Asianet Suvarna News Asianet Suvarna News

Pandit Genocide ಕಾಶ್ಮೀರ ಪಂಡಿತರ ಹತ್ಯೆಗೆ ನಾನು ಕಾರಣವಾದರೆ ಗಲ್ಲಿಗೇರಿಸಿ, ಬದಲಾಯ್ತು ಫಾರುಖ್ ಅಬ್ದುಲ್ಲಾ ವರಸೆ!

  • ಕಾಶ್ಮೀರ ಪಂಡಿತರ ನರಮೇಧ ಕುರಿತು ದೇಶದೆಲ್ಲೆಡೆ ಚರ್ಚೆ
  • ಕಾಶ್ಮೀರ್ ಫೈಲ್ಸ್ ಚಿತ್ರದ ಮೂಲಕ ಕರಾಳ ಘಟನೆ ಅನಾವರಣ
  • ಪಂಡಿತರ ಹತ್ಯೆಗೆ ನಾನು ಕಾರಣವಲ್ಲ, ಫಾರುಖ್ ಅಬ್ದುಲ್ಲಾ
Hang me if i responsible for Kashmir Pandit genocide says Farooq Abdullah ckm
Author
Bengaluru, First Published Mar 22, 2022, 8:24 PM IST

ನವದೆಹಲಿ(ಮಾ.22): ಕಾಶ್ಮೀರ ಪಂಡಿತರ ಮೇಲಿನ ನಡೆದ ಘನಘೋರ ಹತ್ಯಾಕಾಂಡ ಇದೀಗ ಭಾರಿ ಚರ್ಚೆಯಾಗುತ್ತಿದೆ. ದಿ ಕಾಶ್ಮೀರ ಫೈಲ್ಸ್ ಚಿತ್ರದ ಮೂಲಕ 32 ವರ್ಷಗಳ ಹಿಂದಿನ ಕರಾಳ ಘಟನೆ ಅನಾವರಣಗೊಂಡಿದೆ. ಇದೀಗ ಈ ಘಟನೆಗೆ ಮೂಲ ಕಾರಣ ಯಾರು? ಅನ್ನೋ ಮಾತುಗಳು ಜೋರಾಗುತ್ತಿದೆ. ಇದರ ನಡುವೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಹೆಸರು ಕೇಳಿಬರುತ್ತಿದೆ. ಇದೀಗ ಈ ಕುರಿತು ಸ್ವತಃ ಫಾರುಖ್ ಅಬ್ದುಲ್ಲಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪಂಡಿತರ ಹತ್ಯೆಗೆ ನಾನು ಕಾರಣವಾದರೆ ನನ್ನನ್ನು ಗಲ್ಲಿಗೇರಿಸಿ ಎಂದು ಫಾರೂಖ್ ಹೇಳಿದ್ದಾರೆ.

ಇಂಡಿಯಾ ಟುಡೆ ಇಂಗ್ಲೀಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಫಾರುಖ್ ಅಬ್ದುಲ್ಲಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯ ಅಗತ್ಯವಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಘಟನೆ ನಡೆದಿದೆ. ಜಮ್ಮು ಕಾಶ್ಮೀರ ಗರ್ವನರ್ ಆಡಳಿತದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ನಾನು ಕಾರಣವಲ್ಲ. ತನಿಖೆಯಲ್ಲಿ ನಾನು ಕಾರಣ ಎಂದಾದರೆ ನನ್ನನ್ನು ಗಲ್ಲಿಗೇರಿಸಿ ಎಂದು ಅಬ್ದುಲ್ಲಾ ಹೇಳಿದ್ದಾರೆ.

The Kashmir Files ಮೆಚ್ಚಿದ Aamir Khan ಟ್ರೋಲ್ ; PM Modiಯನ್ನು ಟೀಕಿಸುವ ನಟನ ಹಳೆಯ ವಿಡಿಯೋ ವೈರಲ್!

1990ರಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ಆಗಬೇಕು. ಇದು ಕೇವಲ ಪಂಡಿತರ ಮೇಲೆ ಮಾತ್ರವಲ್ಲ, ಮುಸ್ಲಿಮರು, ಸಿಖ್ ಸೇರಿದಂತೆ ಹಲವು ಸಮುದಾಯಗಳ ಮೇಲೆ ಹತ್ಯೆ ನಡೆದಿದೆ. ಆದರೆ ಕಾಶ್ಮೀರ ಫೈಲ್ಸ್ ಚಿತ್ರ ರಾಜಕೀಯ ದಾಳವಾಗಿದೆ. ಅದರಲ್ಲಿ ಸತ್ಯವಿಲ್ಲ ಎಂದಿದ್ದಾರೆ. 

ಕಾಶ್ಮೀರದಲ್ಲಿ ಪಂಡಿತರು ತಮ್ಮಿಷ್ಟದಂತೆ ಕಾಶ್ಮೀರ ತೊರೆದಿದ್ದಾರೆ ಎಂದು ಹೇಳಿದ್ದ ಫಾರುಖ್ ಅಬ್ದುಲ್ಲಾ ಇದೀಗ ವರಸೆ ಬದಲಿಸಿದ್ದಾರೆ. ಪಂಡಿತರು, ಸಿಖರ್, ಮುಸ್ಲಿಮರ ಹತ್ಯೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. 

ಸೂರ್ಯವಂಶಿ, ಸ್ಪೈಡರ್ ಮ್ಯಾನ್ ಚಿತ್ರಗಳ ದಾಖಲೆ ಮುರಿದ ಕಾಶ್ಮೀರ್ ಫೈಲ್ಸ್; ಕಲೆಕ್ಷನ್ ಮಾಹಿತಿ ಇಲ್ಲಿದೆ

ಕಾಶ್ಮೀರ್‌ ಫೈಲ್ಸ್‌ ಸತ್ಯಾಧರಿತ: ವಿವೇಕ್‌ ಅಗ್ನಿಹೋತ್ರಿ
ಕಾಶ್ಮೀರ್‌ ಫೈಲ್ಸ್‌ ಸತ್ಯ ಘಟನೆಗಳನ್ನು ಆಧರಿಸಿದ್ದು, ಚಲನಚಿತ್ರದ ಕುರಿತು ಅನಗತ್ಯವಾಗಿ ವಿವಾದವನ್ನು ಹುಟ್ಟುಹಾಕಲಾಗುತ್ತಿದೆ ಎಂದು ನಿರ್ದೇಶಕ ವಿವೇಕ ಅಗ್ನಿಹೋತ್ರಿ ಭಾನುವಾರ ಕಿಡಿಕಾರಿದ್ದಾರೆ. ‘ಕೆಲವು ಗುಂಪುಗಳು ಕಾಶ್ಮೀರದ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದವು. ಇದಕ್ಕೆ ಕಡಿವಾಣ ಹಾಕಲು ಚಿತ್ರವು ಪ್ರಯತ್ನಿಸಿದೆ. ಇದರಿಂದ ಕೆರಳಿದ ಈ ಗುಂಪುಗಳೇ ಈಗ ಚಿತ್ರದ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುತ್ತಿವೆ. ಸಮುದಾಯದಲ್ಲಿ ಉಗ್ರವಾದ ಪ್ರವೇಶಿಸಿದಾಗ, ಸಮುದಾಯವರೂ ಅದಕ್ಕೆ ಸೈದ್ಧಾಂತಿಕ ಬೆಂಬಲವನ್ನು ನೀಡಿದಾಗ ಇಂತಹ ವಿನಾಶ ಸಂಭವಿಸುತ್ತದೆ ಎಂಬ ಸಂದೇಶವನ್ನು ಚಿತ್ರ ನೀಡಿದೆ’ ಎಂದು ವಿವೇಕ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಲು ವಿರೋಧಿಗಳಿಗೆ ಧೈರ್ಯ ಇಲ್ಲ. ಕಾಶ್ಮೀರ್‌ ಫೈಲ್ಸ್‌ ಚಿತ್ರ ವೀಕ್ಷಿಸಿದ ಬಳಿಕ ವಿರೋಧಿಸಿ ಎಂದು ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ. ಫಣೀಶ್‌ ಸವಾಲು ಹಾಕಿದರು. ನಗರದ ಸಿಪಾಯಿ ಗ್ರ್ಯಾಂಡ್‌ ಹೊಟೇಲ್‌ ಸಭಾಂಗಣದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿಯು ಸೋಮವಾರ ಏರ್ಪಡಿಸಿದ್ದ ಕಾಶ್ಮೀರ್‌ ಫೈಲ್ಸ್‌ ಚಿತ್ರ ಕುರಿತ ಸಂವಾದಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯವನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಈ ಚಿತ್ರದ ಕುರಿತು ರಾಜಕೀಯ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದರೂ ಸಾಮಾಜಿಕ ಮಾಧ್ಯಮಗಳು ಸತ್ಯವನ್ನು ಹೇಳಲು ಹೊರಟಿರುವುದರಿಂದ ಚಿತ್ರ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಪಡೆದುಕೊಳ್ಳುತ್ತಿದೆ ಎಂದರು.

ಕಾಶ್ಮೀರಿ ಪಂಡಿತರು ತಪ್ಪು ಮಾಡಿಲ್ಲ. ತಪ್ಪು ಮಾಡಲು ಬಯಸದೆ ತಮ್ಮ ಪಾಡಿಗೆ ಧಾರ್ಮಿಕ ವಿಚಾರಗಳಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಅತ್ಯಂತ ಕೆಟ್ಟಬದುಕನ್ನು ನಡೆಸಬೇಕಾಗಿದ್ದರಿಂದ ಬೇರೆ ಕಡೆಗೆ ಹೋಗಿದ್ದರು. ಈಗ ಅವರೆಲ್ಲರೂ ವಾಪಸ್‌ ಹೋಗಬೇಕು. ಈಗಾಗಲೇ ಆರು ಸಾವಿರಕ್ಕೂ ಮಂದಿ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಹಿಂತಿರುಗಿರುವ ಕಾರಣ ಉಳಿದವರು ವಾಪಸ್‌ ತೆರಳಬೇಕು ಎಂದು ಅವರು ಸಲಹೆ ನೀಡಿದರು.

Follow Us:
Download App:
  • android
  • ios