* ಗುರ್ಮೀತ್ ರಾಮ್ ರಹೀಮ್ ಸಿಂಗ್ ಮೇಲೆ ಪ್ರಕರಣಗಳ ಸರಮಾಲೆ*  ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿಯೂ ದೋಷಿ* ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಗೆ ಗುರಿಯಾಗಿರುವ ದೇವ ಮಾನವ!

ನವದೆಹಲಿ(ಅ. 19) ರಂಜೀತ್ ಸಿಂಗ್ ಕೊಲೆ ಪ್ರಕರಣ ( Ranjit Singh Murder Case) ದಲ್ಲಿ ಡೇರಾ ಸಚ್ಚಾ ಸೌದಾ (Dera Sacha Sauda) ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ (Gurmeet Ram Rahim Singh) ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

4 ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯಕ್ಕೆ (CBI Special Court)ಪಡಿಸಲಾಗಿತ್ತು. ರಂಜಿತ್ ಸಿಂಗ್ ಹತ್ಯೆಯಲ್ಲಿ ರಾಮ್ ರಹೀಮ್ ಸೇರಿದಂತೆ 5 ಅಪರಾಧಿಗಳಿಗೆ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಮ್ ರಹೀಮ್ ಗೆ 31 ಲಕ್ಷ ದಂಡ ಮತ್ತು 4 ಇತರ ಅಪರಾಧಿಗಳಿಗೆ ತಲಾ 50 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

ರಹಸ್ಯವಾಗಿ ಪೆರೋಲ್ ಪಡೆದಿದ್ದ ಕಪಟಿ ಸ್ವಾಮಿ

ದೋಷಿ ರಾಮ್ ರಹೀಮ್ ಸಿಂಗ್ ಈ ಮೊದಲೇ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಜುಲೈ 10, 2002 ರಲ್ಲಿ ರಂಜಿತ್ ಸಿಂಗ್ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಸಾಬೀತಾಗಿದೆ. ಡಿಸೆಂಬರ್ 3, 2003ರಲ್ಲಿ CBI ಆತನ ವಿರುದ್ಧ FIR ದಾಖಲಿಸಿ ವಿಚಾರಣೆ ನಡೆಸಿತ್ತು. ರಾಮ್ ರಹೀಮ್ ಫಾಲೋವರ್ ಆಗಿದ್ದ ರಂಜಿತ್ ಡೇರಾ ಸಚ್ಚಾ ಸೌದಾದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ರಂಜಿತ್ ಅನಿಮಾನಾಸ್ಪದವಾಗಿ ಹತ್ಯೆಯಾಗಿದ್ದರು.

ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಈಗಾಗಲೇ ಶಿಕ್ಷೆಗೆ ಗುರಿಯಾಗಿದ್ದು ಜೈಲುವಾಸ ಅನುಭವಿಸುತ್ತಿದ್ದಾನೆ. ಈಗ ಮತ್ತೊಂದು ಪ್ರಕರಣದಲ್ಲಿಯೂ ಶೀಕ್ಷೆಯಾದಂತೆ ಆಗಿದೆ. ಆಶ್ರಮದ ಹೆಸರಿನಲ್ಲಿ ಬಾಲಕಿಯರು ಮತ್ತು ಆಶ್ರಮದಲ್ಲಿರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸುತ್ತಿದ್ದವನ ಮೇಲೆ ಸಿಬಿಐ ತನಿಖೆ ನಡೆದಿತ್ತು.

ರಂಜಿತ್ ಸಿಂಗ್ ಬರೆದ ಪತ್ರವನ್ನು ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಪ್ರಕಟಿಸಿದ್ದರು, ಈ ಪತ್ರ ಪ್ರಕಟಿಸಿದ ಪರಿಣಾಮ ಪತ್ರಕರ್ತನ ಹತ್ಯೆಯೂ ಆಗಿತ್ತು. ಆ ಪ್ರಕರಣದಲ್ಲಿಯೂ ಶಿಕ್ಷೆ ಪ್ರಕಟವಾಗಿದೆ.

ಸಿಬಿಐ ಚಾರ್ಜ್ ಶೀಟ್ ಪ್ರಕಾರ, ಗುರ್ಮಿತ್ ರಾಮ್ ರಹೀಮ್ ಸಿಂಗ್ ತನ್ನ ಶಿಷ್ಯ ರಂಜಿತ್ ಸಿಂಗ್ ಅನಾಮಧೇಯ ಪತ್ರದ ಮೂಲ ಎಂದು ಶಂಕಿಸಿದ್ದರು, ಡೇರಾ ಮುಖ್ಯಸ್ಥರು ಶಿಬಿರದೊಳಗೆ ಮಹಿಳಾ ಶಿಷ್ಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಪತ್ರವೇ ಅವರ ಕೊಲೆಗೆ ಕಾರಣವಾಗಿತ್ತು. ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶಿಕ್ಷೆಗೊಳಗಾದರು. ಈ ಸ್ವಯಂ ಘೋಷಿತ ದೇವ ಮಾನವ ಎಂದು ಘೋಷಿಸಿಕೊಂಡವನ ಮೇಲೆ ಪ್ರಕರಣಗಳ ಸರಮಾಲೆಯೇ ಇದೆ.