೆಯ ಹೊಣೆ ಹೊರಲು ನಿರಾಕರಿಸಿರುವ ವಿವಾದಾತ್ಮಕ ಧರ್ಮಗುರು ಭೋಲೆ ಬಾಬಾ, ಇದು ನಾನು ಸತ್ಸಂಗ ಮುಗಿಸಿ ತೆರಳಿದ ನಂತರ ಸಂಭವಿಸಿದ ಘಟನೆ. ಸಮಾಜಘಾತಕ ಶಕ್ತಿಗಳ ಕೃತ್ಯ ಇದಾಗಿದ್ದು, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ ಎಂದು ಘೋಷಿಸಿದ್ದಾನೆ. ಅಲ್ಲದೆ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವುದಾಗಿಯೂ ಆತ ಹೇಳಿದ್ದಾನೆ. ಆದರೆ ಈ ಭೋಲೆ ಬಾಬಾ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಬದಲಾಗಿ ಅವರ ಭಕ್ತನಾದ ಕಾರ್ಯಕ್ರಮ ಸಂಘಟಕ, ಸೇವಾದಾರ ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರ ಮೇಲೆ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಬಾಬಾ, ಆಶ್ರಮದಲ್ಲಿದ್ದಾನೋ ಅಥವಾ ಪರಾರಿ ಆಗಿದ್ದಾನೋ ಯಾವುದೇ ಮಾಹಿತಿ ಇಲ್ಲ.

ಹಾಥ್ರಸ್‌ ಕಾಲ್ತುಳಿತ: ಸೂಕ್ತ ತನಿಖೆಗೆ ತಜ್ಞರ ಸಮಿತಿ ರಚನೆಗೆ ಸುಪ್ರೀಂಗೆ ಅರ್ಜಿ

ಉತ್ತರಪ್ರದೇಶದ ಹಾಥ್ರಸ್‌ ಭೀಕರ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಐದು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಬುಧವಾರ ಮನವಿ ಸಲ್ಲಿಸಲಾಗಿದೆ. ವಕೀಲ ವಿಶಾಲ್ ತಿವಾರಿ ಅವರು ಮನವಿ ಸಲ್ಲಿಸಿದ್ದಾರೆ. ಘಟನೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಮತ್ತು ಅಧಿಕಾರಿಗಳು ಮತ್ತು ಇತರರ ನಿರ್ಲಕ್ಷ್ಯದ ನಡವಳಿಕೆಗಾಗಿ ಕಾನೂನು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಕಾಲ್ತುಳಿತದಿಂದ ನರಳುತ್ತಿರುವ ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೌಲ್ಯಭ್ಯಗಳ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ಹಾಥ್ರಸ್ ಕಾಲ್ತುಳಿತ: ಎಲ್ಲೆಂದರಲ್ಲಿ ಹೆಣಗಳು.. ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ

Latest Videos
Follow Us:
Download App:
  • android
  • ios