Asianet Suvarna News Asianet Suvarna News

ಮುದ್ದಿನ ಶ್ವಾನ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ!

ಮೆಚ್ಚಿನ ನಾಯಿ ಮಾರಿ ಸಾವನ್ನಪ್ಪಿದ್ದಕ್ಕೆ ನೊಂದ 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ.

Haryana twelve year-old girl dies by herself after losing pet dog gow
Author
First Published Apr 29, 2024, 11:15 AM IST

ಚಂಡೀಗಢ (ಏ.29): ಮನೆಯಲ್ಲಿ ಸಾಕಿದ ನಾಯಿ, ಬೆಕ್ಕಿನ ಮರಿಗಳೊಂದಿಗೆ ಮನೆಯಲ್ಲಿನ ಮಕ್ಕಳು ಅತೀವ ಪ್ರೀತಿ ಬೆಳೆಸಿಕೊಂಡಿರುತ್ತಾರೆ. ಅವುಗಳು ಕಾಣದೇ ಹೋದಾಗ ದುಃಖ ಪಡುವುದು ಕೂಡಾ ಸಾಮಾನ್ಯ. ಆದರೆ ಮೆಚ್ಚಿನ ನಾಯಿ ಮಾರಿ ಸಾವನ್ನಪ್ಪಿದ್ದಕ್ಕೆ ನೊಂದ 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ. 3 ತಿಂಗಳ ಹಿಂದಷ್ಟೇ ಸ್ಥಳೀಯ ಕುಟುಂಬವೊಂದು ಪುಟ್ಟ ನಾಯಿಮರಿಯನ್ನು ಮನೆಗೆ ತಂದು ಸಾಕಿತ್ತು. ಅದರ ಜೊತೆಗೆ 12 ವರ್ಷದ ಬಾಲಕಿ ಅತೀವ ಪ್ರೀತಿ ಬೆಳೆಸಿಕೊಂಡಿದ್ದರು. ಆದರೆ 5 ದಿನದ ಹಿಂದೆ ದಿಢೀರನೆ ನಾಯಿ ಮರಿ ಸಾವನ್ನಪ್ಪಿದೆ. ಇದರಿಂದ ತೀವ್ರ ನೊಂದಿದ್ದ ಬಾಲಕಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಊಟ ತಿಂಡಿ ಮಾಡುವುದನ್ನು ಕೂಡಾ ಬಿಟ್ಟಿದ್ದಳು. ಈ ನಡುವೆ ಶನಿವಾರ ಸಂಜೆ ಬಾಲಕಿಯ ತಾಯಿ ಮತ್ತು ಕಿರಿಯ ಸೋದರಿ ಸಮೀಪದ ಅಂಗಡಿಗೆ ಹೋಗಿದ್ದ ವೇಳೆ 12 ವರ್ಷದ ಬಾಲಕಿ ತನ್ನ ನೆಚ್ಚಿನ ನಾಯಿ ಮರಿಯ ನೋವನ್ನು ತಡೆಯಲಾಗದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

23 ತಳಿಗಳ ನಾಯಿ ಸಾಕಣೆ ನಿಷೇಧ ಹೈಕೋರ್ಟ್‌ನಲ್ಲಿ ರದ್ದು

ಗಮನ ಸೆಳೆದ ಶ್ವಾನಗಳ ಪ್ರದರ್ಶನ
ಮೈಸೂರು: ನಗರದ ಹಾರ್ಡ್ವಿಕ್ ಶಾಲೆ ಮೈದಾನದಲ್ಲಿ ಮೈಸೂರು ರಾಯಲ್ ಕೆನೈನ್ ಕ್ಲಬ್ ಭಾನುವಾರ ಆಯೋಜಿಸಿದ್ದ ಶ್ವಾನಗಳ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯಿತು.

ಶ್ವಾನಗಳನ್ನು ಪ್ರದರ್ಶಿಸಲು ಹಾಗೂ ವೀಕ್ಷಿಸಲು ಜನರು ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು. ಮಕ್ಕಳು ಶ್ವಾನಗಳೊಂದಿಗೆ ತುಂಟಾಟ ಆಡುತ್ತಾ ಸೆಲ್ಫಿ, ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶ್ವಾನ ಪ್ರದರ್ಶನದಲ್ಲಿ ಮುದೋಳ್, ಲ್ಯಾಬ್ರೆಡಾರ್, ಗೋಲ್ಡನ್ ರಿಟ್ರೀವರ್, ಡಾಬರ್ ಮ್ಯಾನ್, ಪಗ್ ಸೇರಿದಂತೆ 20 ಹೆಚ್ಚು ತಳಿಗಳ 100 ಹೆಚ್ಚಿನ ಶ್ವಾನಗಳು ನೋಡುಗರನ್ನು ಆಕರ್ಷಿಸಿದವು.

ನಾಯಿಯನ್ನು ಥಳಿಸಿದ ಮಹಿಳೆ: ವಿಡಿಯೋ ಶೇರ್​ ಮಾಡಿದ ನಟಿ ಆಲಿಯಾ ಭಟ್​ ಹೇಳಿದ್ದೇನು?

ನಗರದ ವಿವಿಧ ಬಡಾವಣೆಗಳಲ್ಲದೆ, ಹೈದರಾಬಾದ್, ಬೆಂಗಳೂರು, ಮಂಡ್ಯ, ಹಾಸನ ಸೇರಿದಂತೆ ವಿವಿಧೆಡೆಗಳಿಂದ ಕರೆ ತಂದಿದ್ದ ಶ್ವಾನಗಳು ಪ್ರದರ್ಶನದಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುವ ಮೂಲಕ ಸೈ ಎನಿಸಿಕೊಂಡವು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಶ್ವಾನಗಳು ಬಿಸಿಲಿನ ತಾಪಕ್ಕೆ ಬಸವಳಿದವು. ಅವುಗಳ ದೇಹ ತಂಪು ಮಾಡುವ ಸಲುವಾಗಿ ಐಸ್ ಹಾಗೂ ತಂಪಾದ ನೀರನ್ನು ನೀಡಲಾಯಿತು. ಅಲ್ಲದೆ, ಕೆಲವು ಶ್ವಾನ ಮಾಲೀಕರು ತಮ್ಮ ಪ್ರಿಯವಾದ ಶ್ವಾನವನ್ನು ಎಸಿ ಕಾರಿನಲ್ಲೇ ಕೂರಿಸಿದ್ದರು. ಕೆಲವರು ಮೈಗೆ ನೀರನ್ನು ಸಿಂಪಡಿಸಿದರೆ, ಮತ್ತೆ ಕೆಲವರು ಐಸ್ ಬಟ್ಟೆಯಲ್ಲಿ ಸುತ್ತಿ ಶ್ವಾನಗಳ ಮೈಗೆ ಸವರುತ್ತಿದ್ದರು. ಆಯೋಜಕರು ಕೂಡ ಶ್ವಾನಗಳಿಗಾಗಿ ಏರ್ ಕೂಲರ್ ವ್ಯವಸ್ಥೆ ಕಲ್ಪಿಸಿದ್ದರು.

Latest Videos
Follow Us:
Download App:
  • android
  • ios