ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ ಮಹತ್ವದ ನಿರ್ಧಾರ ಪ್ರಕಟಿಸಿದ ಹರ್ಯಾಣ ಸರ್ಕಾರ!
ವಿನೇಶ್ ಫೋಗಟ್ ತೂಕ ಹೆಚ್ಚಳ ಕಾರಣ ಫೈನಲ್ ಸುತ್ತಿನಲ್ಲಿ ಅನರ್ಹಗೊಂಡ ಘಟನೆ ಭಾರತೀಯರಿಗೆ ತೀವ್ರ ನೋವುಂಟು ಮಾಡಿದೆ. ಇದರ ಬೆನ್ನಲ್ಲೇ ವಿನೇಶ್ ಫೋಗಟ್ ವಿದಾಯ ಆಘಾತ ತರಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ.
ಹರ್ಯಾಣ(ಆ.8) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಫೈನಲ್ ಸುತ್ತು ತಲುಪುತ್ತಿದ್ದಂತೆ ಭಾರತದಲ್ಲಿ ರಾಜಕೀಯ ಕೆಸೆರೆರಚಾಟ ಜೋರಾಗಿತ್ತು. ವಿನೇಶ್ ಫೋಗಟ್ ನಡೆಸಿದ ಪ್ರತಿಭಟನೆ, ಆಕೆಯಯನ್ನು ನಡೆಸಿಕೊಂಡ ರೀತಿ ಕುರಿತು ಪರ ವಿರೋಧಗಳು ಆರಂಭಗೊಂಡಿತ್ತು. ಇದರ ನಡುವೆ ವಿನೇಶ್ ಫೋಗತ್ ಅನರ್ಹತೆ ಎಲ್ಲರಿಗೂ ಆಘಾತ ತಂದಿತ್ತು. ಚಿನ್ನದ ಪದಕದ ಭರವಸೆ ಮೂಡಿಸಿದ್ದ ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಹರ್ಯಾಣ ಬಿಜೆಪಿ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ವಿನೇಶ್ ಫೋಗಟ್ ಅವರನ್ನು ಪದಕ ಗೆದ್ದ ಕ್ರೀಡಾಪಟುವಂತೆ ಸ್ವಾಗತಿಸಲಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ನಯಬ್ ಸೈನಿ ಘೋಷಿಸಿದ್ದಾರೆ. ಇಷ್ಟೇ ಅಲ್ಲ ಪದಕ ಗೆದ್ದ ಕ್ರೀಡಾಪಟುವಿಗೆ ನೀಡುವ ಎಲ್ಲಾ ಬಹುಮಾನ, ಸೌಲಭ್ಯವನ್ನು ನೀಡಲಾಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿ ನಯಬ್ ಸೈನಿ ಮಹತ್ವದ ಘೋಷಣೆ ಹೊಸ ಸಂಚಲನ ಸೃಷ್ಟಿಸಿದೆ. ಬೆಳ್ಳಿ ಬದಕ ಗೆದ್ದ ಕ್ರೀಡಾಪಟುವಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ವಿನೇಶ್ ಫೋಗಟ್‌ಗೆ ನೀಡಲಾಗುತ್ತದೆ. ಫೋಗಟ್ ಅವರನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಅಮ್ಮಾ ಕ್ಷಮಿಸಿ ನಾನು ಸೋತೆ, ಕುಸ್ತಿಗೆ ವಿದಾಯ ಘೋಷಿಸಿ ಭಾವುಕರಾದ ವಿನೇಶ್ ಫೋಗಟ್!
ನಮ್ಮ ಹೆಮ್ಮೆಯ ಪುತ್ರಿ ವಿನೇಶ್ ಫೋಗತ್ ಅದ್ಭುತ ಹಾಗೂ ಕೆಚ್ಚೆದೆಯ ಹೋರಾಟದಿಂದ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಸುತ್ತು ಪ್ರವೇಶಿಸಿದ್ದರು. ಆಧರೆ ಕೆಲ ಕಾರಣಗಳಿಂದ ಫೈನಲ್ ಸುತ್ತಿನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವಿನೇಶ್ ಫೋಗಟ್‌ಗೆ ಫೈನಲ್ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರಬಹುದು, ಆದರೆ ವಿನೇಶ್ ಫೋಗಟ್ ನಮ್ಮೆಲ್ಲರಿಗೂ ಚಾಂಪಿಯನ್. ವಿನೇಶ್ ಫೋಗಟ್ ಅವರನ್ನು ಇತರ ಪದಕ ಗೆದ್ದ ಕ್ರೀಡಾಪಟುಗಳಂತೆ ಗೌರವಿಸಲಾಗುತ್ತದೆ. ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ನೀಡುವ ಸೌಲಭ್ಯ, ಸಮ್ಮಾನಗಳನ್ನು ವಿನೇಶ್ ಫೋಗಟ್‌ಗೆ ನೀಡಲಾಗುತ್ತದೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ನಯಬ್ ಸೈನಿ ಟ್ವೀಟ್ ಮಾಡಿದ್ದಾರೆ.
ವಿನೇಶ್ ಫೋಗಟ್ ವಿದಾಯ ಘೋಷಿಸಿದ ಬೆನ್ನಲ್ಲೇ ಹರ್ಯಾಣ ಮುಖ್ಯಮಂತ್ರಿ ನಯಬ್ ಸೈನಿ ಈ ಘೋಷಣೆ ಮಾಡಿದ್ದಾರೆ. ವಿನೇಶ್ ಫೋಗಟ್ ಹೋರಾಟಕ್ಕೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿನೇಶ್ ಫೋಗಟ್ ಪರ ಬೆಂಬಲ ವ್ಯಕ್ತವಾಗುತ್ತಿದೆ. ಇದರ ನಡುವೆ ಖುದ್ದು ವಿನೇಶ್ ಫೋಗತ್ ಕ್ರೀಡಾ ಮಧ್ಯಸ್ಥಿತಿಕೆ ನ್ಯಾಯಾಲಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ. ಬೆಳ್ಳಿ ಪದಕ ಹಂಚುವಂತೆ ವಿನೇಶ್ ಮನವಿ ಮಾಡಿದ್ದಾರೆ. ಈ ಕುರಿತು ತೀರ್ಪು ಇಂದು(ಆ.08) ಪ್ರಕಟಗೊಳ್ಳಲಿದೆ.
50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಫೋಗತ್ ಈ ಬಾರಿ ಸ್ಪರ್ಧಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ಫೋಗತ್ ತೂಕ 50.1 ಕೆಜಿಗೆ ಏರಿಕೆಯಾಗಿತ್ತು. 100 ಗ್ರಾಂ ಹೆಚ್ಚಳದ ಕಾರಣ ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ.
ವಿನೇಶ್ ಫೋಗಟ್‌ಗಿದೆ ಒಲಿಂಪಿಕ್ ಪದಕ ಗೆಲ್ಲಲು ಲಾಸ್ಟ್ ಚಾನ್ಸ್..! ಆದ್ರೆ ಪವಾಡ ನಡಿಬೇಕು..!