ಆನ್ಲೈನ್‌ ವಧು-ವರಾನ್ವೇಷಣೆ ವೇದಿಕೆಯಾಗಿರುವ ಭಾರತ್‌ ಮ್ಯಾಟ್ರಿಮೋನಿ ಹೋಳಿಹಬ್ಬದಂದು ಬಿಡುಗಡೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಆನ್ಲೈನ್‌ ವಧು-ವರಾನ್ವೇಷಣೆ ವೇದಿಕೆಯಾಗಿರುವ ಭಾರತ್‌ ಮ್ಯಾಟ್ರಿಮೋನಿ ಹೋಳಿಹಬ್ಬದಂದು ಬಿಡುಗಡೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಸಂಸ್ಥೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹೋಳಿ ಬಣ್ಣದಿಂದ ಆವರಿಸಿಕೊಂಡಿದ್ದ ತನ್ನ ಮುಖವನ್ನು ತೊಳೆದಾಗ ಮುಖದ ಮೇಲೆ ಗಾಯದ ಕಲೆಗಳು ಕಾಣಿಸುತ್ತವೆ. ಭಾರತದಲ್ಲಿ ಹಲವಾರು ಮಹಿಳೆಯರು ತಾವು ಅನುಭವಿಸುತ್ತಿರುವ ತೊಂದರೆಯಿಂದ ಹೋಳಿ ಆಡುವುದನ್ನು ಬಿಟ್ಟಿದ್ದಾರೆ. ಹಾಗಾಗಿ ಅವರನ್ನು ಪ್ರತಿದಿನ ರಕ್ಷಿಸಲು ಮುಂದಾಗಿ ಕೆಲವು ಬಣ್ಣಗಳು ಹೋಗುವುದಿಲ್ಲ ಎಂದಿಗೂ ಹೋಗುವುದಿಲ್ಲ ಎಂದು ಬರೆದಿತ್ತು. ಇದರ ಬೆನ್ನಲ್ಲೇ ಹಲವಾರು ನೆಟ್ಟಿಗರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಇದು ಹಿಂದೂಗಳ ಆಚರಣೆಯನ್ನು ಹತ್ತಿಕ್ಕುವ ಪ್ರಯತ್ನ, ಕೆಲ ಅಜೆಂಡಾಗಳನ್ನು ಹೇರಲು ಹಿಂದೂ ಆಚರಣೆಯನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Crime News: ಮ್ಯಾಟ್ರಿಮೋನಿ ಮೋಹಪಾಶಕ್ಕೆ ಮಾಸ್ಟರ್‌ ಆಗಿದ್ದ ಮಿಸ್ಟರ್‌ ಬಕ್ರಾ!

ಇದಕ್ಕೂ ಮೊದಲು ಆನ್‌ಲೈನ್‌ ಆಹಾರ ಪೂರೈಕೆ ಸಂಸ್ಥೆ ಸ್ವಿಗ್ಗಿ ಕೂಡ ಇದೇ ರೀತಿಯ ಕಾರಣಕ್ಕೆ ವಿವಾದಕ್ಕೀಡಾಗಿತ್ತು. ಹೋಳಿ ಸಂಭ್ರಮಕ್ಕೆ ಸಂಬಂಧಿಸಿದ ತನ್ನ ಹೋಲ್ಡಿಂಗ್ಸ್‌ ಒಂದರಲ್ಲಿ ಹೋಳಿ ವೇಳೆ ಮೊಟ್ಟೆಯನ್ನು ಮತ್ತೊಬ್ಬರ ಮೇಲೆ ಎಸೆದು ಹಾಳು ಮಾಡುವ ಬದಲು ಅದನ್ನು ಸೇವಿಸಿ ಎಂದು ಬರೆದಿತ್ತು. ಆದರೆ ಈ ಬಿಲ್‌ಬೋರ್ಡ್‌ಗೆ ವ್ಯಾಪಕ ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ನಂತರ ಸ್ವಿಗ್ಗಿ ಈ ಬಿಲ್‌ ಬೋರ್ಡ್ ಅನ್ನು ತೆಗೆಯಲು ನಿರ್ಧರಿಸಿತ್ತು. ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಈ ಬಿಲ್ಬೋರ್ಡ್‌ ಹಾಕಲಾಗಿತ್ತು. 

Ballari: ಮ್ಯಾಟ್ರಿಮೋನಿ ದುರ್ಬಳಕೆ ಮಾಡಿ ಶಿಕ್ಷಕನಿಗೆ ವಂಚನೆ: ಯುವತಿಯರ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ

Scroll to load tweet…

Scroll to load tweet…