Asianet Suvarna News Asianet Suvarna News

ಅಮ್ಮಾ ಕ್ಷಮಿಸಿ ನಾನು ಸೋತೆ, ಕುಸ್ತಿಗೆ ವಿದಾಯ ಘೋಷಿಸಿ ಭಾವುಕರಾದ ವಿನೇಶ್ ಫೋಗಟ್!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಸುತ್ತಿಗೂ ಮುನ್ನ 100 ಗ್ರಾಂ ತೂಕದ ಕಾರಣದಿಂದ ಅನರ್ಹಗೊಂಡ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಇದೀಗ ವಿದಾಯ ಘೋಷಿಸಿದ್ದಾರೆ. 
 

Goodbye to Wrestling vinesh phogat Announces retirement day after Paris Olympics disqualification ckm
Author
First Published Aug 8, 2024, 8:25 AM IST | Last Updated Aug 8, 2024, 8:27 AM IST

ನವದೆಹಲಿ(ಆ.08) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಕನಸು ಸಾಕಾರಗೊಳಿಸಲು ಮುನ್ನುಗ್ಗುತ್ತಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹ ಭಾರಿ ನಿರಾಸೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ 100 ಗ್ರಾಂ ತೂಕ ಹೆಚ್ಚಾದ ಕಾರಣ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರು. ಭಾರತದ ಮನವಿ, ಪ್ರತಿಭಟನೆಗಳಿಂದ ಒಲಿಂಪಿಕ್ಸ್ ಸಮಿತಿ ನಿರ್ಧಾರ ಬದಲಾಗಲಿಲ್ಲ. ಇತ್ತ ಅನರ್ಹದ ಬೆನ್ನಲ್ಲೇ ವಿನೇಶ್ ಫೋಗಟ್ ವಿದಾಯ ಘೋಷಿಸಿದ್ದಾರೆ. ವಿದಾಯ ಘೋಷಿಸುತ್ತಿದ್ದಂತೆ ವಿನೇಶ್ ಫೋಗಟ್ ಭಾವುಕರಾಗಿದ್ದಾರೆ. ಇದೇ ವೇಳೆ ತಾಯಿ ಬಳಿ ಕ್ಷಮೆ ಕೇಳಿದ್ದಾರೆ.

ವಿನೇಶ್ ಫೋಗಟ್ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.  ನನ್ನ ವಿರುದ್ಧದ ಕುಸ್ತಿಯಲ್ಲಿ ಅಮ್ಮ ಗೆದ್ದಿದ್ದಾಳೆ. ಕ್ಷಮಿಸಿ ಅಮ್ಮಾ ನಾನು ಸೋತೆ. ನಿನ್ನ ಕನಸು, ನನ್ನ ಧೈರ್ಯ ಎಲ್ಲವೂ ನುಚ್ಚು ನೂರಾಗಿದೆ. ನನ್ನಲ್ಲಿನ್ನು ಹೋರಾಡುವ ಶಕ್ತಿ ಉಳಿದಿಲ್ಲ. 2001-2024 ಕುಸ್ತಿಗೆ ವಿದಾಯ. ಎಲ್ಲರಲ್ಲೂ ಕ್ಷಮೇ ಕೇಳುತ್ತಾ, ನಿಮ್ಮೆಲ್ಲರಿಗೆಗೂ ಸದಾ ನಾನು ಋಣಿಯಾಗಿರುತ್ತೇನೆ  ಎಂದು ವಿನೇಶ್ ಫೋಗಟ್ ಟ್ವೀಟ್ ಮಾಡಿದ್ದಾರೆ.

ವಿಶ್ವಚಾಂಪಿಯನ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ವಿನೇಶ್ ಒಟ್ಟು ಆಸ್ತಿ ಎಷ್ಟಿದೆ?

ಭಾವುಕವಾಗಿ ವಿದಾಯ ಘೋಷಿಸಿದ್ದಾರೆ. ವಿನೇಶ್ ಫೋಗಟ್ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ವಿನೇಶ್ ಪರ ಅಭಿಯಾನಗಳು ಆರಂಭಗೊಂಡಿದೆ. ಇತ್ತ ಖುದ್ದು ವಿನೇಶ್ ಫೋಗಟ್ ಅಂತಾರಾಷ್ಟ್ರೀಯ ಕ್ರೀಡಾ ಮಧ್ಯಸ್ಥಿತಿಕೆ ನ್ಯಾಯಾಲಕ್ಕೆ ಮನವಿ ಮಾಡಿದ್ದಾರೆ. ಜಂಟಿಯಾಗಿ ಬೆಳ್ಳಿ ಬದಕ ನೀಡುವಂತೆ ಮನವಿ ಮಾಡಿದ್ದಾರೆ. ಇಂದು(ಆ.08) ಐಒಸಿ ವಿಚಾರಣೆ ನಡೆಸಿ ತೀರ್ಪು ನೀಡಲಿದೆ.

 

 

ವಿನೇಶ್ ಫೋಗಟ್ ಈ ಬಾರಿ 50 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 50 ಕೆಜಿಯ ಪ್ರಾಥಮಿಕ ಸುತ್ತಿನ ಪಂದ್ಯಗಳು ಆರಂಭಕ್ಕೂ ಮುನ್ನ ವಿನೇಶ್ ಫೋಗಟ್ 49.9 ಕೆಜಿ ತೂಕ ಹೊಂದಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆಸಿದ ತೂಕ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ 50.1 ಕೆಜಿ ತೂಕ ಹೊಂದಿದ್ದರು. 100 ಗ್ರಾಂ ತೂಕ ಹೆಚ್ಚಾದ ಕಾರಣ ವಿನೇಶ್ ಫೋಗಟ್ ಕುಸ್ತಿಯಿಂದ ಅನರ್ಹಗೊಂಡಿದ್ದಾರೆ.

ಆದರೆ ಫೈನಲ್ ಪಂದ್ಯದ ಹಿಂದಿನ ರಾತ್ರಿ ವಿನೇಶ್ ರಾತ್ರಿಯಿಡಿ ತೂಕ ಇಳಿಸಲು ಕಸರತ್ತು ನಡೆಸಿದ್ದಾರೆ. 2 ಕೆಜಿ ತೂಕ ಇಳಿಸಲು ಭಾರಿ ಕಸರತ್ತು ನಡೆಸಿದ್ದರು. ವಿನೇಶ್ ಫೋಗಟ್ 52 ಕೆಜಿಗೆ ತೂಕ ಹೆಚ್ಚಾಗಿತ್ತು. ಹೀಗಾಗಿ ಅಹಾರ, ನೀರು ಸೇವಿಸದೆ ದೇಹ ದಂಡಿಸಿದ್ದರು. ಬಿಸಿನೀರಿನಲ್ಲಿ ಕುಳಿತು ಇಡೀ ರಾತ್ರಿ ಕಳೆದಿದ್ದರು. ಈ ಕಸರತ್ತಿನ ಪರಿಣಾಮ 2 ಕೆಜಿ ತೂಕ ಇಳಿಕೆಯಾಗಿತ್ತು. ಆದರೆ 100 ಗ್ರಾಂ ತೂಕ ಹೆಚ್ಚಾಗಿದ್ದ ಕಾರಣ ಅನರ್ಹಗೊಂಡಿದ್ದಾರೆ.

ವಿನೇಶ್‌ ಪೋಗಟ್‌ ಮಾತ್ರವಲ್ಲ ಅನರ್ಹತೆ ಭೀತಿಯಲ್ಲಿದ್ರು ಅಂತಿಮ್‌ ಪಾಂಗಾಲ್‌, ತೂಕ ಇಳಿಸೋಕೆ ಮಾಡಿದ್ದರು 2 ದಿನ ಉಪವಾಸ!
 

Latest Videos
Follow Us:
Download App:
  • android
  • ios