BPL ಕಾರ್ಡಿನ ಕೊರೋನಾ ರೋಗಿಗಳಿಗೆ ದಿನಕ್ಕೆ 5 ಸಾವಿರ ನೆರವು
ಕೊರೋನಾ ರೋಗಿಗಳಿಗೆ ನೆರವು | ಬಿಪಿಎಲ್ ಕಾರ್ಡ್‌ದಾರರಿಗೆ ದಿನಕ್ಕೆ 5 ಸಾವಿರ ನೆರವು
ಚಂಡೀಗಡ(ಮೇ.06): ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಬಿಪಿಎಲ್ ವರ್ಗಕ್ಕೆ ಸೇರಿದ ಪ್ರತಿ ರೋಗಿಗೆ ಗರಿಷ್ಠ ಏಳು ದಿನಗಳು ರಾಜ್ಯ ಸರ್ಕಾರವು ದಿನಕ್ಕೆ 5,000 ರೂ. (ಆಮ್ಲಜನಕ ಅಥವಾ ಐಸಿಯು ಬೆಂಬಲದಲ್ಲಿದ್ದವರಿಗೆ) ನೆರವು ನೀಡಲಾಗುತ್ತದೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಕೊರೋನಾ ಸಮಯದಲ್ಲಿ ಆರ್ಥಿಕ ಸಮಸ್ಯೆಗಳಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳದಂತೆ ಬಿಪಿಎಲ್ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
99ರ ಅಜ್ಜಿಗೆ 30 ವರ್ಷದ ಗೆಳೆಯ: ಇದು ಕೊರೋನಾ ಕಾಲದ ಸ್ನೇಹ
ಖಾಸಗಿ ಆಸ್ಪತ್ರೆಗಳಿಗೆ ದಿನಕ್ಕೆ ಪ್ರತಿ ರೋಗಿಗೆ 1,000 ರೂ. ಅಥವಾ ಹರಿಯಾಣಕ್ಕೆ ಸೇರಿದ ಕೋವಿಡ್ ರೋಗಿಗಳಿಗೆ ಪ್ರವೇಶ ಆದ್ಯತೆ ನೀಡಲು ಗರಿಷ್ಠ 7,000 ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಹೋಂ ಐಸೊಲೇಷನ್‌ನಲ್ಲಿರುವ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿಯೊಬ್ಬರಿಗೆ 5 ಸಾವಿರ ನೆರವು ಘೋಷಿಸಲಾಗಿದೆ. ಔಷಧ, ಆಕ್ಸಿಮೀಟರ್‌ಗಳಂತಹ ವಸ್ತುಗಳ ಖರೀದಿಗೆ ಈ ರೀತಿ ಮಾಡಲಾಗಿದೆ.