* ಗುಜರಾತ್‌ ಚುನಾವಣೆಗೆ ಭರದ ಸಿದ್ಧತೆ* ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾದ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್* ಕೆಲ ಸಮಯದ ಹಿಂದಷ್ಟೇ ಕಾಂಗ್ರೆಸ್‌ಗೆ ಗುಡ್‌ಬೈ ಎಂದಿದ್ದ ಹಾರ್ದಿಕ್ ಪಟೇಲ್ 

ಅಹಮದಾಬಾದ್(ಜೂ.02): ಹಾರ್ದಿಕ್ ಪಟೇಲ್ ಇಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಅವರಿಗೆ ಬಿಜೆಪಿ ಸದಸ್ಯತ್ವ ದೊರಕಿಸಿಕೊಟ್ಟರು. ಪಾಟೀಲ್, ನಿತಿನ್ ಪಟೇಲ್ ಬಿಟ್ಟರೆ ಬೇರೆ ಯಾವ ಹಿರಿಯ ನಾಯಕರೂ ಈ ಸಂದರ್ಭದಲ್ಲಿ ಇರಲಿಲ್ಲ.

ಇನ್ನು ಹಾರ್ದಿಕ್ ಪಟೇಲ್ ಕಳೆದ ತಿಂಗಳು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು ಎಂಬುವುದು ಉಲ್ಲೇಖನೀಯ. ಅವರನ್ನು ಗುಜರಾತ್ ರಾಜ್ಯದ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ ಅವರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಮತ್ತು ಹಕ್ಕು ಇರಲಿಲ್ಲ ಎಂದು ಹಾರ್ದಿಕ್ ಆರೋಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಕಾರ್ಯ ವೈಖರಿ ಬಗ್ಗೆ ಹಲವು ಬಾರಿ ಪ್ರಶ್ನೆ ಎತ್ತಿದ್ದರು.

ಹಾರ್ದಿಕ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಮತ್ತು ಹಿರಿಯ ಬಿಜೆಪಿ ನಾಯಕ ನಿತಿನ್ ಪಟೇಲ್ ಅವರು ಪಕ್ಷದ ಸದಸ್ಯತ್ವ ನೀಡಿದರು. ಈ ಸಂದರ್ಭದಲ್ಲಿ ಬೇರೆ ಯಾವುದೇ ಹಿರಿಯ ನಾಯಕರು, ಕೇಂದ್ರ ಮಟ್ಟದ ನಾಯಕರು ಇರಲಿಲ್ಲ. ಗುಜರಾತ್ ನ ಸಿಎಂ ಭೂಪೇಂದ್ರ ಪಟೇಲ್ ಕೂಡ ಇರಲಿಲ್ಲ. ಬಿಜೆಪಿ ಸೇರುವ ಮುನ್ನ ಹಾರ್ದಿಕ್ ಪಟೇಲ್ ಇಂದು ದುರ್ಗಾ ಪೂಜೆ ನೆರವೇರಿಸಿದರು. ಅವರೂ ಗೋವಿನ ಪೂಜೆ ಮಾಡಲು ಹೋಗಿದ್ದರು. ಅಲ್ಲದೇ ಸ್ವಾಮಿನಾರಾಯಣ ಗುರು ಮಂದಿರದಲ್ಲಿ ಪೂಜೆ ಸಲ್ಲಿಸಿದರು.

ಹಾರ್ದಿಕ್ ಪಟೇಲ್ ಅವರನ್ನು ಬಿಜೆಪಿಗೆ ಸ್ವಾಗತಿಸಲು ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯ ಹೊರಗೆ ಅವರ ಪೋಸ್ಟರ್ ಹಾಕಲಾಗಿತ್ತು. ಹಾರ್ದಿಕ್ ಪಟೇಲ್ ಕೂಡ ಬಿಜೆಪಿ ಸೇರುವ ಮುನ್ನ ಬೆಳಗ್ಗೆ ಟ್ವೀಟ್ ಮಾಡಿದ್ದರು. ರಾಷ್ಟ್ರೀಯ ಹಿತಾಸಕ್ತಿ, ರಾಜ್ಯ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾಮಾಜಿಕ ಹಿತಾಸಕ್ತಿಗಳ ಭಾವನೆಗಳೊಂದಿಗೆ ನಾನು ಇಂದಿನಿಂದ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದೇನೆ ಎಂದು ಅವರು ಬರೆದಿದ್ದಾರೆ. ಭಾರತದ ಯಶಸ್ವಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಭಾಯಿ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕೆಲಸದಲ್ಲಿ ನಾನು ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.