ತ್ವರಿತಗತಿಯಲ್ಲಿ ಹರಡುತ್ತಿದೆ H3N2 ವೈರಸ್, ಪುದುಚೇರಿಯ ಎಲ್ಲಾ ಶಾಲೆಗಳು ಬಂದ್!
ಕಳೆದ 3 ವರ್ಷಗಳಿಂದ ದೇಶ ವಿದೇಶದಲ್ಲಿ ವೈರಸ್ ಕಾಟ ತಪ್ಪುತ್ತಿಲ್ಲ. ಎಲ್ಲವೂ ನಿಯಂತ್ರಣದಲ್ಲಿದೆ ಅನ್ನೋ ಸ್ಥಿತಿ ತಲುಪುತ್ತಿದ್ದಂತೆ ಇದೀಗ H3N2 ವೈರಸ್ ಆತಂಕ ಭಾರತದಲ್ಲಿ ಹೆಚ್ಚಾಗಿದೆ. ಇದರ ಪರಿಣಾಮ ಪುದುಚೇರಿ ಕೇಂದ್ರಾಳಿತದ ಪ್ರದೇಶದ ಎಲ್ಲಾ ಶಾಳೆಗಳನ್ನು ಬಂದ್ ಮಾಡಲಾಗಿದೆ.
ಪುದುಚೇರಿ(ಮಾ.15): ಭಾರತದಲ್ಲಿ ಇದೀಗ H3N2 ವೈರಸ್ ತಲೆನೋವು ಹೆಚ್ಚಾಗಿದೆ. ಕರ್ನಾಟಕ ಸೇರಿದಂತೆ ಹಲವೆಡೆ H3N2 ವೈರಸ್ ಕೆಲವು ಬಲಿಪಡೆದುಕೊಂಡಿದೆ. ಇದರ ಜೊತೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದೆಡೆ ಉರಿ ಬಿಸಿಲು ಮತ್ತೊಂದೆಡೆ H3N2 ವೈರಸ್ ತೀವ್ರ ತಲೆನೋವು ತಂದಿದೆ. ಇದೀಗ ಪುದುಚೇರಿಯಲ್ಲಿ H3N2 ಪ್ರಕರಣ ಹೆಚ್ಚಾಗುತ್ತಿದೆ. ಹಲವು ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆ. ಹೀಗಾಗಿ ಪುದುಚೇರಿ ಕೇಂದ್ರಾಡಳಿತ ಪ್ರದೇಶದ 1ರಿಂದ 8ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಬಂದ್ ಮಾಡಲಾಗಿದೆ. ಮಕ್ಕಳು ಸುರಕ್ಷಿತವಾಗಿ ಮನೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ 10 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪುದುಚೇರಿಯಲ್ಲಿ ದಿಢೀರ್ ಪ್ರಕರಣಗಳು ಏರಿಕೆಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಮಕ್ಕಳಲ್ಲಿ ಕಂಡು ಬಂದಿದೆ. ಶಾಲೆಗೆ ಆಗಮಿಸುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಾರ್ಚ್ 16 ರಿಂದ ಮಾರ್ಚ್ 26ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಪುದುಚೇರಿ ಶಿಕ್ಷಣ ಸಚಿವ ನಮಶಿವಾಯಂ ಹೇಳಿದ್ದಾರೆ.
ದೇಶಕ್ಕೆ ವೈರಸ್‌ಗಳ ಆಘಾತ: H3N2 ವೈರಸ್ ಜೊತೆಗೆ ಕೋವಿಡ್-19, ಹಂದಿಜ್ವರವೂ ಹೆಚ್ಚಳ
ಮಕ್ಕಳಲ್ಲಿ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಶಾಲೆಗೆ ಆಗಮಿಸುತ್ತಿರುವ ಹೆಚ್ಚಿನ ಮಕ್ಕಳು ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಇತ್ತ ಹಲವು ಮಕ್ಕಳು ಜ್ವರ, ಶೀತ, ಕೆಮ್ಮು ಕಾರಣದಿಂದ ಗೈರಾಗುತ್ತಿದ್ದಾರೆ. ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಅನಿವಾರ್ಯವಾಗಿ ರಜೆ ಘೋಷಿಸಲಾಗಿದೆ. ಮುಂದಿನ 10 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ, ಮಕ್ಕಳ ಆರೋಗ್ಯ ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಕಳೆದ ವಾರ ಭಾರತದಲ್ಲಿ ದಿಢೀರ್ H3N2 ಪ್ರಕರಣ ಹೆಚ್ಚಾಗಿದೆ. ಮಾರ್ಚ್ 3 ರಿಂದ 5ರವರೆಗೆ 451 ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಅಹಮ್ಮದ್ ನಗರದಲಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿ H3N2 ವೈರಸ್‌ಗೆ ಬಲಿಯಾಗಿದ್ದಾರೆ. ಇದು ಮಹಾರಾಷ್ಟ್ರದಲ್ಲಿ H3N2 ವೈರಸ್‌ಗೆ ಬಲಿಯಾದ ಮೊದಲ ಪ್ರಕರಣವಾಗಿದೆ. ಗುಜರಾತ್‌ನ ವಡೋದರಲ್ಲೂ ಮೊದಲ ಬಲಿಯಾಗಿದೆ. ಇತ್ತೀಚೆಗೆ ಕರ್ನಾಟಕದ ಹಾಸನದಲ್ಲಿನ 82 ವರ್ಷದ ವ್ಯಕ್ತಿ H3N2 ವೈರಸ್‌ಗೆ ಬಲಿಯಾಗಿದ್ದರು. ಭಾರತದಲ್ಲಿ ಇದುವರೆಗೆ H3N2 ವೈರಸ್‌ಗೆ 9 ಮಂದಿ ಬಲಿಯಾಗಿದ್ದಾರೆ.
6 ತಿಂಗಳಲ್ಲಿ ಎಚ್3ಎನ್2 ವೈರಸ್ ಹೊಸ ಹೊಸ ರೂಪದಲ್ಲಿ ಪ್ರತ್ಯಕ್ಷ: ರೂಪಾಂತರದ ಕಾರಣದಿಂದ ಹೆಚ್ಚು ಮಾರಕ ಎಂದ ತಜ್ಞರು
‘ಕಳೆದ 6 ತಿಂಗಳ ಅವಧಿಯಲ್ಲಿ ವೈರಸ್‌ನ ಮಾದರಿಯು ಗಮನಾರ್ಹವಾಗಿ ಮತ್ತು ಅನಿರೀಕ್ಷಿತವಾಗಿ ಬದಲಾಗಿದೆ. ಸಾಮಾನ್ಯವಾಗಿ, ಇನ್‌ಫ್ಲುಯೆಂಜಾವನ್ನು ಆಸ್ಪತ್ರೆಗೆ ಕಾರಣವಾಗುವ ನಂ.1 ವೈರಸ್ ಎಂದು ನಾವು ನಿರೀಕ್ಷಿಸುತ್ತೇವೆ. ಈ ಬಾರಿ ಎಚ್3ಎನ್2 ಎಂಬ ವೈರಸ್ ಉಪತಳಿಯು ಬಹಳಷ್ಟುಉಸಿರಾಟದ ಸೋಂಕುಗಳಿಗೆ ಕಾರಣವಾಗಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.ಎಚ್3ಎನ್2 ವೈರಸ್ ಸಾಮಾನ್ಯವಾಗಿ ಹಂದಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ಮಾನವರಿಗೂ ಇದು ವ್ಯಾಪಿಸಿದೆ. ಈ ವೈರಸ್‌ಗಳು ಜನರಿಗೆ ಸೋಂಕು ತಗುಲಿಸಿದಾಗ ಅವುಗಳನ್ನು ವೇರಿಯಂಟ್ ವೈರಸ್‌ಗಳು ಎಂದು ಕರೆಯಲಾಗುತ್ತದೆ.ಲ್ಲದೇ ಈ ಕುರಿತು ನಿಗಾ ವಹಿಸಲಾಗಿದ್ದು ಸೋಂಕು ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಈ ಸೋಂಕು ಹಂದಿಗಳಲ್ಲಿ ಕಾಣಿಸಿಕೊಳ್ಳುವುದಾಗಿದ್ದು ಮಾನವರಿಗೆ ತಗುಲಿದೆ. ಸಾಮಾನ್ಯ ಋುತುಮಾನದ ಶೀತ, ಜ್ವರ ದಂತಹ ಲಕ್ಷಣಗಳನ್ನು ಹೊಂದಿರುತ್ತದೆ.