ಕೋಲ್ಕತ್ತಾ(ಡಿ.25): ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಆರ್ಭಟ ಜೋರಾಗಿದ್ದು, ಬೀದಿಗಳಲ್ಲಿ ನಡೆಯುತ್ತಿದ್ದ ಹೋರಾಟ ಇದೀಗ ವಿಶ್ವವಿದ್ಯಾಲಯ, ಕಾಲೇಜುಗಳಿಗೆ ತಲುಪಿದೆ.

ನಿನ್ನೆಯಷ್ಟೇ CAA ವಿರೋಧಿಸಿ ಪುದುಚೇರಿ ವಿವಿಯಲ್ಲಿ ವಿದ್ಯಾರ್ಥಿನಿಯೋರ್ವಳು ತನ್ನ ಚಿನ್ನದ ಪದಕ ತಿರಸ್ಕರಿಸಿದ ಬೆನ್ನಲ್ಲೇ, ಇಂದು ಪ.ಬಂಗಾಳದ ಜಾಧವಪುರ್ ವಿವಿಯಲ್ಲಿ ವಿದ್ಯಾರ್ಥಿನಿಯೋರ್ವಳು CAA ಪ್ರತಿಯನ್ನು ವೇದಿಕೆ ಮೇಲೆಯೇ ಹರಿದು ಹಾಕಿದ ಘಟನೆ ನಡೆದಿದೆ.

ಪೌರತ್ವ ಕಾಯ್ದೆಗೆ ವಿರೋಧ: SP ಮುಂದೆಯೇ ನಾಲಿಗೆ ಹರಿಬಿಟ್ಟ ಪ್ರತಿಭಟನಾಕಾರರು

ಜಾಧವಪುರ್ ವಿವಿಯ ದೇಬೋಸ್ಮಿತಾ ಚೌಧರಿ ಎಂಬ ವಿದ್ಯಾರ್ಥಿನಿ ತನ್ನ ಎಂಎ ಪ್ರಶಸ್ತಿ ಸ್ವೀಕರಿಸಿದ ಮರುಕ್ಷಣವೇ CAA ಪ್ರತಿ ಹರಿದು ಹಾಕಿ 'ಇಂಕ್ವಿಲಾಬ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಾಳೆ.

ದೇಬೋಸ್ಮಿತಾ CAA ಪ್ರತಿ ಹರಿದು ಹಾಕಿದಾಗ ವೇದಿಕೆ ಮೇಲೆ ಕುಲಪತಿ, ರೆಜಿಸ್ಟ್ರಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯ ಘೋಷಣೆಗಳಿಂದ ದಂಗಾದರು.

ಮಂಗಳೂರು ಗಲಭೆ ಸಂಚು ಬಯಲು: ಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಮಾತು

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದೇಬೋಸ್ಮಿತಾ, ತಾನು CAA ವಿರೋಧಿಯಾಗಿದ್ದು, ಜಾಧವಪುರ್ ವಿವಿ ನೀಡಿದ ಪ್ರಶಸ್ತಿ ಪತ್ರವನ್ನು ಗೌರವಿಸುವುದಾಗಿ ಹೇಳಿದ್ದಾರೆ.

ಡಿಸೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ