'ಕಾಶಿ ಮಸೀದಿ ತೆರವು ಮಾಡುತ್ತೇವೆ'!

ಕಾಶಿ ಮಸೀದಿ ತೆರವು ಮಾಡುತ್ತೇವೆ: ಬಿಜೆಪಿ ಶಾಸಕ| ಈ ಜಾಗದಲ್ಲಿ ಭವ್ಯ ಶಿವ ಮಂದಿರ| ಹಿಂದೂ ರಾಷ್ಟ್ರ ನಿರ್ಮಾಣ

Gyanwapi mosque will be removed BJP MLA Surendra Singh backs Varanasi court order pod

ಬಲಿಯಾ (ಏ.10): ಕಾಶಿಯ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡ ‘ಜ್ಞಾನವಾಪಿ ಮಸೀದಿ’ ಜಾಗದಲ್ಲಿ ಈ ಹಿಂದೆ ಮಂದಿರ ಇತ್ತೇ ಎಂಬುದರ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ(ಎಎಸ್‌ಐ)ಗೆ ನ್ಯಾಯಾಲಯ ಸೂಚಿಸಿದ ಬೆನ್ನಲ್ಲೇ, ‘ಈ ಮಸೀದಿಯನ್ನು ತೆರವುಗೊಳಿಸಲಾಗುತ್ತದೆ. ಆ ಜಾಗದಲ್ಲಿ ಭವ್ಯ ಶಿವನ ಮಂದಿರ ನಿರ್ಮಿಸಲಾಗುತ್ತದೆ’ ಎಂದು ಬಿಜೆಪಿಯ ವಿವಾದಿತ ಶಾಸಕ ಸುರೇಂದ್ರ ಸಿಂಗ್‌ ಹೇಳಿದ್ದಾರೆ.

"

ಶುಕ್ರವಾರ ಮಾತನಾಡಿದ ಸಿಂಗ್‌, ‘ಎಎಸ್‌ಐ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಬೇಕೆಂದು ವಾರಾಣಸಿ ಕೋರ್ಟ್‌ ನೀಡಿದ ಸೂಚನೆಯನ್ನು ಸ್ವಾಗತಿಸುತ್ತೇನೆ. ಇದು ಹಿಂದೂಗಳ ಸಬಲೀಕರಣದ ಯುಗವಾಗಿದೆ. ಸಮಸ್ಯೆಗಳನ್ನು ಬಗೆಹರಿಸಿಕೊಂಡು ಭಾರತ ಹಿಂದೂ ರಾಷ್ಟ್ರವಾಗಲಿದೆ’ ಎಂದರು.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಭಾರತ ಹಿಂದು ರಾಷ್ಟ್ರವಾಗುವ ಕನಸು ನನಸಾಗಲಿದೆ ಅಂದಿದ್ದಾರೆ.

Latest Videos
Follow Us:
Download App:
  • android
  • ios