Haridwar Hate Speech: ಧರ್ಮ ಸಂಸದ್‌ನಲ್ಲಿ ಕೊಟ್ಟ ಹೇಳಿಕೆಗಳು ಹಿಂದೂಗಳ ಮಾತಲ್ಲ: RSS ಮುಖ್ಯಸ್ಥ

* ಹರಿದ್ವಾರದಲ್ಲಿ ಪ್ರಚೋದನಕಾರಿ ಹೇಳಿಕೆಗಳು

* ಧರ್ಮ ಸಂಸದ್‌ನಲ್ಲಿ ಕೊಟ್ಟ ಹೇಳಿಕೆಗಳು ಹಿಂದೂಗಳ ಮಾತಲ್ಲ

* ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

Haridwar Speeches Not Hindu Words Not Hindutva RSS Chief Mohan Bhagwat pod

ನವದೆಹಲಿ(ಫೆ.07): ರಾಷ್ಟ್ರೀಯ ಸ್ವಯಂಸೇವಕ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ 'ಧರ್ಮ ಸಂಸದ್' ಎಂಬ ಕಾರ್ಯಕ್ರಮದಲ್ಲಿ ನೀಡಿದ ಕೆಲವು ಹೇಳಿಕೆಗಳ ಬಗ್ಗೆ ಕಿಡಿ ಕಾರಿದ್ದು, ಇದು "ಹಿಂದೂಗಳ ಮಾತುಗಳು" ಅಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವ ಜನರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದರು. ಲೋಕಮತದ ನಾಗ್ಪುರ ಆವೃತ್ತಿಯ ಸುವರ್ಣ ಮಹೋತ್ಸವದ ನಿಮಿತ್ತ ಲೋಕಮತ್ ಮೀಡಿಯಾ ಗ್ರೂಪ್ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ‘ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ’ ವಿಷಯದ ಕುರಿತು ಅವರು ಮಾತನಾಡಿದರು.

ನಾನು ಎಂದಾದರೂ ಕೋಪದಿಂದ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ, ಧರ್ಮ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತಲ್ಲ ಎಂದು ಭಾಗವತ್ ಹೇಳಿದ್ದಾರೆ. ವೀರ್ ಸಾವರ್ಕರ್ ಕೂಡ ಹಿಂದೂ ಸಮುದಾಯ ಒಗ್ಗಟ್ಟಾದರೆ ಭಗವದ್ಗೀತೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಯಾರನ್ನೂ ನಾಶಪಡಿಸುವ ಅಥವಾ ಹಾನಿ ಮಾಡುವ ಬಗ್ಗೆ ಅಲ್ಲ ಎಂದು ಹೇಳಿದ್ದರು ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ.

ದೇಶವು 'ಹಿಂದೂ ರಾಷ್ಟ್ರ'ವಾಗುವ ಹಾದಿಯನ್ನು ಅನುಸರಿಸುತ್ತಿರುವ ಬಗ್ಗೆ ಭಾಗವತ್, "ಇದು ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಬಗ್ಗೆ ಅಲ್ಲ. ನೀವು ನಂಬಿದರೂ ನಂಬದಿದ್ದರೂ ಇದು ಹಿಂದೂ ರಾಷ್ಟ್ರ. ನಾವು ಈ ಹಿಂದುತ್ವವನ್ನು ಅನುಸರಿಸುತ್ತೇವೆ ಎಂದರು.

Latest Videos
Follow Us:
Download App:
  • android
  • ios